ಲೋಕದರ್ಶನ ವರದಿ
ಕೊಪ್ಪಳ 20:
ಜೀವನವೇ ಒಂದು ಕಲಾ ಸೌಂದರ್ಯದ
ಪುಂಜ. ನಾವು ಸದ್ಗುಣ ದೈವೀ
ಗುಣಗಳಿಂದ ಶೃಂಗರಿತರಾಗಬೇಕು. ದೇವಿಯನ್ನು ಶೃಂಗರಿಸಿ ಪೂಜಿಸುವುದಷ್ಟೇ ಅಲ್ಲ, ಆ ದೇವಿಯಲ್ಲಿರುವ ಲಕ್ಷಣಗಳನ್ನು,
ವಿಶೇಷತೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ
ಈ ನವರಾತ್ರಿಯ ಸತ್ಯವಾದ ಉದ್ದೇಶವೆಂದು ಬ್ರಹ್ಮಕುಮಾರಿ ಯೋಗಿನಿ ಅಕ್ಕನವರು ಹೇಳಿದರು.
ನಗರದ ಗಡಿಯಾರ ಕಂಬ
ದುಗರ್ಾದೇವಿ ಮಿತ್ರ ಮಂಡಳಿಯವರು ಏರ್ಪಡಿಸಿದ ಕಾರ್ಯಕ್ರಮದಲ್ಲಿ ನವರಾತ್ರಿಯ ಅಧ್ಯಾತ್ಮಿಕ ರಹಸ್ಯವನ್ನು ಕುರಿತು ಮಾತನಾಡಿದರು.
ಅಸುರಿ ಪ್ರವೃತ್ತಿಯ ಸಂಹಾರ ದೈವೀ ಗುಣಗಳ ಆಹ್ವಾನ
ಮಾಡುವುದೇ ದಸರಾ. ದೇವಿಯ ಮುಖದಲ್ಲಿ ಕಾಣುವ ಶಾಂತತೆ, ಸಮಾಧಾನತೆ, ಹಸನ್ಮುಖತೆ, ಸಂತುಷ್ಟತೆ, ಪವಿತ್ರತೆ ನಮ್ಮದಾಗಬೇಕು. ದೇವಿಯ ಕೈ ಸದಾ ಕೊಡುವ
ಸಂಕೇತ, ಹಾಗೆಯೇ ನಾವೂ ಸಹ ನಮ್ಮ
ಸಂಬಂಧ ಸಂಪರ್ಕದಲ್ಲಿ ಬರುವವರಿಗೆ ಆತ್ಮಿಕ ಸ್ನೇಹ, ಪ್ರೀತಿ ಗೌರವವನ್ನು ಕೊಡಬೇಕು ಭಕ್ತ ಸಮೂಹಕ್ಕೆ ಸತ್ಯ
ಅಧ್ಯಾತ್ಮ ಜ್ಞಾನದ ಬೆಳಕು ಹರಿದಾಗ ಮಾತ್ರ ಸದ್ಗುಣಗಳು ನಮ್ಮದಾಗಲು ಸಾಧ್ಯ ಎಂದರು.
ದಸರಾದಲ್ಲಿ ರಾವಣನನ್ನು ಸುಡುವುದು ಅಂದರೆ ಏನು? ನಮ್ಮೊಳಗಿರುವ ಕಾಮ,ಕ್ರೋಧ, ಅಹಂ, ಈಷರ್ೆ, ದ್ವೇಷಗಳನ್ನು
ಸುಡುವುದೇ ಆಗಿದೆ. ಕಲ್ಲಿಗೆ ಸಂಸ್ಕಾರ ಕೊಟ್ಟಾಗ ಮೂತರ್ಿಯಾಗಿ ಪರಿವರ್ತನೆ ಆಗುತ್ತದೆ. ಮಣ್ಣ-ಮಡಿಕೆ ಆಗುತ್ತದೆ
ಹಾಗೆಯೇ ಆತ್ಮಕ್ಕೆ ಸತ್ಯ ಅಧ್ಯಾತ್ಮ ಜ್ಞಾನದ
ಸಂಸ್ಕಾರ ಕೊಟ್ಟಾಗ ದೈವೀಗುಣವುಳ್ಳ ಜೀವಾತ್ಮ ಆಗುತ್ತಾನೆ ಎಂದು ಸಂದೇಶ ನೀಡಿದರು.
ವೇದಿಕೆ ಮೇಲೆ ಚೈತನ್ಯದಲ್ಲಿ
ದುಗರ್ೆ, ಲಕ್ಷ್ಮಿ, ಸರಸ್ವತಿ ಭಕ್ತರಿಗೆ ದರ್ಶನ ನೀಡಿದರು. ಕು. ಬಸವರಾಜ ಜ್ಞಾನ
ನೃತ್ಯ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ದುಗರ್ಾದೇವಿ
ಮಿತ್ರ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.