ಮಡಿವಾಳ ಮಾಚಿದೇವರ ಜಯಂತ್ಯೋತ್ಸವ

ರಾಣಿಬೆನ್ನೂರ01: ಜಗಜ್ಯೋತಿ ಬಸವಣ್ಣನವರ ಸಮಕಾಲಿನವರಾದ ಕಾಯಕಯೋಗಿ ಮಡಿವಾಳ ಮಾಚಿದೇವರ ಕೊಡುಗೆ ಈ ಸಮಾಜಕ್ಕೆ ಅಪಾರವಾಗಿದೆ. ತಮ್ಮ ನಿಷ್ಠುರ ಹಾಗೂ ಪ್ರಾಮಾಣಿಕ ಕಾಯಕದೊಂದಿಗೆ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಿ ಅಮರರರಾಗಿದ್ದಾರೆ. ಅಂತಹ ಶರಣರ ಆದರ್ಶಗಳನ್ನು ಸರ್ವರೂ ರೂಢಿಸಿಕೊಂಡು ಮುನ್ನಡೆದಾಗ ಮಾತ್ರ ಜಯಂತ್ಯೋತ್ಸವವನ್ನು ಆಚರಿಸಿದ್ದಕ್ಕೂ ಸಾರ್ಥಕವಾಗುತ್ತದೆ. ಈ ದಿಸೆಯಲ್ಲಿ ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡುವುದರ ಜೊತೆಗೆ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಜಿಪಂ ಸದಸ್ಯ ಏಕನಾಥ ಬಾನುವಳ್ಳಿ ಹೇಳಿದರು     

 ನಗರದ  ಅಗಸರ ಮಠದ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ನಗರಸಭೆ, ತಾಪಂ, ತಾಲೂಕು ಮಡಿವಾಳ ಸಮಾಜ ಮತ್ತು ಸರಕಾರದ ವಿವಿಧ ಇಲಾಖೆಗಳ ಹಾಗೂ ವಿವಿಧ ಸಂಘಗಳ ಆಶ್ರಯದಲ್ಲಿ  ಏರ್ಪಡಿಸಲಾಗಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತ್ಯೋತ್ಸವ ಕಾರ್ಯಕ್ರಮವನು ಉದ್ಘಾಟಿಸಿ ಮಾತನಾಡಿದರು 

ಸಾನಿಧ್ಯ ವಹಿಸಿ ಮಾತನಾಡಿದ ವಿರಕ್ತಮಠದ ಗುರುಬಸವ ಮಹಾಸ್ವಾಮಿಗಳು ಮಡಿವಾಳ ಜನಾಂಗದವರು ಕೊಳಕಾದ ಬಟ್ಟೆಗಳನ್ನು ಶುಚಿ ಮಾಡುವ ಶುದ್ಧ ಕೆಲಸದಲ್ಲಿರುವುದು ಒಳ್ಳೆಯ  ಸಂಸ್ಕೃತಿ. ಆದರೆ ಮುಂದಿನ ದಿನಮಾನಗಳಲ್ಲಿ ಮಕ್ಕಳಿಗೂ ಸಹ ಈ ಕಾಯಕವನ್ನು ಅಂಟಿಸದೆ ಉತ್ತಮ ಶಿಕ್ಷಣ, ಸಂಸ್ಕಾರ ಕೊಡಿಸುವುದರ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಪ್ರಜ್ವಲಿಸುವಂತೆ ಬೆಳೆಸಬೇಕು ಎಂದರು.

     ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ ಎನ್ ಮಾತನಾಡಿ, ಸಮಾಜವನ್ನು ತಿದ್ದುವ ಕೆಲಸ ಮಾಚಿದೇವರು ಮಾಡಿದ್ದರು. ಭಕ್ತಿಯಿಂದ ಸಾಮಾಜಿಕ ಸುವ್ಯವಸ್ಥೆ, ಧಾಮರ್ಿಕ, ಶರಣ ಸಂಸ್ಕೃತಿಯ ಮೂಲಕ ಮರೆಯಲಾರದಂತಹ ಕೊಡುಗೆ ನೀಡಿದ್ದಾರೆ. ಹೀಗಿರುವಾಗ ಯಾವುದೇ ಶರಣರನ್ನು ಧಾಮರ್ಿಕ ಪಂಥಕ್ಕೆ ಹಾಗೂ ಜಾತೀಯತೆಗೆ ಸೀಮಿತಗೊಳಿಸದೆ ಅವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಸಾಗಿದಾಗ ನೆಮ್ಮದಿಯ ಜೀವನ ಕಾಣಲು ಸಾಧ್ಯ ಎಂದರು 

       ಉಪನ್ಯಾಸಕಿ ಸಾಯಿಲತಾ ಮಡಿವಾಳರ ಮಾತನಾಡಿ ಮಡಿವಾಳ ಮಾಚಿದೇವರು ಬಸವಣ್ಣನವರ ಸಂದೇಶವನ್ನು ಅನುಸರಿಸಿ ಬಂದವರು. ತಮ್ಮ ಕಾಯಕವನ್ನು ನಿಷ್ಠುರತೆಯಿಂದ ಮಾಡಿದವರು. ಸಮಾಜದ ಅಂಕು ಡೊಂಕು ತಿದ್ದುವಲ್ಲಿ ಮಹತ್ತರವಾದ ಕೊಡುಗೆ ನೀಡಿದವರು. ಇಂತಹ ಶರಣನ ವಚನಗಳು ಇದೀಗ 146ವಚನಗಳು ಮಾತ್ರ ಲಭ್ಯವಾಗಿವೆ. 

      ಇದೇ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರಿಗೆ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಆನಂತರ ಮಠದ ಆವರಣದಿಂದ  ಮೆರವಣಿಗೆಯು 100ಕ್ಕೂ ಅಧಿಕ ಕುಂಭ ಹೊತ್ತ ಮಹಿಳೆಯರ ಮತ್ತು ವೈವಿಧ್ಯಮಯ ವಾಧ್ಯಮೇಳಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವೇದಿಕೆಗೆ ತಲುಪಿತು. ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಗೈರಾಗಿದ್ದುದು ಸಾಮಾನ್ಯವಾಗಿತ್ತು.