ಸೇವೆಸಲ್ಲಿಸುವ ಭಕ್ತರಿದ್ದಾಗ ಮಾತ್ರ ಮಠಗಳು ಅಭಿವೃದ್ಧಿ ಹೊಂದಲು ಸಾಧ್ಯ: ದಿಂಗಾಲೇಶ್ವರ

ಲೋಕದರ್ಶನ ವರದಿ

ಶಿಗ್ಗಾವಿ 26:  ಜ್ಞಾನಿ ಸ್ವಾಮೀಜಿ, ನಿಸ್ವಾರ್ಥ ಸೇವೆಸಲ್ಲಿಸುವ ಭಕ್ತರಿದ್ದಾಗ ಮಾತ್ರ ಮಠ, ಮಾನ್ಯಗಳು ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮಿಗಳು ಹೇಳಿದರು. 

      ಪಟ್ಟಣದ ಸುಂಕದಕೇರಿಯಲ್ಲಿರುವ ಗುರು ಬಸವೇಶ್ವರ ತಪೋವನ ದೇಸಾಯಿಮಠದ ಆವರಣದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮ, ಬಸವೇಶ್ವರರ ನೂತನ ಮೂತರ್ಿ ಅನಾವರಣದ ಅಂಗವಾಗಿ ನಡೆದ ಧರ್ಮ ಸಮಾರಂಭವನ್ನುದ್ದೇಸಿಸಿ ಮಾತನಾಡಿದ ಅವರು ಮಠದ ಸ್ವಾಮಿಗಳು ಅಜ್ಞಾನಿಗಳಾಗುತ್ತಿರುವದರಿಂದ ಸ್ವಾಥರ್ಿ ಭಕ್ತರು ಹುಟ್ಟಿ ಮಠ ಮಾನ್ಯಗಳ ಹೇಸರುಗಳನ್ನು ಹಾಳುಮಾಡುತ್ತಿರುವದು ವಿಷಾದದಸಂಗತಿ. ಮಠಾದೀಶರು ಜಾತಿ, ರಾಜಕೀಯವನ್ನು ಮೇಟ್ಟಿ ನಿಂತು ಮಾನವ ಧರ್ಮಕ್ಕೆ ಜಯವಾಗಲಿ ಎಂಬ ತತ್ವದಡಿ ಮುನ್ನಡೆದಾಗ ಮಾತ್ರ ಮಠ ಮಾನ್ಯಗಳ ಹೇಸರುಗಳು ಸರ್ವ ಜನಾಂಗದವರ ಹೃದಯದಲ್ಲಿ ನೆಲೆಯೂರಲಿವೆ ಎಂದು ಹೇಳಿದರು.

     ಬಸವಣ್ಣನವರು 12 ನೇ ಶತಮಾನದಲ್ಲಿಯೇ ಸ್ತ್ರೀ, ಪುರುಷರಲ್ಲಿ ಸಮಾನತೆ ತರಲು ಶ್ರಮಿಸಿದವರಾಗಿದ್ದರು. ಅಂತರ್ಜಾತಿ ವಿವಾಹ ಮಾಡಿ ಜಾತಿ ವ್ಯವಸ್ಥೆಯನ್ನು ನಿಮರ್ೂಲನೆ ಮಾಡಲು ಶ್ರಮಿಸಿದ ಚಿಂತನಾಶಿಲ ವ್ಯಕ್ತಿಗಳಾಗಿದ್ದರು. ಇತ್ತಿಚಿನ ದಿನಗಳಲ್ಲಿ ಶರಣರ, ಕವಿ, ಸಾಹಿತಿ, ಸಂತರು ರಚಿಸಿದ ವಚನ ಸಾಹಿತ್ಯವನ್ನು ತಮಗೆ ಬೇಕಾದಹಾಗೆ ಬದಲಿಸಿಕೊಳ್ಳುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡೆಸಿದರು.

     ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ ಸತ್ಯ ಭಕ್ತಿಯ ಸಂಕೇತವೇ ಬಸವಣ್ಣನವರಾಗಿದ್ದರು. ಉತ್ಕೃಷ್ಠವಾದ ಪ್ರೀತಿಯೆ ಭಕ್ತಿ ಎಂದು ತೊರಿಸಿಕೊಟ್ಟ ಮಹಾ ಛೇತನರಾಗಿದ್ದರು. ಅವರು ರಚಿಸಿದ ತತ್ವ ಸಿದ್ದಾಂತಗಳು ಇಂದಿಗು ಕೂಡಾ ಪ್ರಸ್ತುತವಾಗಿವೆ ಎಂದು ಹೇಳೀದರು.

