ಲಿಂಗರಾಜರ ಜಯಂತಿ ಆಚರಣೆ

ತ್ಯಾಗವೀರ ಶಿರಸಂಗಿ ಲಿಂಗರಾಜರ 158 ನೇ ಜಯಂತಿಯನ್ನು ಆಚರಿಸಲಾಯಿತು.

ಲೋಕದರ್ಶನವರದಿ

ರಾಯಬಾಗ10: ಸ್ಥಳೀಯ ಕೆ.ಎಲ್.ಇ. ಸಂಸ್ಥೆಯ ಮಲಗೌಡ ಪಾಟೀಲ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರ ತ್ಯಾಗವೀರ ಶಿರಸಂಗಿ ಲಿಂಗರಾಜರ 158 ನೇ ಜಯಂತಿಯನ್ನು ಆಚರಿಸಲಾಯಿತು. 

ಉಪನ್ಯಾಸಕರಾಗಿ ಆಗಮಿಸಿದ್ದ ಪ್ರೋ ಎಮ್. ಎಸ್. ಉಜ್ಜೈನಿಮಠ ಅವರು, ತ್ಯಾಗವೀರ ಲಿಂಗರಾಜರ ಬಾಲ್ಯ ಜೀವನ ಹಾಗೂ ಉತ್ತರ ಕನರ್ಾಟಕದ ಶೈಕ್ಷಣಿಕ, ಸಾಮಾಜಿಕ, ಆಥರ್ಿಕ ರಂಗಗಳಲ್ಲಿ ಕ್ರಾಂತಿಯನ್ನು ಉಂಟು ಮಾಡಿದರು ಬಗ್ಗೆ ವಿದ್ಯಾಥರ್ಿಗಳಿಗೆ ತಿಳಿಸಿದರು.

   ಅತಿಥಿಗಳಾಗಿ ಸ್ಥಳೀಯ ಆಡಳಿತ ಮಂಡಳಿ ಚೆರಮನ್ ಪರಗೌಡ ಪಾಟೀಲ, ಶೈಲೇಂದ್ರ ಪಾಟೀಲ, ರಾಮಚಂದ್ರ ನಿಶಾಂದಾರ, ಸಂಗಣ್ಣಾ ದತ್ತವಾಡೆ ಆಗಮಿಸಿದ್ದರು. ಪ್ರಾಚಾರ್ಯ ಪ್ರೋ ಆರ್. ವಿ. ಪಾಟೀಲ ಅಧ್ಯಕ್ಷತೆಯನ್ನು ವಹಿಸಿದ್ದರು. 

ಎ. ಎನ್. ಡಾಂಗೆ ನಿರೂಪಿಸಿದರು, ಆರ್. ಎಸ್. ಬುಗಡಿಕಟ್ಟಿ ವಂದಿಸಿದರು.