ರಾಮದುರ್ಗ 20: ಸೋಮವಾರ ಸಿಡಿಲು ಬಡಿದು ಮೃತಪಟ್ಟ ತಾಲೂಕಿನ ಚಿಕ್ಕೊಪ್ಪ ಎಸ್.ಕೆ ಗ್ರಾಮದ ಬಾಲಪ್ಪ ನಾಗಪ್ಪ ಕಳಸದ ಅವರ ಮನೆಗೆ ಮಂಗಳವಾರ ಭೇಟಿ ನೀಡಿದ ಶಾಸಕ ಮಹಾದೇವಪ್ಪ ಯಾದವಾಡ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಪ್ರಕೃತಿಯಲ್ಲಿ ನಡೆಯುವ ವೈಪರಿತ್ಯದಿಂದಾಗುವ ಅವಘಡಕ್ಕೆ ಸರಕಾರದಿಂದ ಸುಮಾರು 4 ಲಕ್ಷ ಜಿಲ್ಲಾಧಿಕಾರಿಗಳ ನಿಧಿಯಿಂದ 1 ಲಕ್ಷ ಸೇರಿದಂತೆ ಒಟ್ಟು ರೂ. 5 ಲಕ್ಷ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ ಅವರು, ಮದುವೆಯಾಗದ ಯುವಕ ಬಲಿಯಾಗಿದ್ದು ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಮೃತನ ಕುಟುಂಬಕ್ಕೆ ತಲುಪಿಸುವಲ್ಲಿ ಅಧಿಕಾರಿಗಳು ಗಮನ ಹರಿಸಬೇಕು. ಪರಿಹಾರದಿಂದ ಬಂದ ಹಣವನ್ನು ಮೃತನ ತಾಯಿಯ ಭವಿಷ್ಯತ್ತಿನ ದೃಷ್ಠಿಯಿಂದ ಉಪಯುಕ್ತವಾಗುವ ನಿಟ್ಟಿನಲ್ಲಿ ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಗ್ರೇಡ್-2 ತಹಶೀಲ್ದಾರ್ ವಿಜಯಕುಮಾರ ಕಡಕೋಳ, ಸಹಾಯಕ ಕೃಷಿ ನಿದರ್ೇಶಕ ಎಸ್.ಎಫ್. ಬೆಳವಟಗಿ, ಜಿ.ಪಂ ಸದಸ್ಯೆ ಶಿವಕ್ಕ ಬೆಳವಡಿ, ಎಪಿಎಂಸಿ ಸದಸ್ಯ ದ್ಯಾವಪ್ಪ ಬೆಳವಡಿ, ಬಾಬು ವಾಲಿ, ಮಹಾದೇವ ಲಕ್ಕನ್ನವರ, ರವಿ ಅಜ್ಜಿ, ಚಿನ್ನಪ್ಪ ಮುಳ್ಳೂರ ಸೇರಿದಂತೆ ಇತರರಿದ್ದರು.