ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಮೆಂಟರ್ ಟುಗೇದರ ಅರೆಸರಕಾರಿ ಸಂಸ್ಥೆಯ ಕಾರ್ಯಕ್ರಮ
ಕಲಾದಗಿ 12 : ಇಲ್ಲಿಯ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಐಕ್ಯೂಎಸಿ, ಪ್ರೇರಣಾ ಹಾಗೂ ಉದ್ಯೋಗ ಕೋಶ, ಮೆಂಟರ್ ಟುಗೇದರ ಅರೆಸರಕಾರಿ ಸಂಸ್ಥೆ ಸಹಯೋಗದಲ್ಲಿ ವೃತ್ತಿ ಕೌಶಲ್ಯ ತರಬೇತಿ ಕಾರ್ಯಾಗಾರವು ದಿ. 12 ರಂದು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆಯಿತು.ಮೆಂಟರ್ ಟುಗೇದರ ಅರೆಸರಕಾರಿ ಸಂಸ್ಥೆಯ ಕಾರ್ಯಕ್ರಮ ಸಹಾಯಕರಾದ ಈರಣ್ಣ ಎಸ್. ಬಸಪ್ಪಗೋಳ ಮಾತನಾಡಿ, ಜೀವನದಲ್ಲಿ ಗುರಿ ಮುಟ್ಟಬೇಕಾದರೆ ಕೌಶಲ್ಯ ಅಗತ್ಯವಾಗಿದೆ. ಉತ್ತಮ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಸ್ಯೆ ಇತ್ಯರ್ಥವಾಗುತ್ತದೆ. ಮಾನಸಿಕ ಒತ್ತಡಗಳನ್ನು ತಮ್ಮ ಕೌಶಲ್ಯಗಳಿಂದ ನಿವಾರಿಸಿಕೊಳ್ಳಬಹುದು. ಐವತ್ತು ವರ್ಷಗಳ ಹಿಂದೆ ಉದ್ಯೋಗ ಸಲೀಸಾಗಿ ಸಿಗುತ್ತಿತ್ತು. ಈಗೀನ ಕಾಲದಲ್ಲಿ ಉದ್ಯೋಗ ಸಿಗುವದು ಕಷ್ಟವಾಗುತ್ತಿದೆ.ಉದ್ಯೋಗ ಪಡೆಯಲು ಯಾವ ಅರ್ಹತೆ ಮತ್ತು ಕೌಶಲ್ಯ ಹೊಂದಬೇಕು ಎನ್ನುವದು ಮುಖ್ಯವಾಗಿದೆ. ಉದ್ಯೋಗ ಪಡೆಯಲು ನಡೆಯುವ ಸಂದರ್ಶನಕ್ಕಾಗಿ ಭಾಷಾ ಕೌಶಲ್ಯ, ಸಮಯ ನಿರ್ವಹಣೆ, ಸಂವಹನ ಕೌಶಲ್ಯ, ಶಿಸ್ತು, ವಸ್ತ್ರ ಸಂಹಿತೆ ಪಾಲಿಸಬೇಕೆಂದರು.ಪ್ರಾಚಾರ್ಯ ಡಾ.ಎಚ್.ಬಿ.ಮಹಾಂತೇಶ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೌಶಲ್ಯ ಪಡೆಯುವ ಬಗ್ಗೆ ಮಾರ್ಗದರ್ಶನ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಪದವಿ ಪಡೆದರೂ ಸಹ ಕೌಶಲ್ಯ ಅವಶ್ಯವಾಗಿದೆ. ನಿಮ್ಮಲ್ಲಿರುವ ಪ್ರತಿಭೆಯನ್ನು ತೋರಿ್ಡಸುವ ಮೂಲಕ ಉದ್ಯೋಗ ಲಭ್ಯತೆ ಸಾಧ್ಯವೆಂದರು.ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಡಾ.ಸರೋಜಿನಿ ಹೊಸಕೇರಿ, ಕು.ಯಂಕಮ್ಮ ,ನಾಗರಾಜ ಕಪ್ಪಲಿ, ಉಪನ್ಯಾಸಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ಡಾ.ಯಲ್ಲಪ್ಪ ಸ್ವಾಗತಿಸಿದರು. ಡಾ.ಪುಂಡಲೀಕ ಹುನ್ನಳ್ಳಿ ನಿರೂಪಿಸಿದರು.ಮೌಲಾಸಾಬ ಮುಲ್ಲಾ ವಂದಿಸಿದರು.