ಕಡಿಮೆ ಖಚರ್ಿನಲ್ಲಿ ಹೆಚ್ಚು ಈರುಳ್ಳಿ ಬೆಳೆಯಬಹುದು: ಡಾ.ನೇಗಳೂರ

ಇಂಡಿ 21: ಈರುಳ್ಳಿ ಅತ್ಯಂತ ಆಥರ್ಿಕವಾದ ರೈತರ ಮುಖ್ಯ ಬೆಲೆಬಾಳುವ ಬೆಳೆಯಾಗಿದೆ. ಈ ಬೆಳೆಗೆ ಅತಿ ಖಚರ್ು ವೆಚ್ಚು ಕಡಿಮೆ ತಗಲುವದಲ್ಲದೆ, ಕಡಿಮೆ ಮಳೆ ಬಂದರೂ ಸಹಿತ ಇಳುವರಿ ಪಡೆಯಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಆರ್.ಬಿ.ನೇಗಳೂರ ಹೇಳಿದರು.

ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಏರ್ಪಡಿಸಿದ ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ, ಇಂಡಿ. ಇವರ ವತಿಯಿಂದ "ಈರುಳ್ಳಿ ಬೆಳೆಯ ಕ್ಷೇತ್ರೋತ್ಸವ" ಕಾರ್ಯಕ್ರಮದಲ್ಲಿ ಮಾತನಾಡಿದರು. 

ಕೃಷಿಯಲ್ಲಿ ಯಶಸ್ಸು ಕಾಣಲು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಿ, ಹೊಸ ತಳಿಗಳ ಆಯ್ಕೆ ಮತ್ತು ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸಿ ಈರುಳ್ಳಿ ಬೆಳೆಯ ತಳಿಯಾದ ಭೀಮಾ ಸೂಪರ್ ಒಂದು ಉತ್ತಮ ಮುಂಗಾರು ತಳಿಯಾಗಿದ್ದು, ಮತ್ತು ತಡವಾದ ಮುಂಗಾರಿನಲ್ಲೂ ಕೂಡ ಬೆಳೆಯಬಹುದು. ಇದು ಮುಂಗಾರಿನಲ್ಲಿ ಸುಮಾರು 26ಟನ್/ಹೆ. ಮತ್ತು ತಡವಾದ ಮುಂಗಾರಿನಲ್ಲಿ 40-45 ಟನ್/ಹೆ. ಇಳುವರಿ ಕೊಡುತ್ತದೆ. ಉತ್ತಮ ದಜರ್ೆಯ ಗಡ್ಡೆಗಳ ಜೊತೆಗೆ ಏಕ ಸುಳಿಯ ಗಡ್ಡೆಯಾಗಿರುತ್ತದೆ ಎಂದು ಸಂಪೂರ್ಣ ಮಾಹಿತಿ ನೀಡಿದರು. ಕೃಷಿ ಲಾಭದಾಯಕವಾಗಬೇಕಾದರೆ, ಉಪ ಕಸುಬುಗಳಾದ ಮೀನು, ಕುರಿ ಮತ್ತು ಕೋಳಿ ಸಾಕಾಣಿಕೆಯನ್ನು ಅಳವಡಿಸಿಕೊಳ್ಳಿ ಎಂದು ರೈತರಿಗೆ ಹೇಳಿದ ಅವರು ಇಂತಹ ಕಾರ್ಯಕ್ರಮಗಳಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಜ್ಞಾನಿಗಳಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕು ಮತ್ತು ಕೃಷಿ ವಿಜ್ಞಾನ ಕೇಂದ್ರ, ಇಂಡಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಗುಲಾಬಿ ಬಣ್ಣದ ಗಡ್ಡೆಗಳು, ರೋಗ ಬಾದೆ ಕಡೆಮೆ ಹೆಚ್ಚಿನ ಇಳುವರಿ ನೀಡಿದೆ ಮತ್ತು ಮಾರುಕಟ್ಟೆಯಲ್ಲಿ ಅಧಿಕ ಬೆಲೆಗೆ ಮಾರಾಟವಾಗುತ್ತಿದೆ. ಎಂದು ತಮ್ಮ ಅನಿಸಿಕೆಯನ್ನು ಡಾ.ಸಂತೋಷ ಶಿಂಧೆ ರೈತರಿಗೆ ತಿಳಿಸಿದರು. 

ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷ ಜಟ್ಟೆಪ್ಪ ಮರಡಿ, ಡಾ. ಸಂತೋಷ ಶಿಂದೆ, ಡಾ.ಆರ್.ಬಿ.ನೆಗಳೂರ್, ರಮೇಶ ಮರಡಿ ಹಾಗೂ ಸಾಲೋಟಗಿ, ತಾಂಬಾ, ಮಸಳಿ, ಬೋಳೆಗಾಂವ ಸೇರಿದಂತೆ ಅನೇಕ ಗ್ರಾಮಗಳ ರೈತರು ಕಾರ್ಯಕ್ರಮದಲ್ಲಿ ಭಾಗಿಯಾದರು.