ಲೋಕದರ್ಶನ ವರದಿ
ಕೊಪ್ಪಳ 21: ಹಿರಿಯ ಸಾಹಿತಿ ಪತ್ರಕರ್ತರಾಗಿದ್ದ ಡಿ.ವಿ.ಗುಂಡಪ್ಪ ಅವರಿಂದ 1932ರಲ್ಲಿ ಸ್ಥಾಪಿತಗೊಂಡ ಏಕೈಕ ರಾಜ್ಯದಲ್ಲಿ ಅತೀ ಹೆಚ್ಚು ಸದಸ್ಯ ಪತ್ರಕರ್ತರನ್ನು ಹೊಂದಿರುವ ಸಂಘವಾದ ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಘಟಕಕ್ಕೆ ಹಲವು ಜನ ಕಾರ್ಯನಿರತ ಪತ್ರಕರ್ತರು ಸೇರ್ಪಡೆಗೊಂಡರು.
ಬುಧವಾರ ಬೆಳಿಗ್ಗೆ ಇಲ್ಲಿನ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಸರಳ ಸಾಂಕೇತಿಕ ಸಮಾರಂಭದಲ್ಲಿ ಪ್ರಜಾವಾಣಿ ದಿನ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರರಾದ ಸಿದ್ಧನಗೌಡ ಪಾಟೀಲ್, ವಿಶ್ವವಾಣಿ ದಿನ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರರಾದ ಬಸವರಾಜ್ ಕಕರ್ಿಹಳ್ಳಿ, ಇಂಚರ ಟಿವಿ ಜಿಲ್ಲಾ ವರದಿಗಾರ ಗುರುರಾಜ್ ಡಂಬಳ, ಪ್ರಜಾವಾಣಿ ಸಹಾಯಕ ವರದಿಗಾರ ಅನಿಲ್ ಬಾಚನಳ್ಳಿ, ವಿಶ್ವವಾಣಿ ಸಹಾಯಕ ವರದಿಗಾರ ದೇವೇಂದ್ರ ಬಳಿಗಾರ, ಪ್ರಜಾವಾಣಿ ಛಾಯಗ್ರಹಕ ಭರತ ಕಂದಕೂರ ಸೇರಿದಂತೆ ಕನ್ನಡಮ್ಮ ಜಿಲ್ಲಾ ವರದಿಗಾರರಾದ ಮೌಲಾ ಹುಸೇನ್ ಬುಲ್ಡಿಯಾರ ಸೇರ್ಪಡಗೊಂಡರು.
ಸೇರ್ಪಡೆ ಸಮಾರಂಭ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಎಂ. ಸಾದಿಕ್ ಅಲಿ ಎಲ್ಲಾ ನೂತನ ಪತ್ರಕರ್ತರಿಗೆ ಪುಷ್ಪ ನೀಡುವ ಮೂಲಕ ಸಂಘಕ್ಕೆ ಸ್ವಾಗತಿ ಬರಮಾಡಿಕೊಂಡರು. ವೇದಿಕೆ ಮೇಲೆ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ಜಿ.ಎಸ್.ಗೋನಾಳ, ನಾಮಕರಣ ಸದಸ್ಯ ಹರೀಶ್ ಹೆಚ್.ಎಸ್. ಜಿಲ್ಲಾ ಪ್ರಧಾನ ಕಾರ್ಯದಶರ್ಿ ಎನ್.ಎಂ.ದೊಡ್ಡಮನಿ ಉಪಸ್ಥಿತರಿದ್ದರು. ಸಂಘದ ಇತರ ಬಹುತೇಕ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.