ಇಂದು ಯರಗಟ್ಟಿಯಲ್ಲಿ ಮ್ಯಾರಥಾನ ಓಟ

Marathon run in Yaragatti today

ಇಂದು ಯರಗಟ್ಟಿಯಲ್ಲಿ ಮ್ಯಾರಥಾನ ಓಟ

ಯರಗಟ್ಟಿ 08: ಸ್ಥಳೀಯ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಪೃಥ್ವಿ ಸೆಂಟ್ರಲ್ ಸ್ಕೂಲನಿಂದ ಯರಗಟ್ಟಿ ಪಟ್ಟಣದಲ್ಲಿ ಮೊಟ್ಟಮೊದಲ ಭಾರಿಗೆ ಮುಕ್ತ ಮ್ಯಾರಥಾನ ಓಟ ಆಯೋಜಿಸಲಾಗಿದೆ. ಫೆ 9 ಭಾನುವಾರ ಬೆಳಿಗ್ಗೆ 6 ಘಂಟೆಗೆ ಪೃಥ್ವಿ ಸೆಂಟ್ರಲ್ ಶಾಲೆ ಆವರಣದಿಂದ ಪ್ರಾರಂಭವಾಗುವುದು. 10-16 ವರ್ಷದ ಯುವಕ ಯುವತಿಯರಿಗೆ, 16-30 ವರ್ಷದ ಪುರುಷ ಮಹಿಳೆಗೆ, 30-50 ವರ್ಷದ ಪುರುಷ ಮಹಿಳೆಯರಿಗೆ ಹಾಗೂ 50 ವರ್ಷ ಮೆಲ್ಪಟ್ಟ ಪುರುಷ ಮಹಿಳೆಯರಿಗೆ ಹೀಗೆ ಪ್ರತ್ಯೇಕ ನಾಲ್ಕು ವಿಭಾಗಳಾಗಿ ಮಾಡಲಾಗಿದ್ದು, ಪ್ರತಿ ವಿಭಾಗಕ್ಕೂ ಪ್ರಶಸ್ತಿ ನಿಗದಿ ಮಾಡಲಾಗಿದ್ದು, ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಲಿದ್ದಾರೆ. ಈ ಓಟದ ದೂರ ಒಟ್ಟು 5 ಕಿ.ಮೀ ಆಗಿದೆ. ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಮಾರ್ಗಗಳನ್ನು ಸೂಚಿಸಲಾಗಿದೆ. ಯರಗಟ್ಟಿ ಹಾಗೂ ಸವದತ್ತಿ ತಾಲೂಕಿನ ವಾಸಿಗಳು ಮಾತ್ರ ಇದರಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಜಿಪಂ ಮಾಜಿ ಸದಸ್ಯ ಅಜಿತಕುಮಾರ ದೇಸಾಯಿ ಮ್ಯಾರಥಾನಗೆ ಚಾಲನೆ ನೀಡಲಿದ್ದಾರೆ. ತಾಲೂಕು ದಂಡಾಧಿಕಾರಿ ಎಂ. ವಿ. ಗುಂಡಪ್ಪಗೋಳ, ಸಿಪಿಐ ಐ. ಎಂ. ಮಠಪತಿ, ಯುವ ಮುಖಂಡ ಪ್ರಕಾಶ ವಾಲಿ, ನಿವೃತ್ತ ಮುಖ್ಯಶಿಕ್ಷಕ ಎಸ್‌.ಎಸ್‌. ಕುರಬಗಟ್ಟಿಮಠ, ಮಾಜಿ ಸೈನಿಕ ಕುಮಾರ ಹಿರೇಮಠ, ಹೊಟೇಲ ಉದ್ಯಮಿ ರಾಜೇಶ ಶೆಟ್ಟಿ, ಕಸಾಪ ಅಧ್ಯಕ್ಷ ಟಿ.ಎಂ. ಕಾಮನ್ನವರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಆರೋಗ್ಯವೇ ಭಾಗ್ಯ ಎಂಬ ಮಾತು ಸಾರ್ವಕಾಲಿಕವಾಗಿದೆ. ಉತ್ತಮ ಆರೋಗ್ಯಕ್ಕಾಗಿ ನಡೆಯಲೇಬೇಕು ಎಂದು ಹೇಳುತ್ತಾರೆ ಈ ನಿಟ್ಟಿನಲ್ಲಿ ಯೋಗ, ಕ್ರೀಡೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಬಂದಿದೆ. ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಪ್ರಥಮ ಭಾರಿಗೆ ಮ್ಯಾರಥಾನ ಹಮ್ಮಿಕೊಂಡೆದ್ದೆವೆ. ಈ ಜಗತ್ತಿನಲ್ಲಿ ಸೋಲದೆ ಗೆದ್ದವರು ಯಾರು ಇಲ್ಲ, ಸೋತು ಗೆದ್ದವರೇ ಸಾಧಕರಾಗಿದ್ದಾರೆ. ಈ ನಿಟ್ಟಿನಲ್ಲಿ ಸ್ರೀ ಮತ್ತು ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು.