ಜನರಲ್ಲಿ ಸ್ವಚ್ಛತೆ ಅಭಿಯಾನದ ಅರಿವು ಮೂಡಿಸಿ: ಲಮಾಣಿ

ಉಗರಗೋಳ(ತಾ.ಸವದತ್ತಿ)-1. ಸುಂದರ ಹಾಗೂ ನಿರ್ಮಲವಾದ ಸ್ವಚ್ಚ ಗ್ರಾಮವನ್ನಾಗಿ ಮಾಡಲು, ಜನರಲ್ಲಿ ಸ್ವಚ್ಛತೆ ಅಭಿಯಾನದ ಬಗ್ಗೆ ಅರಿವು ಮೂಡಿಸಿ, ಸದೃಢ ರಾಷ್ಟ್ರ ನಿಮರ್ಾಣಕ್ಕೆ ಗ್ರಾಮದ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ಉಗರಗೋಳ ಗ್ರಾಮ ಪಂಚಾಯತ ಅಧ್ಯಕ್ಷ ಕೃಷ್ಣಪ್ಪ ಲಮಾಣಿ ಕರೆ ನೀಡಿದರು.

ಸವದತ್ತಿ ತಾಲೂಕಿನ ಉಗರಗೋಳ ಗ್ರಾಮ ಪಂಚಾಯತಿ ಆವರಣದಲ್ಲಿ ಮಂಗಳವಾರ ದಿ. 4ರಂದು ಗಾಂಧೀ ಗ್ರಾಮ ಪುರಸ್ಕಾರದ ಅನುದಾನದಡಿ 5 ಲಕ್ಷ ರೂ. ವೆಚ್ಚದ ಕಸ ವಿಲೇವಾರಿಗಾಗಿ ನೂತನವಾಗಿ ಖರೀದಿಸಿದ ವಾಹನಕ್ಕೆ ಚಾಲನೆ ಹಾಗೂ ಸ್ವಚ್ಛ ಮೇವ ಜಯತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಮೊದಲ ಹಂತದಲ್ಲಿ ರಾಜ್ಯದ 1 ಸಾವಿರ ಗ್ರಾಮಗಳನ್ನು ಸ್ವಚ್ಛ ಮೇವ ಜಯತೆ ಆಂದೋಲನದಡಿ ನಮ್ಮ ಗ್ರಾಮವು ಆಯ್ಕೆಯಾಗಿರುವುದು ಅತೀವ ಸಂತಸ ಮೂಡಿಸಿದ್ದು ಇದರ ಲಾಭ ಪಡೆದುಕೊಳ್ಳೋಣ ಎಂದರು. 

ಉಗರಗೋಳ ಅಭಿವೃದ್ಧಿ ಅಧಿಕಾರಿ ಶರತಕುಮಾರ ಕೆ ಎಸ್ ಮಾತನಾಡಿ  ಗ್ರಾಮದ ವ್ಯಾಪ್ತಿಗೆ ಘನತ್ಯಾಜ್ಯ ಘಟಕದ ಅವಶ್ಯವಿದೆ. ಶಿಕ್ಷಣ ಮತ್ತು ಆರೋಗ್ಯದ ಜೊತೆಗೆ ಸ್ವಚ್ಛತೆಗೂ ಆದ್ಯತೆ ನೀಡಬೇಕಿದೆ. ಗ್ರಾಮದ ಅಭಿವೃದ್ಧಿಯಲ್ಲಿ ಎಲ್ಲರ ಸಹಕಾರ ಅತ್ಯವಶ್ಯವೆಂದ ಅವರು ಗ್ರಾಮದ ಶುಚಿ ಕಾಪಾಡುವ ದೃಷ್ಠಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿವೆ ಇದರ ಲಾಭ ಪಡೆದುಕೊಳ್ಳಬೇಕೆಂದರು.

ಗ್ರಾಪಂ ಉಪಾಧ್ಯಕ್ಷೆ ಬಸವ್ವ ಗುಡೆನ್ನವರ, ಕಸ್ತೂರಿ ಲಮಾಣಿ, ಲಕ್ಷೀಬಾಯಿ ಲಮಾಣಿ, ಲಕ್ಷೀ ಲಮಾಣಿ, ಮಹಾದೇವಿ ಕುಂಬಾರ, ಸುಭಾಸ ಮುದೆನ್ನವರ, ಪರಸನಗೌಡ ಪಾಟೀಲ, ಪ್ರಭಾವತಿ ಚಪ್ಪರಮನಿ, ಹಿರೇಕ್ಕ ಗುಡದರಿ, ರೋಷನಬೆಗಂ ಹೂಲಿ, ಗೀರಿಜವ್ವ ಬಾಕರ್ಿ, ಮಹಾಲಕ್ಷ್ಮೀ ಸಂಗಳದ, ನೇತ್ರಾವತಿ ಕೇಳಗಡೆ, ಬಸವ್ವ ಗುಡೆನ್ನವರ, ಪೀರಮಾ ಬಾರಿಗಿಡದ, ಮಹಾದೇವಿ ಬುಳ್ಳನ್ನವರ, ಮಂಜುಳಾ ಕುಂಟೂಜಿ, ಯಲ್ಲಪ್ಪ ಮಿಯಪ್ಪನವರ, ಜಯಪ್ಪ ಹೇಬಸೂರ, ಮೃತ್ಯುಂಜಯ ತೋರಗಲ್ಲಮಠ, ವಿರಪಾಕ್ಷ ಹೂಲಿ, ಕಾಶೀಮಸಾಬ ನರಸಾಪೂರ, ಮಲ್ಲಪ್ಪ ಸಿದ್ದಕ್ಕನವರ, ರೇಣಪ್ಪ ಭೋವಿ, ಪ್ರಲ್ಹಾದ ಕೆಳಗಡೆ, ಲಿಲಾವತಿ ಗಂದಿಗವಾಡ, ಮಾರುತಿ ಪಡಸುಣಗಿ, ಮಹಾಂತೇಶ ಮಲ್ಲಾಡ, ಬಸವರಾಜ ಜಾಲಗಾರ, ಸಿದ್ದು ಸೇರಿದಂತೆ ಗ್ರಾಮಸ್ಥರು ಹಾಗೂ ಪಂಚಾಯತ ಸಿಬ್ಬಂದಿ ಇದ್ದರು.