     ಶ್ರೀಮಠದ ಎದುರಿಗೆ ಇರುವ ಪುರಾತನವಾದ ಅಯ್ಯನಹೊಂಡವನ್ನು ಅಭಿವೃದ್ಧಿ ಪಡೆಸಿ ವರದಾ ನದಿಯ ನೀರನ್ನು ಹರಿಸಿ ತುಂಬಿಸಿ ಸಾರ್ವಜನಿಕರಿಗೆ ಅನಕೂಲ ಮಾಡಿಕೊಡಲಾಗವದು ಎಂದು ಬರವಸೆ ನೀಡಿದರು.

     ಭರತ ಸೇವಾ ಸಂಸ್ಥೆಯ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ ಬಂಕಾಪುರಕ್ಕೆ ಮತ್ತೊಂದು ಹೇಸರೇ ಭಕ್ತಿಪುರವಾಗಿದೆ. 

   ಸತತ ಇಲ್ಲಿ ನಡೆಯುವ ಒಂದಿಲ್ಲೊಂದು ಧರ್ಮ ಕಾರ್ಯಕ್ರಮಗಳಿಂದ ಇಲ್ಲಿನ ಜನರು ಧರ್ಮದ ದಾರಿಯಲ್ಲಿ ನಡೆಯುವಂತಾಗಿದೆ. ಬಸವಣ್ಣನವರ ಕಾಯಕವೇ ಕೈಲಾಸ ಎಂಬ ನುಡಿ ಈ ಹಿಂದೆ, ಮುಂದೆಯೂ ಸೂರ್ಯ ಚಂದ್ರಾದಿಗಳಿರುವವರೆಗೂ ಪ್ರಸ್ತುತವಾಗಿರಲಿದೆ ಎಂದು ಹೇಳಿದರು.

   ಸಭೆಯಲ್ಲಿ ತೋಟಪ್ಪ ಉತ್ತಂಗಿ ಸಂಗಡಿಗರಿಂದ ಸಂಗೀತ ಸೇವೆ ನಡೆಯಿತು. ದೇಸಾಯಿಮಠದ ಮಹಾಂತಸ್ವಾಮಿಗಳು, ಸವಣೂರ ವಿಧ್ಯಾಭಾರತಿ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಮೋಹನ ಮೇಣಸಿನಕಾಯಿ ಮಾತನಾಡಿದರು.

  ಸದಾಶಿವಪೇಟೆ ಗದಿಗೇಶ್ವರ ಶ್ರೀಗಳು, ಕ.ಸಾ.ಪ. ಪ್ರಭು ಅರಗೋಳ, ಕ.ರ.ವೇ. ಹರೀಷ ಕ್ಷೌರದ, ರಾಮಣ್ಣ ರಾನೋಜಿ, ಹೊನ್ನಪ್ಪ ಹುಗಾರ, ಬಸವರಾಜ ದೇಸಾಯಿ, ಹುಚ್ಚಯ್ಯ ಹುಚ್ಚಯ್ಯನಮಠ, ಸುರೇಸಪ್ಪ ಹಂಡೆ, ಸಂಗಪ್ಪ ಹರವಿ, ಸಂಗಯ್ಯ ದೇಸಾಯಿಮಠ, ನಿಂಗನಗೌಡ ಪಾಟೀಲ, ಸಿದ್ದಲಿಂಗಪ್ಪ ಸಕ್ರಿ, ಚಂದ್ರಶೇಖರ ಅಂಕಲಕೋಟಿ, ರಾಘವೇಧ್ರ ಮೇಲಗಿರಿ, ದುರಗಪ್ಪ ಗಿಡ್ಡಣ್ಣವರ, ಡಿ.ಎನ್.ಕುಡಲ, ಪರಶುರಾಮ ನಿರೋಳ್ಳಿ, ಶಿವಾನಂದ ಎಲಿಗಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಸಿ.ಎನ್.ಪಾಟೀಲ ನಿರೂಪಿಸಿದರು.