ಲೋಕದರ್ಶನ ವರದಿ
ಬ್ಯಾಡಗಿ27: ಜಿಲ್ಲಾ ಪ್ರವಾಸಿ ಮಂದಿರದಲ್ಲಿ ನ.29 ರಂದು ಮುಂಜಾನೆ 10-30 ಘಂಟೆಗೆ ಜಿಲ್ಲಾ ಎಸ್ಸಿ/ಎಸ್ಟಿ ಸಿವಿಲ್ ಗುತ್ತಿಗೆದಾರರ ಸಂಘದ ಸರ್ವ ಸದಸ್ಯರ ಸಭೆಯನ್ನು ಕರೆಯಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದಶರ್ಿ ರಾಘವೇಂದ್ರ ದೇವಿಹೊಸೂರ ತಿಳಿಸಿದ್ದಾರೆ.
ಅಂದಿನ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಸಂಘದ ಅಧ್ಯಕ್ಷ ಅಜರ್ುನ ಹಂಚಿನಮನಿ ವಹಿಸಲಿದ್ದಾರೆ. ಸಭೆಯಲ್ಲಿ ನೂತನ ಸಂಘದ ರಚನೆಯಾಗಿ ನೋಂದಣಿಯಾದ ಬಗ್ಗೆ ಚಚರ್ೆ, ಎಸ್ಸಿ/ಎಸ್ಟಿ ಗುತ್ತಿಗೆದಾರರ ಕುಂದುಕೊರತೆಗಳ ಬಗ್ಗೆ, ನೂತನ ಸಂಘದ ಕಾಯರ್ಾಲಯದ ಬಗ್ಗೆ ಚಚರ್ೆ, ವಿವಿಧ ತಾಲೂಕುಗಳಲ್ಲಿ ಕೆಲ ಇಂಜನೀಯರರುಗಳು ನಮ್ಮ ಗುತ್ತಿಗೆದಾರರೊಂದಿಗೆ ಸರಿಯಾಗಿ ಸ್ಫಂದನೆ ಮಾಡದೇ ಇರುವುದರ ಬಗ್ಗೆ ಚಚರ್ೆ ಹಾಗೂ ನೂತನ ರಟ್ಟಿಹಳ್ಳಿ ತಾಲೂಕಿನ ಘಟಕದ ರಚನೆ ಮಾಡುವುದರ ಬಗ್ಗೆ ಚಚರ್ಿಸುವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸಭೆಯಲ್ಲಿ ಚಚರ್ಿಸಲಿದ್ದು, ಅಂದಿನ ಸಭೆಗೆ ಜಿಲ್ಲಾ ಸಂಘದ ಹಾಗೂ ಎಲ್ಲಾ ತಾಲೂಕಿನ ಎಸ್ಸಿ/ಎಸ್ಟಿ ಸಿವಿಲ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಗುತ್ತಿಗೆದಾರರು ಆಗಮಿಸಿ ಸಲಹೆ ಸೂಚನೆ ನೀಡುವಂತೆ ಕೋರಿದ್ದಾರೆ.
ಸಭೆಯಲ್ಲಿ ಜಿಲ್ಲಾ ಸಂಘದ ಕಾರ್ಯದಶರ್ಿ ಜಗದೀಶ ಮನ್ನಂಗಿ, ಹಾವೇರಿ ತಾಲೂಕಾ ಅಧ್ಯಕ್ಷ ವೀರೂಪಾಕ್ಷಪ್ಪ ನರಗುಂದ, ಸವಣೂರ ತಾಲೂಕಾ ಅಧ್ಯಕ್ಷ ಎಸ್.ಎಸ್.ಹುಲ್ಲಮ್ಮನವರ, ಹಾನಗಲ್ ತಾಲೂಕಾ ಅಧ್ಯಕ್ಷ ಮಹದೇವಪ್ಪ ಬಂಡಿವಡ್ಡರ, ರಾಣೆಬೆನ್ನೂರ ತಾಲೂಕಾ ಅಧ್ಯಕ್ಷ ಮಾನಪ್ಪ ಲಮಾಣಿ, ಹಿರೇಕೆರೂರ ತಾಲೂಕಾ ಅಧ್ಯಕ್ಷ ಮಲ್ಲೇಶಪ್ಪ ನಾಯಕ, ಬ್ಯಾಡಗಿ ತಾಲೂಕಾ ಅಧ್ಯಕ್ಷ ಬಸವಂತಪ್ಪ ಹುಲ್ಲತ್ತಿ ಸೇರಿದಂತೆ ಜಿಲ್ಲಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿರುವರೆಂದು ತಿಳಿಸಿದ್ದಾರೆ.