ಲೋಕದರ್ಶನ ವರದಿ
ಸಿಂದಗಿ 02: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ದೇಶದಲ್ಲಿ ಕಮಲ ಅರಳುತ್ತದೆ. ಮತ್ತೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗುತ್ತಾರೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಿಂದಗಿ ಬಿಜೆಪಿ ಮಂಡಲ ಹಮ್ಮಿಕೊಂಡ ಮೋದಿ ಮತ್ತೊಮ್ಮೆ ಕಮಲ ಸಂದೇಶ ಕಾರ್ಯಕ್ರಮ ನಿಮಿತ್ತ ಹಮ್ಮಿಕೊಂಡ ಮೋಟರ್ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿ ವಿಷಯ ಮತ್ತು ರಕ್ಷಣೆ ವಿಷಯ ಬಂದಾಗ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟ ನಿಧರ್ಾರ ಕೈಕೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ. ದೇಶ ಅಭಿವೃದ್ಧಿ ಯಾಗಬೇಕಾದರೆ ಮತ್ತೆ ದೇಶದಲ್ಲಿ ಕಮಲ ಅರಳಬೇಕು. ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಬಿಜೆಪಿ ಪಕ್ಷದ ಅಭ್ಯಥರ್ಿ ಗೆಲುವಿಗೆ ಕಂಕಣಬದ್ದರಾಗಿ ಕೆಲಸ ಮಾಡಬೇಕು. ಪ್ರತಿ ಬೂತ ಮಟ್ಟದ ಕಾರ್ಯಕರ್ತರು ಶ್ರಮಿಸಬೇಕು. ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ಕಾರ್ಯಕರ್ತರಿಗೆ ಸಂದೇಶ ನೀಡಿದರು.
ಮಲ್ಲಿಕಾಜರ್ುನ ಜೋಗೂರ, ಶ್ರೀಕಾಂತ ಸೋಮಜಾಳ, ಬಸವರಾಜ ಸಜ್ಜನ, ಈರಣ್ಣ ರಾವೂರ, ಗುರು ಅಗಸರ, ಗುರು ತಳವಾರ, ಸೈಫನ ನಧಪಾ, ಯಲ್ಲು ಇಂಗಳಗಿ, ಆನಂದ ಪವಾರ, ಮಾಂತೇಶ ಅಗಸರ ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಬೈಕ್ ರ್ಯಾಲಿ:
ಮಾಜಿ ಶಾಸಕ ರಮೇಶ ಭೂಸನೂರ ಅವರ ನೇತೃತ್ವದಲ್ಲಿ ಮೋದಿ ಮತ್ತೊಮ್ಮೆ ಕಮಲ ಸಂದೇಶ ಸಾರುವ ಬೈಕ್ ರ್ಯಾಲಿಯು ಬಸವೇಶ್ವರ ವೃತ್ತದಿಂದ ಪ್ರಾರಂಭವಾಗಿ ಸ್ವಾಮಿವಿವೇಕಾನಂದ ವೃತ್ತದ ಮಾರ್ಗವಾಗಿ ಟಿಪ್ಪು ಸುಲ್ತಾನ ವೃತ್ತ, ಅಂಬೇಡ್ಕರ್ ವೃತ್ತದ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ಜರುಗಿತು. ಮಾರ್ಗದುದ್ದಕ್ಕೂ ಭಾರತೀಯ ಸೈನಿಕರಿಗೆ ಜೈಕಾರ ಹಾಕುವ ಜೊತೆಗೆ ನಮೋ ಭಾರತ, ಮತ್ತೆ ಪ್ರಧಾನಿಯಾಗಿ ನರೇಂದ್ರ ಮೋದಿ ಎಂಬ ಘೋಷಣೆ ಕೂಗುತ್ತ ಸಾಗಿದರು.