ಲೋಕದರ್ಶನ ವರದಿ
ಹೊನ್ನಾವರ: ಲಾರಿ ಮತ್ತು ಟಾಟಾ ಗೂಡ್ಸ್ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಚಾಲಕರಿಬ್ಬರು ಗಾಯಗೊಂಡ ಘಟನೆ ತಾಲೂಕಿನ ಕಾಸರಕೋಡ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಹೊನ್ನಾವರದಿಂದ ಭಟ್ಕಳ ಕಡೆಗೆ ಚಲಿಸುತ್ತಿದ್ದ ಲಾರಿಗೆ ಭಟ್ಕಳದಿಂದ ಹೊನ್ನಾವರ ಕಡೆಗೆ ಚಲಿಸುತ್ತಿದ್ದ ಗೂಡ್ಸ ವಾಹನ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಲಾರಿಯ ಚಕ್ರಗಳು ಹೆದ್ದಾರಿ ಪಕ್ಕದ ಮಣ್ಣಿನ ದಿಬ್ಬದಲ್ಲಿ ಹೂತಿವೆ. ಲಾರಿಗೆ ಡಿಕ್ಕಿಯಾದ ಟಾಟಾ ಗೂಡ್ಸ್ ವಾಹನ ಒಮ್ಮೆಲೆ ತಿರುಗಿ ನಿಂತಿದ್ದು ಅದರಲ್ಲಿ ತುಂಬಿದ್ದ ಕಾಳುಮೆಣಸು ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಅಪಘಾತ ಸ್ಥಳದಲ್ಲಿ ವಾಹನದ ಇಂಜಿನ್ ಆಯಿಲ್ನಲ್ಲಿ ಸೋರಿಕೆಯಾಗಿದೆ. ಎರಡೂ ವಾಹನದ ಮುಂಭಾಗ ನಜ್ಜುಗುಜ್ಜಾಗಿದ್ದು ಚಾಲಕರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.