ನವದೆಹಲಿ, ಮೇ 8 ವೈಯಕ್ತಿಕ ಕಾರಣಗಳಿಂದಾಗಿ 10 ದಿನ ರಜೆ ಪಡೆದಿದ್ದ ಹಿರಿಯ ಬ್ಯಾಟ್ಸ್ಮನ್ ಶೊಯೆಬ್ ಮಲ್ಲಿಕ್ ಅವರು ಇಂಗ್ಲೆಂಡ್ನಲ್ಲಿರುವ ಪಾಕಿಸ್ತಾನ ರಾಷ್ಟ್ರೀಯ ತಂಡಕ್ಕೆ ನಾಳೆ ಮರು ಸೇರ್ಪಡೆಯಾಗಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ. " ಗುರುವಾರ ಸೌಥ್ಹ್ಯಾಮ್ಟನ್ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ಶನಿವಾರ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಎರಡನೇ ಏಕದಿನ ಪಂದ್ಯಕ್ಕೆ ಅವರು ಲಭ್ಯರಾಗಲಿದ್ದಾರೆ" ಎಂದು ಪಿಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮಲ್ಲಿಕ್ ಏ.29 ರಂದು ಪಾಕಿಸ್ತಾನ ತಂಡದಿಂದ 10 ದಿನಗಳ ಕಾಲ ಹೊರಗಿರಲು ಪಿಸಿಬಿಯಿಂದ ಅನುಮತಿ ಪಡೆದಿದ್ದರು. ಆದರೆ, ಪಿಸಿಬಿ ಮಲ್ಲಿಕ್ಗೆ ಬ್ರೇಕ್ ನೀಡುತ್ತಿರುವ ಬಗ್ಗೆ ಸೂಕ್ತ ಕಾರಣ ತಿಳಿಸಿರಲಿಲ್ಲ. "ಮನೆಗೆ ತೆರಳಿ ದೇಶೀಯ ಸಮಸ್ಯೆಯನ್ನು ಇತ್ಯರ್ಥಪಡಿಸುವ ಸಲುವಾಗಿ ಮಲ್ಲಿಕ್ಗೆ 10 ದಿನಗಳ ಕಾಲ ಪಿಸಿಬಿ ರಜೆ ನೀಡಿತ್ತು. ನಂತರ ಅವರು ತಂಡ ಸೇರಿಕೊಳ್ಳಲು 10 ದಿನ ಕಾಲಾವಕಾಶ ನೀಡಿತ್ತು" ಎಂದು ಪಿಸಿಬಿ ತಿಳಿಸಿದೆ. ಐಸಿಸಿ ವಿಶ್ವಕಪ್ಗೆ 15 ಆಟಗಾರರ ಪಾಕಿಸ್ತಾನ ತಂಡದಲ್ಲಿ ಶೊಯೆಬ್ ಮಲ್ಲಿಕ್ಗೆ ಅವಕಾಶ ನೀಡಲಾಗಿದೆ. ಅವರು 282 ಏಕದಿನ ಪಂದ್ಯಗಳಾಡಿದ್ದು, 7481 ರನ್ ಗಳಿಸಿದ್ದಾರೆ. 111 ಟಿ-20 ಪಂದ್ಯಗಳಲ್ಲಿ 2263 ರನ್ ಬಾರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯ ಮೊದಲನೇ ಕಾದಾಟವನ್ನು ಇಂದು ಓವಲ್ನಲ್ಲಿ ಆಡಲಿದೆ.