ನೌಕರರಿಗೆ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಚಳುವಳಿ

ಲೋಕದರ್ಶನವರದಿ

ರಾಣೇಬೆನ್ನೂರ05: ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ನೌಕರರಿಗೆ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಕನರ್ಾಟಕ ರಾಜ್ಯ ಅನುದಾನಿತ ಪಿಂಚಣಿ ವಂಚಿತ ನೌಕರರ ಸಂಘದಿಂದ ಹಲವಾರು ಹೋರಾಟಗಳನ್ನು ನಡೆಸಿದರೂ ಸಹ ಸ್ಪಂದಿಸದ ಸರಕಾರದ ನಡೆಯನ್ನು ಖಂಡಿಸಿ ಮುಂಬರುವ ಮಳೆಗಾಲದ ಅಧಿವೇಶನದ ಸಂದರ್ಭದಲ್ಲಿ ಬೆಂಗಳೂರು ಚಲೋ ಚಳುವಳಿ ಕೈಗೊಂಡು ಅಹೋರಾತ್ರಿ ಹೋರಾಟ ಮತ್ತು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಕನರ್ಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣೆ ವಂಚಿತ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ.ಹನುಮಂತಪ್ಪ ಹೇಳಿದರು.

  ಅವರು ರವಿವಾರ ನಗರದ ಬಿ.ಎ.ಜೆ.ಎಸ್.ಎಸ್ ಮಹಿಳಾ ಪದವಿ ಕಾಲೇಜಿನ ಸಭಾ ಭವನದಲ್ಲಿ ನಡೆದ  ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಇಡೀ ದೇಶದಲ್ಲಿ ಎಲ್ಲಿಯೂ ಇಲ್ಲದೆ, ಕೇವಲ ಕನರ್ಾಟಕದಲ್ಲಿ ಮಾತ್ರ ಅನುದಾನಿತ ನೌಕರರು ಮತ್ತು ಸರಕಾರಿ ನೌಕರರು ಎಂಬ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ವಿಷಾಧಿಸಿದರು.

   ಬೆರಳೆಣಿಕೆಯಷ್ಟು ವರ್ಷ ಮಾತ್ರ ವೇತನ ಪಡೆದು ಈಗ ಬರಿಗೈಲಿ ನಿವೃತ್ತರಾದ ಸಾವಿರಾರು ನೌಕರರು ಮತ್ತು ಅವರ ಕುಟುಂಬ ವರ್ಗದವರು ಕಣ್ಣಿರಲ್ಲಿ ಕೈ ತೊಳೆಯುತ್ತಿದ್ದಾರೆ. ಸರಕಾರ ಮಾಡುತ್ತಿರುವ ಈ ಘೋರ ಅನ್ಯಾಯ ಖಂಡಿಸಿ ಬೆಂಗಳೂರಿನ ಪ್ರೀಡಂ ಪಾರ್ಕ ಸೇರಿದಂತೆ ರಾಜ್ಯದ ನಾನಾ ಕಡೆ ಹಲವಾರು ಹೋರಾಟಗಳನ್ನು ಮಾಡಿ ಗಮನ ಸೆಳೆದರು ಕೂಡ ಜನ ಪ್ರತಿನಿಧಿಗಳು, ಅಧಿಕಾರಿಗಳು ರಾಕ್ಷಸಿ ಗುಣದಂತೆ ವತರ್ಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈಗಾಗಲೇ ಸುಮಾರು 2000 ಸಾವಿರದಷ್ಟು ಅನುದಾನಿತ ನೌಕರರು ನಿವೃತ್ತಿ ಹೊಂದಿ ಕಷ್ಟದ ಜೀವನ ಕಳೆಯುತ್ತಿದ್ದಾರೆ. ಸದ್ಯ 60ಸಾವಿರ ನೌಕರರು ಸಂಘದಲ್ಲಿ ನೊಂದಣೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

  ಹಲವು ನೌಕರರ ಅಕಾಲಿಕ ಮರಣದಿಂದ ಅವರ ಕುಟುಂಬಗಳ ಸ್ಥಿತಿ ಚಿಂತಾಜನಕವಾಗಿದೆ. ಆದ್ದರಿಂದ ಸರಕಾರ ಪಿಂಚಣಿ ವಿಷಯವಾಗಿ ಸ್ಪಷ್ಟ ನಿಧರ್ಾರಕ್ಕೆ ಬರುವವರೆಗೂ ನಿರಂತರ ಹೋರಾಟ ನಿಲ್ಲಿಸುವುದಿಲ್ಲ ಎಂದರು.

   ಶಿಕ್ಷಕರ ಸಂಘಟನೆಗಳ ಮುಖಂಡ ಡಾ.ಆರ್.ಎಂ.ಕುಬೇರಪ್ಪ, ಸಂಘದ ಗೌರವಾಧ್ಯಕ್ಷ ಆರ್.ಎ.ಸನದಿ, ರಾಜ್ಯ ಕಾರ್ಯದಶರ್ಿ ಶಿವಲಿಂಗಪ್ಪ ಕಟ್ಟೊಳ್ಳಿ, ಬಿ.ಜಿ.ಕೊರಗ, ವಿರುಪಾಕ್ಷಪ್ಪ ಮಂತ್ರೋಡಿ, ಮುತ್ತುರಾಜ ಮತ್ತಿಕೊಪ್ಪ, ರಾಕೇಶ ಜಿಗಳಿ, ಸುನೀಲ ಮಲಾಗಾವೆ, ಎಮ್.ವೈ.ಬತ್ತದ, ನಿಂಗಪ್ಪ ಸಂದ್ಯಾಳ  ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.