ಧಾರವಾಡ ಜುಲೈ 17: ಇಲ್ಲಿನ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ವಾಹನ ಚಾಲಕರಾಗಿರುವ ಮಲ್ಲಿಕಾಜರ್ುನ್ ಕಂಪಲಿ ಹಾಗೂ ಮಂಜುಳಾ ದಂಪತಿಗಳ ಪುತ್ರ ಮಿಥುನ್ ಕಂಪಲಿ ನೀಟ್ ಪರೀಕ್ಷೆ ಮೂಲಕ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ವೈದ್ಯಕೀಯ ಪದವಿಗೆ ಪ್ರವೇಶಾವಕಾಶ ಪಡೆದಿದ್ದಾರೆ. ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪ್ರತಿಭಾವಂತ ವಿದ್ಯಾಥರ್ಿಯನ್ನು ಸನ್ಮಾನಿಸಿ ಗೌರವಿಸಿದರು.
ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿದರ್ೆಶಕರಾದ ಮಂಜುನಾಥ ಡೊಳ್ಳಿನ ಮಾತನಾಡಿ, ಕಠಿಣ ಪರಿಶ್ರಮ, ಸತತ ಅಧ್ಯಯನದಿಂದ ಸಾಮಾನ್ಯ ಕೋಟಾದಡಿ ಸಕರ್ಾರಿ ಕಾಲೇಜ್ನಲ್ಲಿ ವೈದ್ಯಕೀಯ ಸೀಟು ಪಡೆದಿರುವುದು ಮಹತ್ವದ ಸಾಧನೆಯಾಗಿದೆ. ತಂದೆ, ತಾಯಿಗಳು ಬಾಲ್ಯದಿಂದಲೂ ನೀಡಿದ ಶಿಕ್ಷಣ, ಸಂಸ್ಕಾರಗಳಿಂದ ಇದು ಸಾಧ್ಯವಾಗಿದೆ. ಕಿಮ್ಸ್ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ ಬಳಿಕ ಮಿಥುನ್ ಉನ್ನತ ಶಿಕ್ಷಣ ಪಡೆದು ಬಡವರು, ಸಾರ್ವಜನಿಕರ ಸೇವೆ ಮಾಡಲಿ ಎಂದು ಆಶಿಸಿದರು.
ಪತ್ರಕರ್ತ ಎನ್.ಎನ್. ಮೂತರ್ಿ ಪ್ಯಾಟಿ ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಾತರ್ಾ ಇಲಾಖೆಯ ಸುರೇಶ್ ಹಿರೇಮಠ, ಸಿ.ಬಿ. ಭೋವಿ, ಪವಿತ್ರಾ ಬಾರಕೇರ್, ಎಂ.ಎಸ್. ಪೆಂಡಾರಿ, ಸಂಗಪ್ಪ ಯರಗುದ್ದಿ, ಎ.ಎಚ್. ನದಾಫ್, ಶ್ಯಾಮ ತಳೆಕರ್ ಸೇರಿದಂತೆ ವಿವಿಧ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.