ಲೋಕದರ್ಶನ ವರದಿ
ಇಂಡಿ 02:ತಾಲೂಕಿನ ಸಾಲೋಟಗಿ ಗ್ರಾಮದ ರೈತ ಸಿದ್ರಾಮ ಹ್ಯಾಳಾದ ಇವರ ತೋಟಕ್ಕೆ ತಾಲೂಕಾ ಪಶುವೈಧ್ಯಾಥಿಕಾರಿ ಸಿ ಬಿ,ಕುಂಬಾರ ಹಾಗೂ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ಜಾನುವಾರಗಳಿಗೆ ಕಾಲುಬೇನೆ, ಬಾಯಿ ಬೇನೆ ಲಸಿಕೆ ಹಾಕಿ ರೈತರಿಗೆ ತಿಳುವಳಿಕೆ ನೀಡಿದರು.
ತಾಲೂಕಾ ಪಶುವೈಧ್ಯಾಧಿಕಾರಿ ಸಿ ಬಿ,ಕುಂಬಾರ ಮಾತನಾಡಿ ಇದು ಒಂದು ರಾಷ್ಟ್ರೀಯ ಕಾಲು ಬಾಯಿ ರೋಗ ನಿಯಂತ್ರಣದ ಕಾರ್ಯಕ್ರಮವಾಗಿದ್ದು ಇಂತಹ ಕಾರ್ಯಕ್ರಮಗಳು ಪ್ರತಿ ವರ್ಷ 6 ತಿಂಗಳಿಗೋಮ್ಮೆ ಲಸಿಕೆ ನೀಡುವ ಕಾರ್ಯಕ್ರಮ ನಡೆಯುತ್ತದೆ ರೈತರು ಇದರ ಉಪಯೋಗ ತಪ್ಪದೆ ಪಡೆಯಬೇಕು. ತಾಲೂಕಿನಲ್ಲಿ ಪ್ರತಿಯೊಂದು ಗ್ರಾಮೀಣ ಭಾಗಗಳಲ್ಲಿ ಸಂಚರಿಸಿ ಜಾನುವಾರಗಳಿಗೆ ಹರಡುವ ಮಾರಕ ರೋಗವಾದ ಕಾಲುಬೇನೆ,ಬಾಯಿಬೇನೆ ವಿರುಧ್ಧ ಲಸಿಕೆ ಹಾಕುವ ಮಹತ್ತರ ಯೋಜನೆ ಜ. 28 ರಂದು ಪ್ರಾರಂಭಿಸಿ ಫೆ. 16ರಂದು ಮುಕ್ತಾಯಗೋಳ್ಳಲಿದ್ದು ಒಟ್ಟಾರೆ 17 ದಿನಗಳ ಕಾಲ ಜಾನುವಾರಗಳಿಗೆ ಲಸಿಕೆ ಹಾಕಲಾಗುತ್ತದೆ.
ತಾಲೂಕಿನಲ್ಲಿ ಒಟ್ಟು 1 ಲಕ್ಷ 12 ಸಾವಿರದಾ 690 ದನ,ಎಮ್ಮೆ, ಹಂದಿಗಳಿಗೆ 5 ತಂಡಗಳಲ್ಲಿ 48 ಲಸಿಕೆದಾರರ ಮುಖಾಂತರ ತಾಲೂಕಿನ ಪ್ರತಿ ಗ್ರಾಮಗಳಿಗೆ ನಗರ ಪ್ರದೇಶ ಸೇರಿದಂತೆ ಮನೆ ಮನೆಗೆ ಹೋಗಿ ಜಾನುವಾರಗಳಿಗೆ ಲಸಿಕೆ ಹಾಕಲಾಗುತ್ತಿದ್ದೇವೆ. ರ್ಯತರು ಪಶು ಸಂಗೋಪನೆ ಕೃಷಿಕರು ಉಚಿತವಾಗಿ ಇದರ ಲಾಭ ಪಡೆಯಬೇಕು. ಹಸುಗಳಿಗೆ ಲಸಿಕೆ ಹಾಕಿಸಿದರೆ ಜ್ವರ ಬರುವದಾಗಿ ತಪ್ಪು ಗ್ರಹಿಕೆಯಿಂದ ರೈತರು ಲಸಿಕೆ ಹಾಕಿಸದಿದ್ದರೆ ಮುಂದಿನ ದಿನಗಳಲ್ಲಿ ಮಾರಕ ರೋಗಗಳಿಗೆ ಬಲಿಯಾಗುವ ಸಂಭವ ಹೆಚ್ಚು ಆದ್ದರಿಂದ ರೈತರು ತಮ್ಮ ಬೆಲೆ ಬಾಳುವ ರಾಸುಗಳನ್ನು ರೋಗ ಬರುವದಕ್ಕಿಂತ ಮುಂಚಿತವಾಗಿ ಅವುಗಳ ಬಗ್ಗೆ ಗಮನ ಕೊಡುವದು ಅಷ್ಠೇ ಪ್ರಮುಖವಾಗಿದೆ. ಆದ್ದರಿಂದ ರೈತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ರೈತ ಸಿದ್ರಾಮ ಹ್ಯಾಳಾದ, ಝಳಕಿ ಪಶು ಇಲಾಖೆ ವೈಧ್ಯಾಧಿಕಾರಿ ಡಾ. ಪ್ರಕಾಶ ಮಿಜರ್ಿ, ಪಶು ವೈಧ್ಯಾಧಿಕಾರಿ ಡಾ. ವೆಂಕಟೇಶ, ರಾಮಣ್ಣಾ ಉಪ್ಪಾರ, ಪೂಜಾರಿ ಸೇರಿದಂತೆ ಅನೇಕರಿದ್ದರು.