ಮಂಗಸೂಳಿ ಗ್ರಾ.ಪಂ. ಅಧ್ಯಕ್ಷರಾಗಿ ಅಮರ ಪಾಟೀಲ ಆಯ್ಕೆ

ಕಾಗವಾಡ 08: ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮ ಪಂಚಾಯತಿ ತುರಶಿನ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆಯಲ್ಲಿ ತಾಲೂಕಾ ಎಪಿಎಂಸಿ ಸದಸ್ಯ ರವೀಂದ್ರ ಪೂಜಾರಿ ಇವರ ನೇತೃತ್ವದ ಸಹಕಾರ ಪ್ಯಾನಲ್ನ ಅಮರ ಪಾಟೀಲ 4 ಮತಗಳ ಅಂತರದಿಂದ ಚುನಾಯಿತಗೊಂಡರು.

ಶುಕ್ರವಾರ ದಿ. 7ರಂದು ಮಂಗಸೂಳಿ ಪಂಚಾಯತಿ ಕಾಯರ್ಾಲಯದಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜರುಗಿತು. ಚುನಾವಣಾಧಿಕಾರಿಗಳಾಗಿ ಅಥಣಿ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರಾದ ಎ.ಟಿ.ಅಸ್ಕಿ ಕಾರ್ಯನಿರ್ವಹಿಸಿದರು.

ಲೋಕುರ ಮತ್ತು ಮಂಗಸೂಳಿ ಗ್ರಾಮಗಳ ಒಳಗೊಂಡ 40 ಸದಸ್ಯರನ್ನು ಹೊಂದಿರುವ ಪಂಚಾಯತಿಯಾಗಿದೆ. ಸಹಕಾರ ಪ್ಯಾನಲ್ ವತಿಯಿಂದ ಅಮರ ಪಾಂಡುರಂಗ ಪಾಟೀಲ ಇವರು 22 ಮತ ಪಡೆದರೆ ಇವರ ವಿರುದ್ಧ ಲೋಕುರದ ಸದಸ್ಯ ಧರ್ಮರಾಜ ಗಡಗೆ 18 ಮತಗಳನ್ನು ಪಡೆದುಕೊಂಡರು. 4 ಮತಗಳ ಅಂತರದಿಂದ ರವೀಂದ್ರ ಪೂಜಾರಿ ಇವರ ಬೆಂಬಲಿತ ಸದಸ್ಯ ಅಮರ ಪಾಟೀಲ ಆಯ್ಕೆಯಾದರು.

ಅಭಿವೃದ್ಧಿಗೆ ಜಯ: ಚುನಾವಣೆ ಬಳಿಕ ಸಹಕಾರ ಪ್ಯಾನಲ್ ಪ್ರಮುಖರು ಮತ್ತು ಮಾಜಿ ಜಿಪಂ ಸದಸ್ಯ ಹಾಲಿ ಎಪಿಎಂಸಿ ಸದಸ್ಯ ರವೀಂದ್ರ ಪೂಜಾರಿ ಇವರು ಮಾತನಾಡಿ, ಆಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಪಧರ್ೆ ಏರ್ಪಟ್ಟಿತ್ತು. ಕಳೆದ 10 ವರ್ಷಗಳಿಂದ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಸುಮಾರು 4 ಕೋಟಿ ರೂ. ವೆಚ್ಚಗಳಲ್ಲಿ ರಸ್ತೆ, ಚರಂಡಿ, ಮತ್ತು ಏಕ ಕಾಲಕ್ಕೆ 100 ಶೌಚಾಲಯ ಕಟ್ಟಿಸಿದ್ದೇವೆ. ಪಂಚಾಯತಿಯ 5 ವರ್ಷ ಅವಧಿಯಲ್ಲಿ ಚಿದಾನಂದ ಮಾಳಿ, ಬಾಬಾಸಾಹೇಬ ಪಾಟೀಲ ಇವರಿಗೆ ಆಧ್ಯಕ್ಷ ಸ್ಥಾನ ನೀಡಿದ್ದೇವೆ. 20 ತಿಂಗಳ ಅವಧಿಗಾಗಿ ಅಮರ ಪಾಟೀಲ ಇವರನ್ನು ಆಯ್ಕೆಮಾಡಿದ್ದೇವೆ. ಅಭಿವೃದ್ಧಿ ಒಂದೇ ಗುರಿಯಿಟ್ಟಿದ್ದೇವೆ ಎಂದು ಹೇಳಿದರು.

ನೂತನ ಅಧ್ಯಕ್ಷ ಅಮರ ಪಾಟೀಲ ಇವರನ್ನು ಅವರ ಬೆಂಬಲಿಗಾರರು ಅಭಿನಂದಿಸಿ, ಪಟಾಕಿ ಸಿಡಿಸಿ, ಗುಲಾಲ ಎರಚಿ ಸಂಭ್ರಮಾಚರಿಸಿದರು.ಈ ವೇಳೆ ಮಾಜಿ ಆಧ್ಯಕ್ಷ ಚಿದಾನಂದ ಮಾಳಿ, ಬಾಬಾಸಾಹೇಬ ಪಾಟೀಲ, ಸಂಜಯ ತಳವಲಕರ, ಸಂಜಯ ಶೆಟ್ಟಿ, ಅಥಣಿ ಪಿಎಲ್ಡಿ ಬ್ಯಾಂಕ್ ನಿದರ್ೇಶಕ ಭರತ ಮಾಳಿ, ಧೊಂಡಿರಾಮ ವಾಘಮೋಡೆ, ಅನೀಲ ಸಂಕಪಾಳ, ಚಂದು ಮಾಲದಾರ, ಮುಕುಂದ ಪೂಜಾರಿ, ನೇತಾಜಿ ವಾಘೆ, ಪರಶುರಾಮ ಸಾವಂತ, ಪ್ರಶಾಂತ ಪಾಟೀಲ, ಸೇರಿದಂತೆ ಅನೇಕರು ಇದ್ದರು.