ಲೋಕದರ್ಶನ ವರದಿ
ಹೂವಿನಹಡಗಲಿ08: ಇದೇ ತಿಂಗಳು 10ರಂದು ಬೆಳಗಾವಿಯಲ್ಲಿ ನಡೆಯುವ ವಿಧಾನ ಮಂಡಲ ಅಧಿವೇಶನದಲ್ಲಿ ಒಂದು ದಿನ ಹೈದ್ರಾಬಾದ್ ಕನರ್ಾಟಕದ ಆರು ಜಿಲ್ಲೆಗಳ ಸಮಗ್ರ ಅಭಿವೃದ್ದಿಗಾಗಿ ಸಕರ್ಾರ ಗಮನ ಸೆಳೆಯಲು ಚಚರ್ಿಸಿ ಪರಿಹರಿಸುವಂತೆ 40 ಜನ ಶಾಸಕರಿಗೆ ಪತ್ರ ಚಳುವಳಿ ನೀಡಲಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಹಕಾರ್ಯದಶರ್ಿ ಡಾ.ಜನಾರ್ಧನ ಕೆ.ಎಸ್. ಹೇಳಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೈ.ಕ.ಅನುದಾನದಲ್ಲಿ ಉದ್ಯೋಗ,ಶಿಕ್ಷಣ ಮತ್ತು ಸಮಗ್ರ ಅಭಿವೃದ್ದಿಯಿಂದ ವಂಚಿತರಾಗಿದ್ದೇವೆ.
ಈ ಹಿನ್ನೆಲೆಯಲ್ಲಿ ಡಿ.10ರಂದು ನಡೆಯುವ ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಈ ಕುರಿತು ಚಚರ್ಿಸಿ ಹೈ.ಕ.ಭಾಗದ 6ಜಿಲ್ಲೆಗಳ ಸಮಗ್ರ ಅಭಿವೃದ್ದಿ ಒತ್ತಾಯಿಸಿ ಶಾಸಕರಿಗೆ ಪತ್ರ ಚಳುವಳಿ ಮೂಲಕ ಆಗ್ರಹಿಸಲಾಗಿದೆ ಎಂದರು.
371(ಜೆ) ಅಡಿಯಲ್ಲಿ ಖಾಸಗಿ ಕಂಪನಿಯಲ್ಲಿ ಯುವಕರಿಗೆ ಉದ್ಯೋಗ ಸೃಷ್ಠಿಸಬೇಕು. ಶಿಕ್ಷಣ, ಕೈಗಾರಿಕೆ, ಆರೋಗ್ಯ ಬಗ್ಗೆ ಹೆಚ್ಚಿನ ಗಮನ ವಹಿಸಿ ಜಿಲ್ಲೆಯಲ್ಲಿ ವೈದ್ಯರ ಕೊರತೆಯನ್ನು ನಿಗಿಸಬೇಕು.ಸಮರ್ಪಕವಾಗಿ ನರೇಗಾ ಕಾಮಗಾರಿಗಳನ್ನು ಪ್ರಾರಂಭಿಸಿ ವಲಸೆ ಹೋಗುವುದನ್ನು ತಡೆಗಟ್ಟಬೇಕು ಸೇರಿದಂತೆ ಹೈ.ಕ.6ಜಿಲ್ಲೆಗಳ ಸಮಗ್ರ ಅಭಿವೃದ್ದಿಯಾಬೇಕೆಂದು ಒತ್ತಾಯಿಸಿದರು. ಭಾರತ ಕಮ್ಯುನಿಸ್ಟ್ ಪಕ್ಷದ ಸುರೇಶ ಹಲಗೆ, ಜಯಲಕ್ಷ್ಮಿ ಇದ್ದರು.