ಅಥಣಿ 22: 20ನೇ ಶತಮಾನದ ಪ್ರಥಮಚಾರ್ಯ ಚಾರಿತ್ರ್ಯ ಚಕ್ರವತರ್ಿ ಶಾಂತಿಸಾಗರ ಮುನಿ ದೀಕ್ಷಾ ಶತಾಬ್ದಿ ಮಹೋತ್ಸವ ಅಥಣಿ ಪಟ್ಟಣದ ಮಹಾವೀರ ಭವನದಲ್ಲಿ ಜರುಗಿತು.
ಶಾಂತಿಸಾಗರ ಮಹರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕೇಂದ್ರ ಸಾಹಿತ್ಯ ಆಕ್ಯಾಡೆಮಿ ಸದಸ್ಯ ಡಾ.ಬಾಳಾಸಾಬ ಲೋಕಪುರ ಮಾತನಾಡಿ ಮುನಿ ಪರಂಪರೆಯು ನಾಶವಾಗುವ ಸಂದರ್ಭದಲ್ಲಿ ಮುನಿ ದೀಕ್ಷೆ ಪಡೆದು ಸಾಕಷ್ಟು ಪವಾಡಗಳಿಗೆ ಸಾಕ್ಷಿಯಾದರು. ಜೈನ ಧರ್ಮದ ಪ್ರಚಾರಕ್ಕಾಗಿ ಇಡಿ ದೇಶದಲ್ಲಿ ಸುಮಾರು 35000 ಕಿ.ಮಿ. ದಷ್ಟು ಪಾದಯಾತ್ರೆ ಮೂಲಕ ಸುತ್ತಾಡಿ ಜೈನ ಧರ್ಮದ ಸಂದೇಶಗಳನ್ನು ಪ್ರಚಾರ ಮಾಡಿ ಜಗತ್ತಿಗೆ ಶಾಂತಿಯ ಸಂದೇಶ ನೀಡಿದ ಅವರು ಮುನಿದೀಕ್ಷಾ ಶತಾಬ್ಧಿ ಮಹೋತ್ಸವ ಕಾರ್ಯಕ್ರಮಗಳನ್ನು ಒಂದು ವರ್ಷ ಪೂರ್ಣ ಶ್ರವಣ ಬೆಳಗೋಳದ ಜಗದ್ಗುರು ಚಾರುಕೀತರ್ಿ ಭಟ್ಟಾರಕರ ನಿದರ್ೆಶನದಲ್ಲಿ ಹಾಗೂ 108 ವರ್ಧಮಾನ ಸಾಗರರ ಪಾವನ ಸಾನಿಧ್ಯದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಲೆಕ್ಕ ಪರಿಶೋಧಕ ಎಸ್.ಬಿ.ಲಠ್ಠೆ ಉದ್ಘಾಟಿಸಿ ಮಾತನಾಡಿದರು. ಚಂದ್ರಕಾಂತ ಘೊಂಗಡಿ ಅಧ್ಯಕ್ಷತೆ ವಹಿಸಿದ್ದರು.
ನೀರಾವರಿ ಇಲಾಖೆಯ ಅಧಿಕಾರಿ ಅರುಣ ಯಲಗುದ್ರಿ, ಅಶೋಕ ರೊಟ್ಟಿ, ಧನಪಾಲ ಮೇಕನಮರಡಿ, ಅಖಿಲ ಕನರ್ಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷ ಜಯಶ್ರೀ ಕೀಣಂಗೆ ರೂಪವತಿ ಪಾಟೀಲ ಹಾಗೂ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು.
ಪೋಟೊ ಶೀಷರ್ಿಕೆ -20ನೇ ಶತಮಾನದ ಪ್ರಥಮಚಾರ್ಯ ಚಾರಿತ್ರ್ಯ ಚಕ್ರವತರ್ಿ ಶಾಂತಿಸಾಗರ ಮುನಿ ದೀಕ್ಷಾ ಶತಾಬ್ದಿ ಮಹೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು