ಲೋಕದರ್ಶನ ವರದಿ
ಬೆಳಗಾವಿ 12: ದಿ. 12ರಂದು ಭಾರತೀಯ ಜನತಾ ಪಾಟರ್ಿಯ ರಾಷ್ಟ್ರೀಯ ಅಧ್ಯಕ್ಷ ಅಮೀತ ಷಾ ಹಾಗೂ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆ ಕೊಟ್ಟಂತಹ ದೇಶವ್ಯಾಪಿ ಭಾರತೀಯ ಜನತಾ ಪಾಟರ್ಿಯ ಎಲ್ಲ ನಾಯಕರು, ಕಾರ್ಯಕರ್ತರೂ ಹಾಗೂ ಬೂತ ಮಟ್ಟದ ಕಾರ್ಯಕರ್ತರ ಮನೆಗಳ ಮೇಲೆ ಭಾರತೀಯ ಜನತಾ ಪಕ್ಷದ ಕಮಲ ಚಿಹ್ನೆ ಹೊಂದಿರುವ ದ್ವಜವನ್ನು ಹಾರಿಸುವದರ ಮೂಲಕ ನಮ್ಮ ಮನೆ ಬಿಜೆಪಿ ಮನೆ, ನಮ್ಮ ಪರಿವಾರ ಬಿಜೆಪಿ ಪರಿವಾರ ಈ ಕರೆ ಕೊಟ್ಟ ಕಾರ್ಯಕ್ರಮಕ್ಕೆ ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಮಾಜಿ ಶಾಸಕ ಸಂಜಯ ಬಿ ಪಾಟೀಲ ಅವರು ತಮ್ಮ ಪರಿವಾರದೊಂದಿಗೆ ತಮ್ಮ ಮನೆಯ ಮುಂದೆ ಭಾರತೀಯ ಜನತಾ ಪಕ್ಷದ ಕಮಲ ಚಿಹ್ನೆ ಹೊಂದಿರುವ ಧ್ವಜವನ್ನು ಹಾರಿಸಿ ಮಾತನಾಡುತ್ತಾ ಭಾರತದ ಸ್ವಾತಂತ್ರದ ನಂತರ 70 ವರ್ಷಗಳ ಅವಧಿಯಲ್ಲಿ ಹಲವಾರು ಪಕ್ಷಗಳು ದೇಶದ ಹಿತಕ್ಕಾಗಿ ಹಾಗೂ ದೇಶದ ವಿಕಾಸದ ಸಲುವಾಗಿ ಕೆಲಸ ಮಾಡುತ್ತಾ ಬಂದಿವೆ. ಆದರೆ ದೇಶಕ್ಕೆ ಬಹುಶಃ ಮೊದಲಬಾರಿಗೆ ಭಾರತೀಯ ಜನತಾ ಪಾಟರ್ಿಯ ನರೇಂದ್ರ ಮೋದಿಯವರಂತಹ ನಾಯಕರು ದೊರೆತಿದ್ದಾರೆ.
ದೇಶ, ದೇಶದ ಜನತೆಯ ಉನ್ನತಿಗೆ ಹಗಲಿರುಳು ದುಡಿಯುತ್ತಿರುವ, ಸಬ್ಕಾ ಸಾತ್ ಸಬ್ಕಾ ವಿಕಾಸ ಎಂದು ಎಲ್ಲರನ್ನೂ ಜೊತೆಗೂಡಿಸಿಕೊಂಡು ದೇಶವನ್ನು ಮುಂಚೂಣಿಗೆ ತರುವಲ್ಲಿ ಶ್ರಮವಹಿಸುತ್ತಿದ್ದಾರೆ ಇಂತಹ ನಾಯಕರನ್ನು ಹೊಂದಿರುವ ನಾವು ನಿಜವಾಗಿಯು ಪುಣ್ಯವಂತರು ಕಾರಣ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಾಟರ್ಿಯು ಅಧಿಕಾರಕ್ಕೆ ಬರುವುದರೊಂದಿಗೆ ಮತ್ತೆ ನರೇಂದ್ರ ಮೋದಿಯವರು ಎರಡನೇಯ ಅವಧಿಗೆ ಪ್ರಧಾನ ಮಂತ್ರಿಯಾಗಿಸುವ ಸಂಕಲ್ಪದೊಂದಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಮತ್ತೊಮ್ಮೆ ಭಾಜಪ ಸಕರ್ಾರವು ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ನಾವೆಲ್ಲರೂ ಶ್ರಮಿಸೋಣವೆಂದು ಕರೆ ನಿಡಿದರು.