ಎಂಎಸ್‌ಪಿ: ಜಗಜಿತ್‌ಸಿಂಗ್‌ದಲ್ಲೆವಾಲ್ ಜೀವ ಉಳಿಸಲು ಒತ್ತಾಯ
ಹೊಸಪೇಟೆ 13: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯನಗರ ಜಿಲ್ಲೆ, ಹೊಸಪೇಟೆ ಕೇಂದ್ರ ಸರ್ಕಾರ ವಿರುದ್ಧ ಇಲ್ಲಿಯವರೆಗೆ 45 ದಿನಗಳಿಂದ ಉಪವಾಸ ನಡೆಸುತ್ತಿರುವ ರೈತ ನಾಯಕರಾದ ಜಗಜಿತ್‌ಸಿಂಗ್ ದಲ್ಲೆವಾಲ್ ಅವರು ರೈತರು ಬೆಳೆಯುವ ಬೆಳೆಗಳಿಗೆ ಅವರು ಎಂ.ಎಸ್.ಪಿ. ಕನಿಷ್ಠ ಬೆಂಬಲ ಬೆಲೆ ಡಾಽಽ ಎಂ.ಎಸ್.ಸ್ವಾಮಿನಾಥ ಅವರ ವರದಿಯ ಪ್ರಕಾರ ಸಿ2+50 ಮಾನದಂಡ ಅಧಾರವಾಗಿ ಹಾಗೂ ಶಾಸನಬದ್ಧವಾಗಿ ಜಾರಿಗೊಳಿಸಲು ಒತ್ತಾಯಿಸಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈಗ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಅವರಿಗೆ ಏನಾದರೂ ಅಪಾಯವಾದರೆ ಇದಕ್ಕೆ ಕೇಂದ್ರ ಸರ್ಕಾರ ಹೊಣೆಗಾರಿಕೆ ಹೋರಬೇಕಾಗುತ್ತದೆ ಎಂದು ಎಚ್ಚರಿಕೆ ಮುಟ್ಟಿಸಲು ನಾವು ಇಂದು ರಾಜ್ಯದ ಪ್ರತಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಎಚ್ಚರಿಕೆ ಮುಟ್ಟಿಸಲು ಮನವಿ ಪತ್ರ ಕೊಡಲು ಪ್ರಧಾನಿ ರೈತರ ಜೊತೆ ಹುಡುಗಾಟಿಕೆ ನಡೆಸುತ್ತಿದ್ದಾರೆ. ಇದಲ್ಲದೆ ರೈತರ ಮೂಗಿಗೆ ತುಪ್ಪ ಸವರಿ ತಮಾಷೆ ಮಾಡುತ್ತಿದ್ದಾರೆ. ಇದು ರೈತರಿಗೆ ವಿರೋಧವಾಗಿದ್ದು ಇದನ್ನು ಖಂಡಿಸುತ್ತಿದ್ದೇವೆ. ಇದೆಲ್ಲ ರೈತರು ಬೆಳೆದ ಬೆಳೆಗಳಿಗೆ ಎಂ.ಎಸ್.ಪಿ. ಶಾಸನ ಬದ್ಧ ಜಾರಿಗೊಳಿಸಿ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಜೀವ ಉಳಿಸುವ ಕೆಲಸ ಮಾಡಬೇಕೆಂದು ಒತ್ತಾಯಿಸುತ್ತಿದ್ದೇವೆ.
ಈ ಸಂದರ್ಭದಲ್ಲಿ ಆರ್.ಆರ್ ತಾಯಪ್ಪ, ಕೆ.ಜಹಿರುದ್ದೀನ್, ದೊಡ್ಡಗಾಳೆಪ್ಪ, ಅಯ್ಯಣ್ಣ, ಕೆ.ಮೂರ್ತಿ, ಕೆ.ಹೇಮರೆಡ್ಡಿ, ಹೆಚ್.ಪಿ.ನಾಗರಾಜ, ಜಿ.ಗೋವಿಂದಪ್ಪ, ಜಿ.ಬಸವರಾಜ, ರಾಮಾಂಜಿನಿ, ಹಾಗೂ ಇನ್ನಿತರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಭಾಗವಹಿಸಿ ಮನವಿ ಪತ್ರ ಸಲ್ಲಿಸಿದರು.