ಜೀವನ ಕೌಶಲ್ಯ ತರಬೇತಿ ಕಾರ್ಯಗಾರ

ಬೆಳಗಾವಿ, 20: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವ ಸ್ಪಂದನ ಕೇಂದ್ರ, ಜನ ಆರೋಗ್ಯ  ಕೇಂದ್ರ, ಎಪಿಡೀಮಿಯಾಲಜಿ ವಿಭಾಗ, ನಿಮ್ಹಾನ್ಸ್, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚಿಗೆ ಸರಕಾರಿ ಪ್ರಥಮ ದಜರ್ೆ ಕಾಲೇಜು ಪಾಶ್ಚಾಪುರದಲ್ಲಿ ಒಂದು ದಿನದ ಜೀವನ ಕೌಶಲ್ಯ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. 

ಈ ಕಾರ್ಯಕ್ರಮದಲ್ಲಿ ಯುವಪರಿವರ್ತಕರಾದ ಬಾಳಯ್ಯಾ ಮಠಪತಿರವರು ಮಾತನಾಡಿ ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ವಿದ್ಯಾಥರ್ಿಗಳಿಗೆ ಜೀವನ ಕೌಶಲ್ಯ ತರಬೇತಿಯ ಅವಶ್ಯಕತೆ ಇದೆ. ವಿದ್ಯಾಥರ್ಿಗಳು ಸೋಮಾರಿಗಳಾಗದೆ ಸತತ ಪರಿಶ್ರಮದಿಂದ ಸಾಧನೆ ಮಾಡಬೇಕು. ಮನುಷ್ಯನ ಅತಿ ದೊಡ್ಡ ಶತ್ರು ಸೋಮಾರಿತನ ಅದನ್ನು ತೊಡೆದು ಹಾಕಿ ಎಂದು ಕರೆ ನೀಡಿದರು. ಮತ್ತು ಕಡ್ಡಾಯ ಮತದಾನದ ಕುರಿತು ವಿದ್ಯಾಥರ್ಿಗಳಿಗೆ ಜಾಗೃತಿ ಮುಡಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ವಿರೇಶ ರಾಮದುರ್ಗ ಮಾತನಾಡಿ ವಿವಿಧ ಜೀವನ ಕೌಶಲ್ಯಗಳಾದ ಸ್ವ ಅರಿವು, ಭಾವನೆಗಳ ನಿರ್ವಹಣೆ, ಸಹಾನುಭೂತಿ, ಸೃಜನಾತ್ಮಕ ಚಿಂತನೆ  ಮತ್ತು ಪರಿಣಾಮಕಾರಿ ಸಂವಹಣದ ಕುರಿತು ಚಟುವಟಿಕೆಗಳ ಮುಖಾಂತರ ತಿಳಿಸಿದರು. ಯುವಕರ ಸಮಸ್ಯೆಗಳಿಗೆ ಯುವ ಸ್ಪಂದನ ಕೇಂದ್ರ ಉಚಿತವಾಗಿ ಮಾರ್ಗದರ್ಶಣ ಮತ್ತು ಆಪ್ತಸಮಾಲೋಚನೆ ನೀಡುತ್ತಿದ್ದು ಯುವ ಸ್ಪಂದನ ಕೇಂದ್ರದ ದೂ-0831-2474101 ಸಂಖ್ಯೆಗೆ ಸಂಪಕರ್ಿಸಿ ಇದರ ಸದುಪಯೋಗ ಪಡೆದುಕೊಳ್ಳಲು ಹೇಳಿದರು. 

ಈ ಕಾರ್ಯಕ್ರಮದ ಸಂಯೋಜಕರಾದ ಆನಂದ್ ಎನ್ ಸಹಾಯಕ ಪ್ರಾಧ್ಯಾಪಕರು ಮಾತನಾಡಿ ಜೀವನ ಕೌಶಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನವನ್ನು ತುಂಬಾ ಸುಸೂತ್ರವಾಗಿ ನಡೆಸಬಹುದೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಬಿ.ವೈ.ಶಿರಹಟ್ಟಿ  ಹಾಗೂ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.