ಮಹಾವೀರ ಆಂಗ್ಲ ಮಾಧ್ಯಮ ಶಾಲೆಗೆ ವೀರಾಗ್ರಣಿ

ರಾಯಬಾಗ 26: ಎಸ್.ಕೆ. ಪಬ್ಲಿಕ್ ಶಾಲೆ ಹುಕ್ಕೇರಿಯಲ್ಲಿ ಇತ್ತಿಚಿಗೆ ಜರುಗಿದ ಸಿ.ಬಿ.ಎಸ್.ಇ.ಶಾಲೆಗಳ 2018-19ನೇ ಸಾಲಿನ ಅಥ್ಲೇಟೆಕ್ ಕ್ರೀಡಾಕೂಟದಲ್ಲಿ ರಾಯಬಾಗ ಪಟ್ಟಣದ ಮಹಾವೀರ ಆಂಗ್ಲ ಮಾಧ್ಯಮ ವಸತಿ ಶಾಲೆಯ ವಿದ್ಯಾಥರ್ಿಗಳು ಭಾಗಹಿಸಿ 23 ಚಿನ್ನದ ಪದಕ, 8 ಬೆಳ್ಳಿಯ ಪದಕ ಹಾಗೂ 11 ಕಂಚಿನ ಪದಕಗಳನ್ನು ಪಡೆದುಕೊಂಡು ಶಾಲೆಗೆ ವೀರಾಗ್ರಾಣಿ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಈ ಸಾಧನೆ ಮಾಡಿದ  ವಿದ್ಯಾಥರ್ಿಗಳನ್ನು ಲಕ್ಷ್ಮಿಸೇನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಿ.ಎಮ್.ಶೆಟ್ಟಿ ಹಾಗೂ ಪ್ರಾಚಾರ್ಯ ವಸುಮತಿ ಶಿಂದೆ ಅಭಿನಂದಿಸಿದ್ದಾರೆ. ದೈಹಿಕ ಶಿಕ್ಷಕರಾದ ಬಿ.ಬಿ.ಮುನ್ನೋಳಿ ಹಾಗೂ ವಿನೋದ ಪಾಟೀಲ ವಿದ್ಯಾಥರ್ಿಗಳಿಗೆ ತರಬೇತಿಯನ್ನು ನೀಡಿದ್ದರು.