ಏಕತಾ ಓಟಕ್ಕೆ ಶಾಸಕ ದಿನಕರ ಶೆಟ್ಟಿ ಚಾಲನೆ

ಲೋಕದರ್ಶನ ವರದಿ

ಕುಮಟಾ,31: ಸರದಾರ ವಲ್ಲಭಭಾಯಿ ಪಟೇಲರ ಜನ್ಮದಿನದ ಅಂಗವಾಗಿ ಬನ್ನಿ ದೇಶದ ಏಕತೆಗಾಗಿ ಎಲ್ಲರೂ ಒಂದಾಗಿ ಓಡೋಣ ಎಂದು ಭಾರತೀಯ ಜನತಾ ಪಕ್ಷವು ರಾಷ್ಟ್ರವ್ಯಾಪಿಯಾಗಿ ನೀಡಿದ ಕರೆಯ ಹಿನ್ನೆಲೆಯಲ್ಲಿ ತಾಲೂಕಾ ಬಿಜೆಪಿ ಮಂಡಳದಿಂದ ಏಕತಾ ಓಟ ಮಂಗಳವಾರ ನಡೆಯಿತು.

                ಬಿಜೆಪಿ ಕಾಯರ್ಾಲಯದಿಂದ ಹೊರಟ ಏಕತಾ ಓಟಕ್ಕೆ ಶಾಸಕ ದಿನಕರ ಶೆಟ್ಟಿ ಹಾಗೂ ಮಂಡಲಾಧ್ಯಕ್ಷ ಕುಮಾರಮಾಕರ್ಾಂಡೆ ಚಾಲನೆ ನೀಡಿದರು.

ಸಂದರ್ಭದಲ್ಲಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಅವರು, ಸರದಾರ ವಲ್ಲಭಭಾಯಿ ಪಟೇಲರ ಅಗಾಧ ದೂರದಶರ್ಿತ್ವ, ಧೈರ್ಯ, ದಿಟ್ಟ ಹೋರಾಟ ಸ್ವಭಾವ, ಮುತ್ಸದ್ದಿತನದ ಆಡಳಿತ ವೈಖರಿ, ಸಮಗ್ರತೆಯಲ್ಲಿ ಏಕತೆಯ ದೃಷ್ಟಿಕೋನ ಮುಂತಾದವು ಸಾರ್ವಕಾಲಿಕ ಮಾರ್ಗದಶರ್ಿಯಾಗಿದೆ. ಪ್ರಸಕ್ತ ಕಾಲಘಟ್ಟದಲ್ಲಿ ಪಟೇಲರ ಜೀವನಾದರ್ಶಗಳು ಅತ್ಯಂತ ಪ್ರಸ್ತುತ ಹಾಗೂ ಚಿಕಿತ್ಸಾಕಾರಿ ಎಂದರು.

                ಏಕತಾ ಓಟವು ಬಿಜೆಪಿ ಕಛೇರಿಯಿಂದ ಹೆಗಡೆ ಕ್ರಾಸ್ ಸರ್ಕಲ್ ಮೂಲಕ ಹೆದ್ದಾರಿ ಮಾರ್ಗವಾಗಿ ಮಾಸ್ತಿಕಟ್ಟೆ ದೇವಾಲಯದ ಎದುರು ಸಂಪನ್ನಗೊಂಡಿತು. ಜಿಪಂ ಸದಸ್ಯ ಗಜಾನನ ಪೈ, ಹಿರಿಯ ಮುಖಂಡ ವಿನೋದ ಪ್ರಭು, ಪ್ರಮುಖರಾದ ಹೇಮಂತಕುಮಾರ ಗಾಂವಕರ, ಎಂ ಜಿ ಭಟ್ಟ, ಪ್ರಶಾಂತ ನಾಯ್ಕ, ಜಿ ಹೆಗಡೆ, ರಾಮಚಂದ್ರ ದೇಸಾಯಿ, ರಾಮ ಮಡಿವಾಳ, ಅಶೋಕ ಪ್ರಭು, ಡಾ ಜಿ ಜಿ ಹೆಗಡೆ, ಗಜಾನನ ಗುನಗಾ, ಎಸ್ ಎಸ್ ಹೆಗಡೆ, ವಿಶ್ವನಾಥ ನಾಯ್ಕ, ಸುಧಾ ಗೌಡ, ಇಂದಿರಾ ಮುಕ್ರಿ, ಜಯಾ ಶೇಟ್, ನಾರಾಯಣ ಉಡದಂಗಿ, ಚೇತೇಶ ಶಾನಭಾಗ ಹಾಗೂ ಮೊದಲಾದವರು ಉಪಸ್ಥಿತರಿದ್ದರು. .