ಕಾಗವಾಡ 12: ಕಾಗವಾಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಘಟಕದ ಪ್ರಥಮ ಸಾಹಿತ್ಯ ಸಮ್ಮೇಳನ ಶನಿವಾರ ದಿ. 19 ರಂದು ವಿಜೃಂಭಣೆಯಿಂದ ಸಾಹಿತ್ಯ ಸಮ್ಮೇಳನ ಆಚರಿಸಲಾಗುವುದು. ಇದಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಸಾಪ ಕಾಗವಾಡ ಘಟಕ ಅಧ್ಯಕ್ಷ ಡಾ. ಸಿದ್ಧಗೌಡಾ ಕಾಗೆ ಹೇಳಿದರು.
ಶುಕ್ರವಾರ ದಿ. 11ರ ಸಂಜೆ ಉಗಾರದ ವಿಹಾರ ಸಭಾ ಭವನದಲ್ಲಿ ಸಾಹಿತ್ಯ ಸಮ್ಮೇಳನದ ಕೊನೆಯ ಪೂರ್ವಭಾವಿ ಸಭೆ ಹಮ್ಮಿಕೊಂಡಿದ್ದರು. ಸಭೆಯಲ್ಲಿ ಅಥಣಿ ಕಸಾಪ ಘಟಕಾಧ್ಯಕ್ಷ ಮಹಾಂತೇಶ ಉಕಲಿ, ಕಾಗವಾಡ ಸಿಡಿಪಿಒ ಡಾ. ಸುರೇಸ ಕದ್ದು, ಉಗಾರ ಶ್ರೀಹರಿ ವಿದ್ಯಾಲಯದ ಪ್ರಾಚಾರ್ಯ ಪಿ.ಬಿ. ಕುಲಕಣರ್ಿ, ಕಂದಾಯ ನೀರಿಕ್ಷಕ ಬಿ.ಬಿ.ಬೋರಗಲ, ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆಯ ಶಿಕ್ಷಣ ಸಂಯೋಜಕ ಶಶೀಕಾಂತ ಪಾಟೀಲ, ಕಸಾಪ ಕೋಶಾಧ್ಯಕ್ಷ ಸಿದ್ಧರಾಮ ಮೋಟಗಿ ಇವರು ಸಮ್ಮೇಳನದ ಬಗ್ಗೆ ಕನ್ನಡ ಅಭಿಮಾನಿ ಮತ್ತು ಶಿಕ್ಷಕರಿಗೆ ಮಾಹಿತಿ ನೀಡಿದರು.
ಶನಿವಾರ ದಿ. 19ರಂದು ಬೆಳಿಗ್ಗೆ ಮಾಜಿ ಸೈನಿಕ ಕ್ಯಾಪ್ಟನ್ ತುಕಾರಾಮ ಕಮತೆ ಇವರಿಂದ ರಾಷ್ಟ್ರ ಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಮಂಗಲಾ ಮೆಟಗುಡ್ ಇವರಿಂದ ಕಸಾಪ ಧ್ವಜಾರೋಹಣ, ಕಸಾಪ ತಾಲೂಕಾಧ್ಯಕ್ಷ ಡಾ. ಸಿದ್ಧಗೌಡಾ ಕಾಗೆ ಇವರಿಂದ ಕನ್ನಡ ಧ್ವಜಾರೋಹಣ ನೆರವೇರಲಿದೆ.
ವಿವಿಧ ಕಲಾ ತಂಡಗಳಿಂದ ಡೊಳ್ಳು ಕುಣಿತ, ರೂಪಕಗಳು, ಮೆರವಣಿಗೆ, ಕಾರ್ಯಕ್ರಮದ ಉದ್ಘಾಟನೆ ಪುರಸಭೆ ಅಧ್ಯಕ್ಷ ಶಶಿಕಾಂತ ಕಾಂಬಳೆ ಉದ್ಘಾಟಿಸಲಿದ್ದಾರೆ.
ಮಧ್ಯಾಹ್ನ ಸಾಹಿತ್ಯರತ್ನ ಮಿಜರ್ಿ ಅಣ್ಣಾರಾಯ ಪ್ರಧಾನ ವೇದಿಕೆ, ಶತಾಯುಷಿ ಅಲಗೌಡಾಕಾಕಾ ಕಾಗೆ, ಸಭಾ ಮಂಟಪ ಎಂದು ನಾಮಕರಿಸಲಿದ್ದಾರೆ. ಸಮಾರಂಭದ ಸಾನಿಧ್ಯ ಬಸವಲಿಂಗ ಮಹಾಸ್ವಾಮಿಜಿ, ಡಾ. ಶ್ರದ್ಧಾನಂದ ಸ್ವಾಮಿಜಿ ವಹಿಸಲಿದ್ದು ಸಮ್ಮೇಳನ ಅಧ್ಯಕ್ಷೆ ಡಾ. ಭಾರತಿ ಸವದತ್ತಿ ವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಂಸದ ಸದಸ್ಯ ಪ್ರಕಾಶ ಹುಕ್ಕೇರಿ, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ತ ಸದಸ್ಯರು, ಮಾಜಿ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ಡಾ. ಸಿದ್ಧಗೌಡಾ ಕಾಗೆ ತಿಳಿಸಿದರು.
ಸಮಾರಂಭದಲ್ಲಿ ಗ್ರಂಥ ಲೋಕಾರ್ಪಣೆ, ಸಂಸ್ಕೃತಿ ಸೌರಭ, ನಿತ್ಯೋತ್ಸವ ಗೀತೆ, ಕವಿಗೋಷ್ಟಿ ಜರುಗಲಿದೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆ ಕಸಾಪ ಬೆಳಗಾವಿ ಜಿಲ್ಲೆ ಅಧ್ಯಕ್ಷೆ ಮಂಗಲಾ ಮೆಟಗುಡ ವಹಿಸಲಿದ್ದು, ಕವಲಗುಡ್ಡ ಸಿದ್ಧರಾಮ ಮಠದ ಅಮರೇಶ್ವರ ಮಹಾರಾಜರು, ಬಸವಲಿಂಗ ಮಹಾಸ್ವಾಮಿಜಿ ಸಾನಿಧ್ಯ ವಹಿಸಲಿದ್ದಾರೆ.
ಉಗಾರದಲ್ಲಿ ಜರುಗಿದ ಸಭೆಯಲ್ಲಿ ಕರವೇ ಕಾರ್ಯಕರ್ತರು, ಕನ್ನಡ ಅಭಿಮಾನಿಗಳು, ಶಾಲಾ ಶಿಕ್ಷಕರು, ಚುನಾಯಿತ ಸದಸ್ಯರು ಪಾಲ್ಗೊಂಡಿದ್ದರು.