ಲೋಕದರ್ಶನ ವರದಿ
ಮಹಾಲಿಂಗಪುರ 21: ಸ್ಥಳೀಯ ಸರಕಾರಿ ಪ್ರೌಢ ಶಾಲೆಯಲ್ಲಿ ದಿ. 19 ರಂದು 2017-18 ರ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯಿಂದ 8 ನೇ ತರಗತಿಯ ವಿದ್ಯಾಥರ್ಿ/ನಿಯರಿಗೆ ಉಚಿತವಾಗಿ ಸೈಕಲ್ ವಿತರಿಸಲಾಯಿತು.
ಈ ಕಾರ್ಯಕ್ರಮಕ್ಕೆ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಕ. ಸವದಿ ಆಗಮಿಸಿ ವಿದ್ಯಾಥರ್ಿಗಳಿಗೆ ಶಾಲೆಗೆ ಸರಿಯಾದ ವೇಳೆಗೆ ಆಗಮಿಸಿ ಸುಗಮ ವಿದ್ಯಾಭ್ಯಾಸ ಮಾಡಲು ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸರಕಾರ ಮಾಡಿದೆ. ಹಾಗೂ ವಿದ್ಯಾಥರ್ಿ/ನಿಯರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಉಜ್ವಲ ಭವಿಷ್ಯ ನಿಮರ್ಿಸಿಕೊಳ್ಳಬೇಕೆಂದರು.
ಮುಧೋಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವ್ಹಿ. ವಾಯ್. ದೇವನಗಾಂವ ಇವರು ಶಾಲೆಯ ಅಭಿವೃದ್ಧಿ ಕಾರ್ಯಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯಿಂದ ಸಹಾಯವನ್ನು ಪಡೆಯುವದಕ್ಕಾಗಿ ತಮ್ಮ ಜೊತೆ ನಾನು ಸದಾ ಸಿದ್ಧನಾಗಿದ್ದೇನೆ. ಆದ್ದರಿಂದ ತಾವುಗಳು ಶಿಕ್ಷಣ ಇಲಾಖೆಯಿಂದ ಹೆಚ್ಚಿನ ಪ್ರಮಾಣದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿ.ಆರ್.ಪಿ. ಎಸ್. ಎಮ್. ಬ್ಯಾಳಿ, ಪ್ರಾಚಾರ್ಯರಾದ ಎಸ್. ವಾಯ್. ರಾಠೋಡ, ಪ್ರಾಂಶುಪಾಲರಾದ ಬಾಗವಾನ ಸರ್, ಎಸ್.ಡಿ.ಎಮ್.ಸಿ. ಅಧ್ಯಕ್ಷ ಪಾಪಾ ನಾಲಬಂದ ಹಾಗೂ ಸರ್ವ ಸದಸ್ಯರು, ಶಾಲೆಯ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗ, ಸ್ಥಳೀಯ ಮುಖಂಡರಾದ ಬಸನಗೌಡ ಪಾಟೀಲ, ಶೇಖರ ಅಂಗಡಿ, ಲಕ್ಕಪ್ಪ ಚಮಕೇರಿ, ಚನಬಸು ಹುರಕಡ್ಲಿ, ಸವಿತಾ ಕೋಳಿಗುಡ್ಡ, ಬಸು ಯರಗಟ್ಟಿ, ಮನೋಹರ ಶಿರೋಳ, ಚನ್ನಪ್ಪ ರಾಮೋಜಿ, ಶ್ರೀಮಂತ ಹಳ್ಳಿ, ಸಿದ್ದಪ್ಪ ಶಿರೋಳ, ಹನಮಂತ ಜಮಾದಾರ, ಅಶೋಕ ಅಂಕುಶಿ, ಈರಪ್ಪ ಚುನಮರಿ, ಮಹಾಲಿಂಗ ಮುದ್ದಾಪೂರ, ವಿರೇಶ ಮುಂಡಗನೂರ, ಗುರುಪಾದ ಅಂಬಿ ಹಾಗೂ ಹಲವರು ಉಪಸ್ಥಿತರಿದ್ದರು.