'ಗಣಿತ ಜ್ಞಾನಾರ್ಜನೆ ಮಕ್ಕಳಿಗೆ ಅವಶ್ಯ'

ಲೋಕದರ್ಶನ  ವರದಿ

ತಾಳಿಕೋಟೆ 11:  ವಿಷಯಗಳ ಭೋದನೆಯಲ್ಲಿ ಗಣಿತ ವಿಷಯದ ಜ್ಞಾನವೆಂಬುದು ಮಕ್ಕಳ ಜೀವನೋಪಾಯಕ್ಕೆ ಅವಶ್ಯವಾದುದ್ದಾಗಿದೆ ಅತೀ ಸರಳತೆಯ ವಿಷಯ ಗಣಿತ ವಿಷಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ.ಗಾಂಜಿ ಅವರು ನುಡಿದರು.

  ಶುಕ್ರವಾರರಂದು ಸರ್ವಜ್ಞ ವಿದ್ಯಾಪೀಠ ಕನ್ನಡ ಹಾಗೂ ಆಂಗ್ಲಮಾಧ್ಯಮ ಪ್ರೌಢ ಶಾಲೆಯಲ್ಲಿ ತಾಲೂಕಾ ಮಟ್ಟದ ಗಣಿತ ಕಾಯರ್ಾಗಾರವನ್ನು ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಲೆಕ್ಕ ಶಿಷರ್ಿಕೆಗಳಲ್ಲಿ ಅನೇಕ ಪ್ರಕಾರಗಳಿವೆ ಅವುಗಳ ಜ್ಞಾನಾರ್ಜನೆ ಮಕ್ಕಳಿಗೆ ಕಲಿಸುವದು ಅಗತ್ಯವಾಗಿದೆ ಈ ಕಾಯರ್ಾಗಾರದ ಮುಖ್ಯ ಉದ್ದೇಶ ಗಣಿತ ವಿಷಯದ ಪ್ರೇರಣೆ ಶಿಕ್ಷಕರಲ್ಲಿ ಹಾಗೂ ಮಕ್ಕಳಲ್ಲಿ ಮೂಡಿಸುವದಂತಹದ್ದಾಗಿದೆ ವಿದ್ಯಾಥರ್ಿಗಳಿಗೆ 100 ಕ್ಕೆ 100 ಅಂಕ ಪಡೆಯುವ ವಿಷಯವೆಂದರೆ ಗಣಿತ ವಿಷಯವಾಗಿದ್ದು ಅತೀ ಸರಳತೆಯ ವಿಷಯವಾಗಿದೆ ಎಂದು ಗಣಿತ ವಿಷಯ ಭೋದನೆಯ ಕುರಿತು ಮಾರ್ಗದರ್ಶನ ಮಾಡಿದರು.

  ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಸರ್ವಜ್ಞ ವಿದ್ಯಾಪೀಠ ಕನ್ನಡ ಹಾಗೂ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ಅಧ್ಯಕ್ಷ ಸಿದ್ದನಗೌಡ ಬ ಮಂಗಳೂರ ಅವರು ವಹಿಸಿದ್ದರು.

   ಮುಖ್ಯ ಅಥಿತಿಗಳಾಗಿ ಆಗಮಿಸಿದ ಎಸ್.ಬಿ.ಚಲವಾದಿ (ದೈಹಿಕ ಶಿಕ್ಷಣಾಧಿಕಾರಿಗಳು) ಎಂ.ಜಿ.ಹೋಕ್ರಾಣಿ, ಎಸ್.ವಾಯ್.ಪಾಟೀಲ ಅವರು ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದಿದ್ದಕ್ಕೆ  ಗಣಿತಕಾಯರ್ಾಗಾರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮುಖಂಡರಾದ ಸಂಗನಗೌಡ ಅಸ್ಕಿ (ಹಿರೂರ), ಸಂಪನ್ಮೂಲ ವ್ಯಕ್ತಿಗಳಾಗಿ ಕೆ.ಎಸ್.ಚನ್ನವೀರ, ಮುಖೋಪಾಧ್ಯಾಯರಾದ ಸಂತೋಷ ಪವಾರ, ಶಶಿಧರ ಪಾಟೀಲ, ಗುರುರಾಜ ಕುಲಕಣರ್ಿ, ಕಾರ್ಯಕ್ರಮದಲ್ಲಿ ಮುದ್ದೆಬಿಹಾಳ ತಾಲೂಕಿನ ಎಲ್ಲಾ ಪ್ರೌಢಶಾಲಾ ವಿಭಾಗದ ಗಣಿತ ಶಿಕ್ಷಕ/ಕಿಯರು ಉಪಸ್ಥಿತರಿದ್ದರು.

  ಕಾರ್ಯಕ್ರಮವನ್ನು ಗಂಗನಗೌಡ ಜವಳಗೇರಿ ನಿರೂಪಿಸಿದರು. ಬಸವರಾಜ ಚಳ್ಳಗಿ ವಂದಿಸಿದರು.