ಮಾನಸಿಕ, ದೈಹಿಕ ಕಾಯಿಲೆಗಳು ಚಿತ್ರಕಲೆ ಚಿಕಿತ್ಸೆಯಿಂದ ಗುಣ: ನೇಟಾಲಿ

ಹುಬ್ಬಳ್ಳಿ: ಇಂದಿನ ದಿನಗಳಲ್ಲಿ ಮಾನಸಿಕ ಮತ್ತು ದೈಹಿಕ ಕಾಯಿಲೆಗಳನ್ನು ಚಿತ್ರಕಲೆ ಚಿಕಿತ್ಸೆ ( ಂಡಿಣ ಖಿಜಡಿಚಿಠಿಥಿ )ಮೂಲಕ  ಗುಣಪಡಿಸುತ್ತಿದ್ದಾರೆ. ಅಲ್ಲದೇ ಪಾಲಕರು ಚಿಕ್ಕಮಕ್ಕಳಿಗೆ ಚಿತ್ರ ಬಿಡಿಸುವುದನ್ನು ಕಲಿಸುತ್ತಾ ಅದರಿಂದ ಅನೇಕ ಕೊಲಾಜ್/ಫೋಟೋ ಫ್ರೇಮ್ನ್ನು ಮನೆಯಲ್ಲಿಯೇ ಮಾಡಿಸುವದರ ಮೂಲಕ ಮಕ್ಕಳಲ್ಲಿ ಸೃಜನಶೀಲತೆಯನ್ನು ಹೆಚ್ಚಿಸಬಹುದು ಮತ್ತು ಮಕ್ಕಳನ್ನು ಮೋಬೈಲ್ ಬಳಕೆಯಿಂದ ದೂರವಿಡಬಹುದು ಎಂದು ಡಾ. ವಿ.ಬಿ.ನೇಟಾಲಿಯವರು ತಿಳಿಸಿದರು. 

ಆಶಿಯಾ ಫೌಂಡೇಷನ್ ಹುಬ್ಬಳ್ಳಿ,  ಶಿವರುದ್ರ ಟ್ರಸ್ಟ ಹುಬ್ಬಳ್ಳಿ & ರೋಟರಿ ಕ್ಲಬ್ ಹುಬ್ಬಳ್ಳಿ ನಾರ್ಥ ಇವರ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲೆ ಸ್ಪಧೆರ್ೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.

ಸುನೀಲ್ ಮಿರಜಕರ್ ಇವರು ನಗುಮುಖದ ಚಿತ್ರ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಸ್ಪಧರ್ೆಯಲ್ಲಿ ಸುಮಾರು 65 ಮಕ್ಕಳು ಭಾಗವಹಿಸಿದ್ದು ಮಕ್ಕಳನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಿ ಮೊದಲನೇ ವಿಭಾಗಕ್ಕೆ ನಿಸರ್ಗದ ಬಗ್ಗೆ, ಎರಡನೇ ವಿಭಾಗಕ್ಕೆ ಸ್ವಚ್ಚ ಭಾರತದ ಬಗ್ಗೆ, ಮೂರನೇ ವಿಭಾಗಕ್ಕೆ ನನ್ನ ಕನಸಿನ ಶಹರದ ಬಗ್ಗೆ ಚಿತ್ರ ಬಿಡಿಸಲು ಕೋರಲಾಗಿತ್ತು. ಮಕ್ಕಳು ತಮ್ಮ ಕಲ್ಪನಾ ಶಕ್ತಿಯನ್ನು ಉಪಯೋಗಿಸಿ ಅದ್ಬುತ ಚಿತ್ರಗಳನ್ನು ಬಿಡಿಸಿ ಅತಿಥಿಗಳು ಮತ್ತು ತೀಪರ್ುಗಾರರಲ್ಲಿ ಅಚ್ಚರಿಯನ್ನು ಮೂಡಿಸಿದರು.   

ಮೊದಲನೇ ವಿಭಾಗದಲ್ಲಿ ಮೊದಲನೇ ಬಹುಮಾನ-ಕೃಶಿ.ಎಸ್.ಮೆಣಸಿನಕಾಯಿ, ದ್ವಿತೀಯ ಬಹುಮಾನ-ಆಡ್ರಿಯಲ್ .ಬಿ, ತೃತೀಯ ಬಹುಮಾನ-ತನ್ಮಯ 

ಎರಡನೇ ವಿಭಾಗದಲ್ಲಿ ಮೊದಲನೇ ಬಹುಮಾನ-ಮೇಧಾ ಉಮೇಶ, ದ್ವಿತೀಯ ಬಹುಮಾನ-ನಿರಂಜನ ಎಸ್, ತೃತೀಯ ಬಹುಮಾನ-ಮೈರೋನಿ ಪಾಲ್ಕರ್, 

ಮೂರನೇ ವಿಭಾಗದಲ್ಲಿ ಮೊದಲನೇ ಬಹುಮಾನ-ಅದಿತಿ ಎಸ್.ಎಮ್ , ದ್ವಿತೀಯ ಬಹುಮಾನ-ಅಶೀರ ಎಸ್., ಜೊಯ್ಸ .ಎಮ್ ತೃತೀಯ ಬಹುಮಾನವನ್ನು ಪಡೆದರು 

ಕಾರ್ಯಕ್ರಮದಲ್ಲಿ ಆಶಿಯಾ ಫೌಂಡೇಷನ್ನ ಸುಜನ್ ಬಂಗೇರಾ, ಸೌಮ್ಯಾ ನಲವಡಿ, ವನಿಷಾ, ಶಿವಯೋಗಿ ಕೆರೂಡಿ ಮುಂತಾದವರು ಇದ್ದರು.