ಲೋಕದರ್ಶನ ವರದಿ
ಬ್ಯಾಡಗಿ 27: ತಾಲೂಕಿನ ಗುಡ್ಡದಮಲ್ಲಾಪುರದ ಹಿರಿಯ ಮೂಕಪ್ಪಶ್ರೀಗಳು (ವೃಷಭರೂಪಿ) ಧೂಳಿಕೊಪ್ಪ ಗ್ರಾಮದ ಬಸವಣ್ಣೆಪ್ಪ ಶಂಕ್ರಪ್ಪ ಭೂಮಕ್ಕನವರ ಇವರ ಮನೆಯಲ್ಲಿ ಪುನರ್ ಜನ್ಮ ತಾಳಿದ್ದಾಗಿ ಶ್ರೀಮಠದ ಮೂಲಗಳು ಧೃಡಪಡಿಸಿವೆ, ಇದರಿಂದ 7ತಿಂಗಳ ಆಂತಕದಲ್ಲಿದ್ದ ಶ್ರೀಮಠದ ಸದ್ಭಕ್ತರಲ್ಲಿ ಸಂತಸ ಮೂಡಿಸುವ ಮೂಲಕ ಗುರುಪರಂಪರೆ ಮುಂದುವರೆದಂತಾಗಿದೆ.
ಮರಿ ಕಲ್ಯಾಣಭಾಗದ ಗುರುಪರಂಪರೆ ಹೊಂದಿರುವ ಸದರಿ ಮಠದಲ್ಲಿ ಪುನರ ಜನ್ಮ ಪಡೆಯುವಶ್ರೀಗಳು ಪಟ್ಟಕ್ಕೆ ಏರುವುದು ಕಳೆದ ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಪರಂಪರೆ, ಸದಾಕಾಲ ಇಬ್ಬರುಶ್ರೀಗಳು ಇಲ್ಲಿ ಆಡಳಿತ ನಡೆಸಿಕೊಂಡು ಬರುತ್ತಾರೆ, ಆದರೆ ಕಳೆದ 2018 ಏ.20 ರಂದು ಶ್ರೀಮಠದ ಆವರಣದಲ್ಲಿ ಹಿರಿಯಶ್ರೀಗಳು ಲಿಂಗೈಕ್ಯರಾಗಿದ್ದು ಇದೀಗ ಅವರ ಪುನರ್ಜನ್ಮವಾಗಿದೆ. ತಮ್ಮಲ್ಲಿದ್ದ ಎರಡು ಎತ್ತುಗಳನ್ನೇರಿ ಸುತ್ತಲಿನ ಗ್ರಾಮಗಳಲ್ಲಿ ಸಂಚರಿಸಿ ಮುಂದೆ ಹುಚ್ಚೇಶ್ವರ ಶಿವಯೋಗಿಗಳಾಗಿ ಜೀವಂತ ಸಮಾಧಿಯಾಗುವ ಪೂರ್ವದಲ್ಲಿ ತಮ್ಮ ಜೊತೆಯಲ್ಲಿದ್ದ ಕಂಟಲೆ ಬಸವಣ್ಣನಿಗೆ ಕರ್ಣದಲ್ಲಿ ಷಟಸ್ಥಲ ಬ್ರಹ್ಮೋಪದೇಶ ಹಾಗೂ ದೀಕ್ಷಾ ಸಂಸ್ಕಾರ ನೀಡುವ ಮೂಲಕ ತಮ್ಮ ಉತ್ತರಾಧಿಕಾರದ ಧರ್ಮ ದಂಡವನ್ನು ನೀಡಿದರು ಎನ್ನುವುದು ಇಂದಿಗೂ ಪ್ರತೀತಿ.
ವೃಷಭರೂಪಿ (ಎತ್ತುಗಳು) ಶ್ರೀಗಳು ಸಮಾಜದಲ್ಲಿ ಧಾಮರ್ಿಕ ಕಾರ್ಯಗಳನ್ನು ನಡೆಸುತ್ತಿವೆ ಎನ್ನುವುದು ನೋಡುಗರ ಕಣ್ಣಿಗೆ ಸೋಜಿಗವೆನಸಿದರೂ ಗುಡ್ಡದಮಲ್ಲಾಪುರ ಗ್ರಾಮದಲ್ಲಿ ಗುರು ಹುಚ್ಚೇಶ್ವರರು ಮೂಕಪ್ಪ ಶಿವಯೋಗಿಗಳಲ್ಲಿ ಪರಕಾಯ ಪ್ರವೇಶ ಮಾಡಿ ಮಹಾಸಂಸ್ಥಾನ ದಾಸೋಹಮಠ ಸ್ಥಾಪಿಸುವ ಮೂಲಕ ಈ ಭಾಗದಲ್ಲಿ ಇಂದಿಗೂ ಧಾಮರ್ಿಕ ಪರಂಪರೆಯನ್ನು ಉಳಿಸಿಕೊಂಡು ಬಂದಿರುವುದು ಪವಾಡ ಸದೃಶವೇ ಸರಿ, ಕ್ಷೇತ್ರದಲ್ಲಿರುವ ವೃಷಭ ರೂಪಿಶ್ರೀಗಳ ಪಾದಸ್ಪರ್ಶ ಮಾಡಿದಲ್ಲಿ ತಮ್ಮೆಲ್ಲಾ ಸಂಕಷ್ಟಗಳಿಗೆ ಪರಿಹಾರ ಸಿಗಲಿದೆ ಎಂಬುದು ಇಂದಿಗೂ ಭಕ್ತರಲ್ಲಿರುವ ಅಚಲವಾದ ನಂಬಿಕೆ.
