ಮಹಾಲಿಂಗಪುರ ಶಿಸ್ತು ಕಲಿಸುವ ಸಂಭ್ರಮವೇ ಚನ್ನಮ್ಮ ಸಂಭ್ರಮ: ತಿಮ್ಮಾಪುರ

ಲೋಕದರ್ಶನ ವರದಿ

ಮಹಾಲಿಂಗಪುರ 13: ಶಿಸ್ತನ್ನು ನಮ್ಮ ವೇಷ ಭೂಷಣವನ್ನು ಮತ್ತು ಸಂಸ್ಕೃತಿ, ಸಂಪ್ರದಾಯ, ಜ್ಞಾನವನ್ನು ಕಲಿಸುವ ಸಂಭ್ರಮವೇ ಚನ್ನಮ್ಮ ಸಂಭ್ರಮ ಎಂದು ಆರ್ಸಿಯು ಸಿಂಡಿಕೇಟ್  ಸದಸ್ಯ ಎಚ್.ಆರ್.ತಿಮ್ಮಾಪುರ ಹೇಳಿದರು.

ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಕಲಾ, ವಿಜ್ಞಾನ ಹಾಗೂ ಡಿಡಿಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯ ಚನ್ನಮ್ಮ ಸಂಭ್ರಮ-8ರ ನಿಮಿತ್ಯ ಸ್ನಾತಕೋತ್ತರ ಪದವೀಧರರ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ವಾದ್ಯ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,  ಸಾಂಸ್ಕೃತಿಕ ಚಟುವಟಿಕೆಗಳು ವ್ಯಕ್ತಿತ್ವ ವಿಕಸನದ ಜೊತೆಗೆ ಸಮಾಜದಲ್ಲಿ ಗೌರವ ಸ್ಥಾನಗಳನ್ನು ನೀಡಲಿ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ವಿದ್ಯಾಥರ್ಿ ಕಲ್ಯಾಣ ವಿಭಾಗದ ನಿದರ್ೇಶಕಿ ಡಾ.ಚಂದ್ರಿಕಾ ಕೆ.ಬಿ. ಮಾತನಾಡಿ, ಪ್ರತಿಭೆಗಳ ಅನಾವರಣಕ್ಕಾಗಿ ವಿಶ್ವವಿದ್ಯಾಲಯಗಳು ಯುವಜನೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು. ಇದರ ಸದುಪಯೋಗವನ್ನು ಎಲ್ಲ ವಿದ್ಯಾಥರ್ಿಗಳು ಪಡೆದುಕೊಳ್ಳಬೇಕು. ದೇಶಿ ಕಲೆಯ ಒಂದು ಸಂಸ್ಕೃತಿ ಮೂಲಕ ಪ್ರತಿಭೆಯನ್ನು ಹೊರಹೊಮ್ಮಿಸಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಂ.ಪಾಟೀಲ ಮಾತನಾಡಿ, ಇಂದು ವಿಶ್ವವಿದ್ಯಾಲಯ ಕೋಸರ್ುಗಳು ಹಳ್ಳಿಗೂ ಬರುತ್ತಿರುವುದು ಹೆಮ್ಮೆಯ ಸಂಗತಿ. ಮತ್ತು ವಿದ್ಯಾಥರ್ಿಗಳಲ್ಲಿ ಸ್ಪಧರ್ಾ ಮನೋಭಾವನೆ ಮುಖ್ಯ. ಆ ಸ್ಪಧರ್ಾ ಮನೋಭಾವನೆಯನ್ನು ಬೆಳೆಸುವ ಕೆಲಸವನ್ನು ಈ ಯುವಜನೋತ್ಸವ ಮಾಡುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆಎಲ್ಇ ಸ್ಥಳೀಯ ಆಡಳಿತ ಮಂಡಳಿ ಸದಸ್ಯರಾದ ಬಿ.ಎ.ಬಂತಿ, ಎ.ಬಿ.ಅಂಗಡಿ, ಕಾರ್ಯಕ್ರಮದ ಸಂಯೋಜಕರಾದ ವ್ಹಿ.ಬಿ.ಕಾಬರಾ, ಸದಸ್ಯರಾದ ಕೆ.ಎಂ.ಅವರಾದಿ, ಎಲ್.ಎಂ.ಹಿರೆಕೋಡಿ, ಸಿ.ಎಸ್. ಚೋಪಡೆ ಹಲವರು ಇದ್ದರು.

ವಿದ್ಯಾಥರ್ಿನಿ ಸವಿತಾ ಭಜಂತ್ರಿ ಪ್ರಾಥರ್ಿಸಿದರು. ಕಾರ್ಯಕ್ರಮದ ಸಂಯೋಜಕರಾದ ಎಸ್.ಎಂ.ಬನ್ನೂರ ಸ್ವಾಗತಿಸಿದರು. ವ್ಹಿ.ಬಿ.ಕಾಬರಾ  ಅತಿಥಿಗಳನ್ನು ಪರಿಚಯಿಸಿದರು.  ಡಾ.ಎಸ್.ಡಿ.ಸೋರಗಾಂವಿ ವಂದಿಸಿದರು. ಅಶೋಕ ಕೆ.ಎಸ್. ಆಶಾರಾಣಿ ಚಿನಗುಂಡಿ ನಿರೂಪಿಸಿದರು.