ಲೋಕದರ್ಶನ ವರದಿ
ಹೂವಿನಹಡಗಲಿ .20: ತಾಲೂಕಿನ ಮಾನ್ಯರ ಮಸಲವಾಡದ ಗ್ರಾಮದಲ್ಲಿ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಸಂಭ್ರಮಕ್ಕೆ ಭರತ್ ಹುಣ್ಣಿಮೆಯ ದಿನವಾದ ಮಂಗಳವಾರ ಸಂಜೆ 5.30ಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ರಥೋತ್ಸವ ಅಂಗವಾಗಿ ಬೆಳಿಗ್ಗೆ ಸ್ವಾಮಿಗೆ ವಿಶೇಷ ವಿಶೇಷ ಅಲಂಕಾರದೊಂದಿಗೆ ಧಾಮರ್ಿಕ ವಿಧಾನಗಳು, ವಿಶೇಷ ಪೂಜೆ, ಭಕ್ತರು ಹರಕೆಯನ್ನು ತೀರಿಸಿದರು. ಸಂಜೆ ಸ್ವಾಮಿಯ ಮೂತರ್ಿಯನ್ನು ಪಲ್ಲಕ್ಕಿಯಲ್ಲಿ ಸ್ಥಾಪಿಸಿ, ಸಲಕ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ತೆರಳಿ ಬಗೆ ಬಗೆಯ ಹೂ, ಹಸಿರು ತಳಿರು ತೋರಣಗಳಿಂದ ಸಿಂಗರಿಸಿದ್ದ ರಥದಲ್ಲಿ ಸ್ವಾಮಿಯ ಉತ್ಸವ ಮೂತರ್ಿಯನ್ನು ಪ್ರತಿಷ್ಠಾಪಿಸಲಾಯಿತು.
ಹಿರೇಹಡಗಲಿ ಕೊಂಪಿ ಶಿವಕುಮಾರ 1,91,001 ಸ್ವಾಮಿಯ ನಿಶಾನೆ ಪಡೆದರು. ನಂತರ ಜಯಘೋಷದೊಂದಿಗೆ ರಥೋತ್ಸವವನ್ನು ಎಳೆದರು.ರಥ ಮುಂದೆ ಸಾಗುತ್ತಿದ್ದಂತೆ ಭಕ್ತರು ಬಾಳೆ ಹಣ್ಣು ಎಸೆದು ಭಕ್ತಿ ಸಮಪರ್ಿಸಿದರು.ಸಮಾಳ, ನಂದಿಕೋಲು, ಮಂಗಳವಾಧ್ಯಗಳ ನಿನಾದ ರಥೋತ್ಸವಕ್ಕೆ ಮೆರಗು ತಂದಿದ್ದವು.ಬಳ್ಳಾರಿ,ಗದಗ,ದಾವಣಗೆರೆ ಜಿಲ್ಲೆಗಳಿಂದ ಅಪಾರ ಭಕ್ತರು ಮಸಲವಾಡ ಗ್ರಾಮಕ್ಕೆ ಬಂದಿದ್ದರು.
ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ, ಮುಖಂಡರಾದ ಅರವಳ್ಳಿ ವೀರಣ್ಣ, ಎಂ.ಪರಮೇಶ್ವರಪ್ಪ, ಐಗೋಳ ಚಿದಾನಂದ, ಅಟವಾಳಗಿ ಕೊಟ್ರೇಶ, ಸೋಗಿ ಹಾಲೇಶ, ಜಿ.ಪಂ.ಸದಸ್ಯ ಪಿ.ವಿಜಯಕುಮಾರ, ತಾ.ಪಂ.ಸದಸ್ಯೆ ಶ್ವೇತಬಾಯಿ, ಗ್ರಾ.ಪಂ.ಅಧ್ಯಕ್ಷೆ ಗದುಗಿನ ಮಂಜುಳಾ ಮಲ್ಲಣ್ಣ ಇದ್ದರು.