ಹಳಿಯಾಳ 30: ಅರಣ್ಯ ಹಕ್ಕು ಕಾಯ್ದೆಯಡಿ ಬುಡಕಟ್ಟು ಸಿದ್ಧಿ ಸಮುದಾಯದವರಿಗೆ ದೊರೆಯಬೇಕಾದ ಭೂಮಿಯ ಹಕ್ಕನ್ನು ದೊರಕಿಸಿಕೊಡುವಂತೆ ಆಗ್ರಹಿಸಿ ಸೋಮವಾರ ಬೃಹತ್ ಪ್ರತಿಭಟನಾ ಪ್ರದರ್ಶನವು ನಡೆಯಿತು.
ಸಿದ್ಧಿ ಸಮುದಾಯದ ವತಿಯಿಂದ ಹಿರಿಯ ಮುಖಂಡ ಡಿಯೋಗ ಸಿದ್ಧಿ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನಡೆದು ತಾಲೂಕಾ ಕಚೇರಿ ಎದುರು ಸಮಾವೇಶಗೊಂಡಿತು. ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ತಹಶೀಲ್ದಾರ
ವಿದ್ಯಾಧರ ಗುಳಗುಳಿ ಅವರಿಗೆ ಸಲ್ಲಿಸಲಾಯಿತು.
ಬುಡಕಟ್ಟು ಸಿದ್ಧಿ ಸಮುದಾಯದವರು ಅರಣ್ಯದಿಂದ ಸುತ್ತುವರಿದ ಕುಗ್ರಾಮದಲ್ಲಿ ವಾಸಿಸುತ್ತಾ ಅತಿಕ್ರಮಣ ಮಾಡಿ ಭೂಮಿಯಲ್ಲಿ ಸಾಗುವಳಿ
ಮಾಡಿ ತಮ್ಮ ಕುಟುಂಬದ ಉಪಜೀವನಕ್ಕಾಗಿ
ದುಡಿಯುತ್ತಿದ್ದಾರೆ. ಹಲವಾರು ವರ್ಷಗಳಿಂದ ತಮ್ಮ ಸುತ್ತ-ಮುತ್ತಲ
ಬಲಾಢ್ಯರ ಕಪಿಮುಷ್ಠಿಯಲ್ಲಿ ಇದ್ದು ಶಿಕ್ಷಣದ ಕೊರತೆಯ ಹಿನ್ನೆಲೆಯಲ್ಲಿ ತಾವು ಸಾಗುವಳಿ ಮಾಡಿದ
ಜಮೀನನ್ನು ಇನ್ನುವರೆಗೆ ತಮ್ಮ ಹೆಸರಿನಲ್ಲಿರುವಂತೆ ಮಾಡಿಕೊಂಡಿಲ್ಲ.
ಮಾತ್ರವಲ್ಲದೇ ಈಗಾಗಲೇ ಹೊಂದಿದ್ದ ಭೂಮಿಯನ್ನು ಕೆಲವರು ಅನಕ್ಷರತೆಯ ದುರುಪಯೋಗ ಮಾಡಿಕೊಂಡು ಕಬಳಿಸಿಕೊಂಡಿದ್ದಾರೆ. ಅರಣ್ಯ ಇಲಾಖೆಯವರ ಶೋಷಣೆಗೂ ಸಹ ಒಳಗಾಗಿದ್ದಾರೆ.
ಸಕರ್ಾರವು ಟಿಬೇಟಿನಿಂದ ಬಂದ ಶರಣಾಥರ್ಿಗಳಿಗೆ ಹಸಿರುಕಂಬಳಿ
ಹಾಕಿ ಮುಂಡಗೋಡ ತಾಲೂಕಿನಲ್ಲಿ ಬದುಕಲು ಅವಕಾಶ ನೀಡಿದೆ.
ಮಹಾರಾಷ್ಟ್ರದಿಂದ ಬಂದ ಗೌಳಿ ಸಮುದಾಯಕ್ಕೆ
ವಸತಿ ಕಲ್ಪಿಸಿ ಇನ್ನೂ ಅನೇಕ ಪುನರ್ವಸತಿ ಗ್ರಾಮಗಳಲ್ಲಿ
ಇತರ ಹಲವಾರು ಸಮುದಾಯಗಳಿಗೆ ಬದುಕಲು ಹಕ್ಕು ನೀಡಿದೆ. ಆದರೆ ಶತ-ಶತಮಾನಗಳಿಂದ
ಇಲ್ಲಿಯೇ ಕಾಡಿನಲ್ಲಿ ನೆಲೆನಿಂತು ಬದುಕುತ್ತಿರುವ ಸಿದ್ಧಿ ಸಮುದಾಯಕ್ಕೆ ಜಮೀನು ನೀಡದಿರುವುದು ನೋವಿನ ಸಂಗತಿಯಾಗಿದೆ ಎಂದು ಮನವಿಯಲ್ಲಿ ಅಳಲನ್ನು
ವ್ಯಕ್ತಪಡಿಸಲಾಗಿದೆ.
ಗಿರಿಜನರಿಗೆ ಮೂಲ ಹಕ್ಕು ನೀಡುವ
ಅಡಿಯಲ್ಲಿ ಅರಣ್ಯವೇ ಅವಲಂಬಿತ ಸಿದ್ಧಿ ಸಮುದಾಯದ ಬೇಡಿಕೆಯನ್ನು ವಿಶೇಷ ಗಮನಕ್ಕೆ ತೆಗೆದುಕೊಂಡು ಅರಣ್ಯ ಹಕ್ಕು ಕಾಯ್ದೆಯಡಿ ಪ್ರತಿ ಕುಟುಂಬಕ್ಕೆ 4 ಹೆಕ್ಟೇರ್ ಭೂಮಿಯನ್ನು ಮಂಜೂರಿ ಮಾಡಬೇಕು ಎಂದು ಮನವಿಪತ್ರದಲ್ಲಿ ವಿನಂತಿಸಲಾಗಿದೆ.
ಸಿದ್ಧಿ ಸಮುದಾಯದ ಹಿರಿಯ ಮುಖಂಡ ಡಿಯೋಗ ಸಿದ್ಧಿ, ಪ್ರಮುಖರಾದ ಇಮಾಮಹುಸೇನ್, ಸಂಜಯ ಕಾಂಬ್ರೇಕರ, ಜುವಾಂವ,
ಪರಾಶಿ ಪಾಸಕರ, ವಿಕ್ರಮ ಗರಿಬಾಚೆ, ಸುನೀಲ್, ಸಿಮಾಂವ್, ಬಸ್ತ್ಯಾಂವ, ಬೀಯಾಮಾ, ನನ್ನೆಸಾಬ, ಸಾಲು, ಬುಡ್ಡೇಸಾಬ, ಅಲ್ಲಿಸಾಬ, ಮೇರಿ, ಮರಿಯಾಂಬಿ, ನತಾಲಿನ್
ಮೊದಲಾದವರಿದ್ದರು.