'ಸಾಹಿತ್ಯ, ಸಂಗೀತ, ಕಲೆ ಸಂಸ್ಕೃತಿಯ ಆರಾಧನೆಯಿಂದ ಮಾನವನಲ್ಲಿ ಸಾತ್ವಿಕತೆ ಬರುತ್ತದೆ'

ಯಲ್ಲಾಪುರ 02:. ಸಾಹಿತ್ಯ, ಸಂಗೀತ, ಕಲೆ ಸಂಸ್ಕೃತಿಯ ಆರಾಧನೆಯಿಂದ ಮಾನವನಲ್ಲಿ ಸಾತ್ವಿಕತೆ ಬರುತ್ತದೆ. ಸಂಸ್ಕೃತಿ ಇಲ್ಲದ ಜನ್ಮ ಪಶುವಿಗಿಂತ ನಿಷೃಷ್ಟವಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲಿಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

                ಅವರು ಗುರುವಾರ ಸಂಜೆ ತಾಪಂ ಅವಾರದ  ಗಾಂಧಿ ಕುಟೀರದಲ್ಲಿ  32 ನೇ ವರ್ಷದಸಂಕಲ್ಪ ಉತ್ಸವವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿ ಸಂಕಲ್ಪ ಉತ್ಸವ  ಯಕ್ಷಗಾನಕ್ಕೆ ಆದ್ಯತೆ ನೀಡಿ  ಕಲಾರಾಧನೆಯಲ್ಲಿ ತೊಡಗಿಸಿಕೊಳ್ಳುವುದರ ಕನ್ನಡ ಭಾಷೆ ಉಳಿವಿಗೆ ಸಹಕಾರಿಯಾಗಿದೆ.ಶುದ್ಧ ಕನ್ನಡ ಬಳಕೆ ಯಕ್ಷಗಾನ ಕಲೆಯಲ್ಲಿ ಮಾತ್ರ ಕಾಣಬಹುದಾಗಿದೆ.ಕನ್ನಡ ರಾಜ್ಯೋತ್ಸವ ದಿನದಂದೇ ಸಂಕಲ್ಪ ಉತ್ಸವಕ್ಕೆ ಚಾಲನೆ ನೀಡಿರುವದು ಸಕಾಲಿಕವಾಗಿದೆ ಹಾಗೂ ಸಂಕಲ್ಪ ಉತ್ಸವದ ರೂವಾರಿ ಪ್ರಮೋದ ಹೆಗಡೆ ಅವರು  ಎಷ್ಟೇ ಸಮಸ್ಯೆ, ಕಷ್ಟಗಳು ಬಂದರೂ ಲೆಕ್ಕಿಸದೇ, ತಮ್ಮ ಪರಿಕಲ್ಪನೆಯಲ್ಲಿ 31 ವರ್ಷಗಳಿಂದ ಯಶಸ್ವಿಯಾಗಿ ಉತ್ಸವ ನಡೆಸಿಕೊಂಡು ಬಂದಿರುವದು ಸಾಮಾನ್ಯವಲ್ಲ ಅವರು  ಗುರುವಿನಲ್ಲಿಟ್ಟಿರುವ  ಭಕ್ತಿ ಶ್ರದ್ಧೆಯಿಂದ  ಸಾಧ್ಯವಾಗಿದೆ ಎಂದರು.

                ಭಾಗವತ ಹೊಸ್ತೋಟ ಮಂಜುನಾಥ ಭಾಗ್ವತ್, ಕಿರವತ್ತಿ ಕೃಷ್ಣಾ ಡೇರಿಯ ಸಂಸ್ಥಾಪಕ ಹನುಮಂತ ಪೈ ,ಹೊಸದಿಗಂತ ಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ಮುಖ್ಯಸ್ಥ  ವಿಠ್ಠಲದಾಸ ಕಾಮತ್ ಮಾತನಾಡಿದರು.

                ವೇದಿಕೆಯಲ್ಲಿತಹಶೀಲ್ದಾರ್ ಡಿ.ಜಿ.ಹೆಗಡೆ, ತಾಲ್ಲೂಕು  ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಸಾತೊಡ್ಡಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ, ಪತ್ರಕರ್ತರ ಸಂಘದ ಗೌರವಾಧ್ಯಕ್ಷ ನಾಗರಾಜ ಮದ್ಗುಣಿ, ಹಿರಿಯ ಪತ್ರಕರ್ತ ಸಿ.ಆರ್. ಶ್ರೀಪತಿ,ಹಿರಿಯ ವಕೀಲ ವಿ.ಪಿ.ಭಟ್ಟ ಕಣ್ಣಿ, ರಂಗ ಸಹ್ಯಾದ್ರಿ ಬಳಗದ ಅಧ್ಯಕ್ಷ ಡಿ.ಎನ್.ಗಾಂವ್ಕರಸಂಕಲ್ಪ ಸೇವಾ ಸಂಸ್ಥೆಯ ಪ್ರಮುಖರಾದ ಪ್ರಸಾದ ಹೆಗಡೆ, ಪ್ರಶಾಂತ ಹೆಗಡೆ, ಉಪಸ್ಥಿತರಿದ್ದರು.ಆಶಾ ಬಗನಗದ್ದೆ ಪ್ರಾಥರ್ಿಸಿದರು.ಜಿ.ಎಸ್ ಭಟ್ಟ ಸ್ವಾಗತಿಸಿದರು. ಸಿ ಆರ್ ಪಿ ಸಂಜೀವ ಕುಮಾರ ಹೊಸ್ಕೆರಿ ನಿರ್ವಹಿಸಿದರು. ಎನ್.ಎನ್. ಹೆಬ್ಬಾರ ವಂದಿಸಿದರು.