ಸದವಿಚಾರ ಗೋಷ್ಠಿ ಕಾರ್ಯಕ್ರಮ

ಲೋಕದರ್ಶನ ವರದಿ

ಸಿಂದಗಿ 28: ಆಧ್ಯಾತ್ಮದ ಮೂಲಕ ಸನ್ಮಗರ್ಾದ ದಾರಿ ತೋರುವವನೇ ನಿಜವಾದ ಗುರು ಎಂದು ಮನಗೂಳಿ ಶರೀಫ ದಗರ್ಾದ ಪೀಠಾಧಿಪತಿ ಡಾ.ಎಫ್.ಎಚ್.ಇನಾಮದಾರ ಹೇಳಿದರು. ಪಟ್ಟಣದ ಸಾರಂಗಮಠದ ಆವರಣದಲ್ಲಿ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ ಅಡಿಯಲ್ಲಿ ಹಮ್ಮಿಕೊಂಡ 282ನೇ ಸದವಿಚಾರಗೋಷ್ಠಿಯಲ್ಲಿ ಅವರು ಉಪನ್ಯಾಸ ನೀಡಿದರು.

ಸದಾಚಾರವುಳ್ಳ ಭಕ್ತರು, ಪ್ರೀತಿ, ನೀತಿ, ರೀತಿಗಳನ್ನು ಅರಿತು ಪರಮಾತ್ಮನ ಆಶ್ರಯ ಬಯಸಿದರೆ ಅದಕ್ಕೆ ಸೂಕ್ತ ದಾರಿ ಹುಡುಕಿಕೊಡುವವನು ಶ್ರೇಷ್ಠ ಗುರು ಎಂದರು. ಸಾನಿಧ್ಯವಹಿಸಿದ ಗುರುಕುಲ ಭಾಸ್ಕರ ಬೂಷಿತ ಸಾರಂಗಮಠ-ಗಚ್ಚಿನಮಠದ ಪ್ರಭುಸಾರಂಗದೇವ ಶಿವಾಚಾರ್ಯರು, ಅಧ್ಯಕ್ಷತೆ ವಹಿಸಿದ ಸ್ಥಳಿಯ ಗುರುದೇವಾಶ್ರಮದ ಶಾಂತಗಂಗಾಧರ ಸ್ವಾಮೀಜಿ, ಗೋಲಗೇರಿಯ ವಿರಕ್ತಮಠದ ಸಿದ್ಧಲಿಂಗ ಶಿವಾಚಾರ್ಯರು, ಕನ್ನೋಳ್ಳಿಯ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು, ಪ್ರವಚನಕಾರ ಇಲಕಲ್ಲದ ಪಂಡಿತ ಅನ್ನದಾನಿ ಶಾಸ್ತ್ರಿಗಳು ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ಗುತ್ತಿಗೇದಾರ ಭೀಮಾಶಂಕರ ನಾಗೂರ, ವಿಜಯಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತ ಟಿ.ಕೆ.ಮಲಗೊಂಡ, ಚಿತ್ರಕಲಾ ಶಿಕ್ಷಕ ಎಂ.ಬಿ.ಅಲ್ದಿ, ಕಲಕೇರಿಯ ಬಸವೇಶ್ವರ ಕಾಲೇಜಿನ ದೈಹಿಕ ನಿದರ್ೇಶಕ ಶಾಂತೇಶ ದುಗರ್ಿ, ಶಿಲ್ಪ ಕಲಾವಿದ ರಮೇಶ ರೇಬಿನಾಳ, ನೃತ್ಯ ಕಲಾವಿದೆ ಪ್ರೀಯಾಂಕಾ ಸರಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಸನ್ಮಾನಿತರು ಸನ್ಮಾನೋತ್ತರವಾಗಿ ಮಾತನಾಡಿದರು.

ಸಿ.ಎಂ.ಪೂಜಾರಿ, ಅಶೋಕ ವಾರದ, ವಿ.ಡಿ.ವಸ್ತ್ರದ, ಗುರುಶಾಂತಯ್ಯ ಜಂಗಿನಮಠ, ವಿಶ್ವನಾಥ ಜೋಗುರ, ಅಶೋಕ ವಾರದ, ಸಿ.ಎಂ.ಪೂಜಾರಿ,  ಗುರುಶಾಂತಯ್ಯ ಜಂಗಿನಮಠ, ಶ್ರೀಶೈಲ ನಂದಿಕೋಲ, ಶರಣಯ್ಯ ಮಠ, ಸಿ.ಡಿ.ಜೋಗುರ, ಪ್ರಾಚಾರ್ಯ ಬಿ.ಜಿ.ಅವಟಿ, ಪ್ರಶಾಂತ ನಂದಿಕೋಲ, ಬಾಬು ಡೊಳ್ಳಿ, ಎಸ್.ಜಿ.ಹಿರೇಮಠ, ಕುಮಾರಸ್ವಾಮಿ ಜಹಾಗೀರದಾರ, ಮುಖ್ಯೋಧ್ಯಾಪಕ ಜಿ.ಜಿ.ಬಿರಾದಾರ, ಮುಖ್ಯಗುರು ಸಂಗನಬಸವ ಬಿರಾದಾರ, ಅರವಿಂದ ಹೂಗಾರ, ಡಾ.ಶರಣು ಜೋಗುರ, ಚನ್ನು ಕತ್ತಿ, ಶಕುಂತಲಾ ಹಿರೇಮಠ ಸೇರಿದಂತೆ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.