ಮೂಲಭೂತ ಸೌಕರ್ಯಕ್ಕಾಗಿ ಹೆಚ್ಚಿನ ಅನುದಾನ: ಸಂಸದ ಜೊಲ್ಲೆ

ಲೋಕದರ್ಶನ ವರದಿ

ಮಾಂಜರಿ 03:  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ರಸ್ತೆ ನಿಮರ್ಾಣ ಹಾಗೂ ಮೂಲಭೂತ ಸೌಕರ್ಯಕ್ಕಾಗಿ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ಸಂಸದ ಅಣ್ಣಾಸಾಹೇಬ ಜೋಲ್ಲೆ ಹೇಳಿದರು.

ಚಿಕ್ಕೋಡಿ ತಾಲೂಕಿನ ವಡಗೋಲ ಗ್ರಾಮದಲ್ಲಿ ಸೋಮವಾರ ರಸ್ತೆ ನಿಮರ್ಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕನರ್ಾಟಕ ನೀರಾವರಿ ನಿಗಮದಿಂದ ವಡಗೋಲ ಗ್ರಾಮದಲ್ಲಿ 40 ಲಕ್ಷ ರೂಗಳಲ್ಲಿ 1.5 ಕೀ.ಮೀ ರಸ್ತೆ ನಿಮರ್ಾಣ ಮಾಡಲಾಗುವದು. ಕೇರೂರ ಗ್ರಾಮದಲ್ಲಿ 60 ಲಕ್ಷ, ಖಡಕಲಾಟ ಗ್ರಾಮದಲ್ಲಿ 1 ಕೋಟಿ, ವೆಚ್ಚದಲ್ಲಿ ರಸ್ತೆ ನಿಮರ್ಾಣ ಮಾಡಲಾಗುವದು ಎಂದರು. ಸಂಸದನಾದ ನಂತರ ಮೊದಲ ಬಾರಿಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುವದು ಎಂದರು. ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಗುಣಮಟ್ಟದ ರಸ್ತೆ ನಿಮರ್ಾಣ ಮಾಡುವಂತೆ ಅವರು ಸೂಚನೆ ನೀಡಿದರು. ಚಿಕ್ಕೋಡಿ ಲೊಕಸಭಾ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಹಾಗೂ ನೀರಾವರಿ,ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ  ಮಾದರಿ ಕ್ಷೇತ್ರ ಮಾಡಲು ಕ್ರಮಕೈಗೊಳ್ಳಲಾಗುವದು ಎಂದು ಅವರು ಭರವಸೆ ನೀಡಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದರು. 

ಈ ಸಂದರ್ಭದಲ್ಲಿ ಬಾಳಗೌಡ ರೇಂದಾಳೆ,ಸಿದ್ರಾಮ ಗಡದೇ,ಹರೀಶ ಇನಾಮದಾರ, ಬಾಬಾಸಾಹೇಬ ಕೆಂಚನ್ನವರ, ಅರುಣ ಧನವಡೆ, ಸಾಗರ ಕಾಗವಾಡೆ, ಕೆ.ಜಿ.ಪಾಟೀಲ, ಅಶೋಕ ಜಗದಾಳೆ, ದುಂಡಪ್ಪಾ ಹಿಂಗ್ಲೇಜಿ, ಎಂ.ಎ.ಪಾಟೀಲ, ಎಸ್.ಎಸ್.ಖೋತ,ರಾಜು ರೇಂದಾಳೆ, ದುಂಡಪ್ಪಾ ಖಿನ್ನವರ, ಸದಾಶಿವ ಲಠ್ಠೆ, ಪ್ರಕಾಶ ಗೋಪಾಲಗೋಳ, ಸಿದ್ದಪ್ಪಾ ಮುಂಡೆ ಮುಂತಾದವರು ಇದ್ದರು.