ಲೈಟಾಗಿ ಲವ್ವಾಗಿದೆ ಚಲನಚಿತ್ರ ಪ್ರದರ್ಶನ

ಲೋಕದರ್ಶನ ವರದಿ 

ಸಂಕೇಶ್ವರ 16: ಉತ್ತರ ಕನರ್ಾಟಕದ ಕಲಾವಿದರು ಸೇರಿ ನಟಿಸಿರುವ "ಲೈಟಾಗಿ ಲವ್ವಾಗಿದೆ" ಚಲನಚಿತ್ರ ನಗರದ ಸಾಯಿನಾಥ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಂಡಿತ್ತು. 

ನಗರದ ಸಾಯಿನಾಥ ಚಿತ್ರ ಮಂದಿರದಲ್ಲಿ ನಡೆದ ಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಚಿತ್ರದ ನಾಯಕನ ಗೆಳೆಯನ ಪಾತ್ರದಲ್ಲಿ ನಟಿಸಿದ ಸ್ಥಳೀಯ ಪ್ರತಿಭೆ ಶ್ರೀಕಾಂತ ಘಸ್ತಿ ಮಾತನಾಡಿ, ಉತ್ತರಕನರ್ಾಟಕದ ವಿವಿಧ ಪ್ರಮುಖ ಸ್ಥಳಗಳಲ್ಲಿ ಚಿತ್ರಿಕರಣಗೊಂಡ ಚಿತ್ರ ಇದಾಗಿದ್ದು, ಇಂದಿನ ಯುವ ಸಮೂಹದ ಎಳೆ ಮನಸ್ಸು-ಹೃದಯಗಳ ಮಿಲನದ ಸೆಳೆತದ ಚಿತ್ರ ಇದಾಗಿದೆ ಎಂದರು. 

ಈ ಚಿತ್ರದಲ್ಲಿ ಉತ್ತರ ಕನರ್ಾಟಕ ಶೈಲಿಯ "ಲೈಟಾಗಿ ಲವಾಗಿದೆ" ಹಾಡು ಅದ್ಭುತವಾಗಿ ಮೂಡಿ ಬಂದಿದ್ದು, ಇಗಾಗಲೇ ಯೂಟ್ಯಬ್ ದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿಗಿದ್ದು ಎಲ್ಲರ ಮನ ತಟ್ಟುವಂತೆ ಹಾಡು ಮೂಡಿ ಬಂದಿದೆ ಎಂದರು. 

ಯುವ ನಿದರ್ೆಶಕ ಗುರುರಾಜ ಗದಾಡಿ ಈ ಚಿತ್ರವನ್ನು ನಿದರ್ೆಶನ ಮಾಡಿದಾರೆ ತಾರಾಗಣದಲ್ಲಿ ಸರಿಗಮಪ ಸೀಸನ್ 11 ರಲ್ಲಿ ವಿಜೇತರಾದ ಚನ್ನಪ್ಪ ಹುದ್ದಾರ, ಮಾಂಗಲ್ಯಂ ತಂತುನಾನೇನಾ ಧಾರಾವಾಹಿಯ ಶ್ರಾವಣಿ ಪಾತ್ರಧಾರಿಯ ದಿವ್ಯಾ ವಾಗುಕರ, ಸಚಿನಗೌಡಾ, ಸೇರಿದಂತೆ ಉತ್ತರ ಕನರ್ಾಟಕ ಕಲಾವಿದರು ನಟಿಸಿದಾರೆ ಚಿತ್ರವನ್ನು ಪ್ರೇಕ್ಷಕರು ನೋಡಿ ಉತ್ತರ ಕನರ್ಾಟಕದ ಕಲಾವಿದರನ್ನು ಬೆಳಸಬೇಕು ಎಂದು ಮನವಿ ಮಾಡಿಕೊಂಡರು. 

ಈ ವೇಳೆ ನಗರದ ಗಣ್ಯರಾದ ಅಪ್ಪಾಸಾಹೇಬ ಶಿರಕೋಳಿ, ಸುನೀಲ ಪರ್ವತರಾವ, ಪ್ರಮೋದ ಹೊಸಮನಿ, ಪತ್ರಕರ್ತ ಸಚಿನ ಕಾಂಬಳೆ, ಕುಮಾರ ಕಿವುಡಾ, ಮಹೇಶ ಹೊಟ್ಟಿವಳಿ, ಕಾಡೇಶ್ ಬಸ್ತವಾಡಿ, ಸಂತೋಷ ಸತನಾಯಿಕ, ಪ್ರೀತಂ ಸೂಮಾರೆ, ನೇತಾಜಿ ಮಗದುಮ್ಮ, ಪ್ರವೀಣ ಪುಂಡೆ, ಕಲ್ಲಪ್ಪಾ ಘಸ್ತಿ, ಅಜೀತ ಪುಂಡೆ, ಗುರುನಾಥ ಪಾತರೊಟ, ಕಿರಣ ಘಸ್ತಿ,ಕೆಂಪು ಪೂಜಾರಿ, ಸಂತೋಷ ಕಾಂಬಳೆ ಹಾಗೂ ಅನೇಕರು ಉಪಸ್ಥಿತರಿದ್ದರು.