ಜೀವನ ದರ್ಶನ ಕನ್ನಡ ಅನುವಾದ ಕೃತಿ ಲೋಕಾರ್ಪಣೆ: ಗುರುದೇವ ರಾನಡೆ ಅವರು ಸಂತ ಶ್ರೇಷ್ಠರು: ಸಿದ್ದೇಶ್ವರಶ್ರೀ

ಬೆಳಗಾವಿ 27: ಗುರುದೇವ ರಾನಡೆ ಅವರು ಸಂತ ಶ್ರೇಷ್ಠರು. ಅವರ ಸಾಧನೆ ಚಿಂತನೆ ದೃಷ್ಟಿಕೋನಗಳ ದರ್ಶನ ಗಳನ್ನು ಓದಿದಾಗ ಈ ಜೀವನದ ಸುಖ ದುಃಖಗಳ ಮಧ್ಯೆ ಒಬ್ಬ ಹೇಗೆ ಅನುಭಾವಿ ಆಗುತ್ತಾನೆ ಎಂದು ತಿಳಿಯುತ್ತದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಹಿಂದವಾಡಿಯ ಗುರುದೇವ ರಾನಡೆ ಮಂದಿರದಲ್ಲಿ ಎಸಿಪಿಆರ್ ಸಂಸ್ಥೆಯ ಆಶ್ರಯದಲ್ಲಿ ಮಂಗಳವಾರ ಬೆಳಿಗ್ಗೆ ಏರ್ಪಡಿಸಲಾಗಿದ್ದ ಗುರುದೇವ ರಾನಡೆ ಅವರ ಜೀವನ ದರ್ಶನ ಕನ್ನಡ ಅನುವಾದ ಕೃತಿ ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು.

ತತ್ವಜ್ಞಾನದ ಸಾಗರದಲ್ಲಿ ಸ್ವಚ್ಛಂದವಾಗಿ ಈಸಿದವರು. ದ್ವೈತ ಮತ್ತು ಅದ್ವೈತ ಸಿದ್ಧಾಂತಗಳ ಬಗ್ಗೆ ಆಳವಾದ ಅಧ್ಯಯನ ಹೊಂದಿದ್ದ ಅವರ ಸಮನ್ವಯ ಸಿದ್ಧಾಂತ ಬಹಳ ದೊಡ್ಡ ದರ್ಶನ ದೊಡ್ಡವರು ಸಣ್ಣವರು, ಹೆಚ್ಚು ಕಡಿಮೆ ಎಂಬುದು ಅವರವರ ದೃಷ್ಟಿಕೋನ. ಸತ್ಯ- ಅಸತ್ಯ ಎರಡೇ ಇರುವುದು. ಸತ್ಯವಸ್ತುವನ್ನು ಬೇರೆ ಬೇರೆ ರೀತಿಯಲ್ಲಿ ವಣರ್ಿಸಿದ್ದಾರೆ. ಅದಲ್ಲವನ್ನೂ ತೂಗಿ ನೋಡಿ ಬಹಳ ಸುಂದರವಾಗಿ ವಿವರಿಸಿದ್ದಾರೆ. ಸಮದರ್ಶನವನ್ನು ವಿವರಿಸಿದರು. ಈ ಮಂದಿರದೊಳಗೆ ಬಂದರೆ ಮನಸ್ಸು ಸಮಾಧಾನವಾಗುತ್ತದೆ. ತಾವೆಲ್ಲ ಬಂದು ಶಾಂತ ಮನಸ್ಸಿನಿಂದ ಧ್ಯಾನ ಮಾಡಬೇಕು ಎಂದರು. 

ಗದಗ ತೋಂಟದಾರ್ಯ ಮಠದ ಜಗದ್ಗುರು ಡಾ. ಸಿದ್ದರಾಮ ಸ್ವಾಮೀಜಿ ಆಶೀರ್ವಚನ ನೀಡಿ ರಾನಡೆಯವರು ತಮ್ಮ ಬದುಕಿನುದ್ದಕ್ಕೂ ಆತ್ಮಮಾರ್ಗವನ್ನು ಬೋಧಿಸಿದರು.ಅವರನ್ನು ಗುರುದೇವ ಎಂದು ಕರೆಯುತ್ತೇವೆ. ಸತ್ಯವನ್ನು ಬೋಧಿಸುವ ಅವರ ಈ ಕೃತಿ ಅಗತ್ಯವಿತ್ತು. ಅಲ್ಲದೇ ಭಾರತೀಯ ತತ್ವಶಾಸ್ತ್ರ ಜಗತ್ತಿಗೆ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ. ಆದರೆ ಇತ್ತೀಚೆಗೆ ತತ್ವಶಾಸ್ತ್ರ ಓದುಗರ ಸಂಖ್ಯೆ ಕಡಿಮೆಯಾಗಿದೆ ಎಂದು ವಿಷಾದಿಸಿದರು.  ನಮ್ಮ ಕ್ಷಿತಿಜ ವಿಸ್ತಾರವಾಗಲಿ ಎಂದು ಸ್ವಾಮೀಜಿ ಮನಸ್ಸಿನ ಶಾಂತಿಗಾಗಿ ತತ್ವಶಾಸ್ತ್ರ ಅಧ್ಯಯನ ಅಗತ್ಯ ಎಂದರು.

ಡಾ. ಪ್ರಭಾಕರ ಕೋರೆ ಮಾತನಾಡಿ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ತತ್ವಶಾಸ್ತ್ರ ಅಧ್ಯಯನ ಮಾಡುವ ವಿದ್ಯಾಥರ್ಿಗಳ ಸಂಖ್ಯೆ ಕಡಿಮೆಯಾಗಿದೆ.. ಫಿಲಾಸಫಿಯನ್ನು ಅಧ್ಯಯನ ಮಾಡುವುದಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.  

ಎಸಿಪಿಆರ್ ಕಾರ್ಯದರ್ಶ ಜಿರಲಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡಿ ಲೇಖಕ ಪ್ರೋ. ಚಂದ್ರಕಾಂತ ಪೋಕಳೆ ಮಾತನಾಡಿ ದರು.

ತೋಂಟದ ಜಗದ್ಗುರುಗಳಾಗಿರುವ ಸಿದ್ದರಾಮ ಶ್ರೀಗಳನ್ನು ಸತ್ಕರಿಸಲಾಯಿತು. 

 ಕಾರ್ಯಕ್ರಮದಲ್ಲಿ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ರಾಜೇಂದ್ರ ಹರಕುಣಿ ಉಪಸ್ಥಿತರಿದ್ದರು.

ಕಿಶೋರ ಕಾಕಡೆ ಪ್ರಾಥರ್ಿಸಿದರು. ಸಂಸ್ಥೆಯ ಅಧ್ಯಕ್ಷ ಅಶೋಕ ಪೊದ್ದಾರ ವಂದಿಸಿದರು. ಡಾ. ನಿರ್ಮಲಾ ಬಟ್ಟಲ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.