ಏನಿದು ಪುನರ್ಜನ್ಮ...?: ಗುಡ್ಡದಮಲ್ಲಾಪುರ ಮೂಕಪ್ಪಶ್ರೀಗಳು ಲಿಂಗೈಕ್ಯರಾದ ಬಳಿಕ ಶ್ರೀಮಠದ ಸುತ್ತಲಿನ ಯಾವುದಾದ ರೊಂದು ಊರಿನ ಗೋಗರ್ಭದಲ್ಲಿ ಮತ್ತೆ ಭೂಮಿಗೆ ಅವತರಿಸುತ್ತಾರೆ, ಈ ರೀತಿ ಹುಟ್ಟಿದ ಆಕಳ ಕರುವಾಗಿ ಜನಿಸುವ ಶ್ರೀಗಳು ಮೊಲೆಹಾಲನ್ನು ಕುಡಿಯದೇ, ಶ್ರೀಮಠದ (ಗುಡ್ಡದ ಮಲ್ಲಾಪುರದ) ಕಡೆಗೆ ಮುಖಮಾಡಿ ಮಲಗುತ್ತಾರೆ, ಧೂಳಿಕೊಪ್ಪ ಗ್ರಾಮದ ಬಸವಣ್ಣೆಪ್ಪ ಶಂಕ್ರಪ್ಪ ಭೂಮಕ್ಕನವರ ಇವರ ಮನೆ ಯಲ್ಲಿನ ನವಜಾತ ಆಕಳ ಕರುವೊಂದು ಕಳೆದ 3 ದಿನಗಳಿಂದ ಹಾಲು ಸೇವಿಸದೇ ಶ್ರೀಮಠದ ಕಡೆಗೆ ಮಲಗಿದೆ, (ವಿವಿಧ ಸಜ್ಞೆಗಳ ಮೂಲಕ ಮೂಕಪ್ಪಶ್ರೀಗಳೆಂದು ತಿಳಿಸಲು ಯತ್ನಿಸಿದೆ) ಈ ಸುದ್ದಿ ಶ್ರೀಮಠಕ್ಕೆ ತಲುಪುತ್ತಿದ್ದಂತೆ ಧಮರ್ಾಧಿಕಾರಿಗಳು ಹಾಗೂ ಗ್ರಾಮದ ಹಿರಿಯರು ಜನಿಸಿದ ಕರುವು ಮೂಕಪ್ಪಶ್ರೀಗಳೇ..? ಎಂದು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾದರು, ಷ.ಬ್ರ.ಹುಚ್ಚೇಶ್ವರ ಮಠದ ಕತೃಗದ್ದಿಗೆಯಲ್ಲಿನ ಶಿವಾಚಾರ್ಯರ ತೀರ್ಥಪ್ರಸಾದ (ಗುರುದೀಕ್ಷೆ) ನೀಡಿದ ಬಳಿಕವೇ ಎಲ್ಲರ ಸಮ್ಮುಖದಲ್ಲಿ ನವಜಾತ ಕರುವು ಹಾಲು ಸೇವಿಸಲಾರಂಭಿಸಿತು, ಲಿಂಗೈಕ್ಯ ಶ್ರೀಗಳಿಗೆ ಧರಿಸಿದ ಲಿಂಗಮುಖ ಮುದ್ರೆ ಸೇರಿದಂತೆ ಹಿರಿಯಶ್ರೀಗಳ ರುದ್ರಾಕ್ಷಿಮಾಲೆಗಳನ್ನು ಹಿಡಿದು ಕುಳಿತಿದ್ದ ಧಮರ್ಾಧಿಕಾರಿಗಳ ಬಳಿ ನವಜಾತ ಕರುವು ತೆರಳಿದೆ ನೆರೆದಿದ್ದ ಭಕ್ತರು ಹಷರ್ೋದ್ಘಾರಗಳನ್ನು ಹಾಕಲು ಆರಂಭಿಸಿದರು.