ಲೋಕದರ್ಶನ ವರದಿ
ಕೊಪ್ಪಳ 27: ವಸುಂಧರಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಜೀವಮಾನದ ಪುಣ್ಯ ಎಂದು ಭಾರತೀಯ ನಿವೃತ್ತ ಅರಣ್ಯಾಧಿಕಾರಿ ಎ.ಎನ್ ಯಲ್ಲಪ್ಪ ರೆಡ್ಡಿ ಅಭಿಪ್ರಾಯಪಟ್ಟರು.
ತಾಲೂಕಿನ ಮುನಿರಾಬಾದ್ ತೋಟಗಾರಿಕ ವಿಶ್ವವಿದ್ಯಾಯದಲ್ಲಿ ಕಿಲರ್ೋಸ್ಕರ್ ಲಿಮಿಟೆಡ್ ಹಮ್ಮೀಕೊಂಡಿದ ವಸುಂಧರಾ ಅಂತರಾಷ್ಟೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇದುವರೆಗೆ ಯಾವುದೇ ಸರಕಾರವು ಮಾಡದೆ ಇರುವ ಕೆಲಸವನ್ನು ಅತುಲ್ ಹಾಗೂ ಆರತಿ ಕಿಲರ್ೋಸ್ಕರ್ ದಂಪತಿ ಕಳೆದ ಹತ್ತು ವರ್ಷಗಳಿಂದ ಮಾಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು, ವಸುಂಧರೆಯು ಅತ್ಯಂತ ಪ್ರೀತಿಯಿಂದ ತನ್ನ ಮಡಿಲಿನಲ್ಲಿ ನಮ್ಮನ್ನು ಬೆಳೆಸಿಕೊಂಡು ಬಂದಿದ್ದಾಳೆ, ಆ ಪ್ರಕೃತಿ ಮಹಾತಾಯಿಗೆ ನಾವುಗಳು ಚೀರಋಣಿ ಎಂದು ಹೇಳಿದರು.
ನಾನು ಅರಣ್ಯಾಧಿಕಾಯಾಗಿ ಸೇವೆಗೆ ನಿಯುಕ್ತಿಗೊಂಡ ಮೇಲೆ ಬಹಳಷ್ಟು ಕಡೆಗಳಲ್ಲಿ ಕೆಲಸ ನಿರ್ವಹಿಸಿದ್ದೆನೆ, ನಮ್ಮ ನಾಡು ಹಲವಾರು ಸಂಪತ್ತು ಹೊಂದಿರುವ ಪುಣ್ಯ ಭೂಮಿ ಆದರೆ, ನಾವು ಅದನ್ನು ಕಾಪಾಡಿಕೊಳ್ಳುವಲ್ಲಿ ಗಮನ ವಹಿಸಬೇಕಾಗಿದೆ ಎಂದು ತಿಳಿಸಿದರು. ಈ ಹಿಂದೆ ನಾನು 1993 ರಲ್ಲಿ ನೀಡಿದ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಯಲ್ಲಪ್ಪ ರೆಡ್ಡಿ ವರದಿ ನೀಡಿದೆ. ಆದರೆ ಸರಕಾರವು ಆ ಬಗ್ಗೆ ಆಸಕ್ತಿ ವಹಿಸದೇ ಮುಚ್ಚಿ ಹಾಕಿತು ಎಂದು ಬೇಸರ ವ್ಯಕ್ತಪಡಿಸಿದರು. ಚಳ್ಳಕೆರೆ ಹತ್ತಿರ ಸುಮಾರು ಹತ್ತು ಸಾವಿರ ಎಕರೆ ವಿಶಾಲ ಭೂಮಿಯನ್ನು ಇಂದು ನ್ಯೂಕ್ಲಿಯರ್ ತಯಾರಿಕೆ ನೀಡಿರುವುದು ನಮ್ಮ ಸರಕಾರಗಳ ಸಾಧನೆ ಎಂದು ಬೇಸರ ವ್ಯಕ್ತಪಡಿಸಿದರು.
ಐ.ಪಿ.ಎಸ್.ಅಧಿಕಾರಿ ಶ್ರೀನಾಥ್ ಮಾತನಾಡಿ ಇಂತಹ ಅರ್ಥ ಪೂರ್ಣ ಕಾರ್ಯಕ್ರಮ ಆಯೋಜನೆ ಮಾಡಿರುವ ಕಿಲರ್ೋಸ್ಕರ್ ಕಂಪನಿ ಶ್ಲಾಘನೀಯ ಕಾರ್ಯ ಮಾಡುತ್ತಿದೆ ಎಂದು ಹೇಳಿದರು. ಪ್ರಸಕ್ತ ಕಾಲಮಾನದಲ್ಲಿ ಪರಿಸರ ಕೆಟ್ಟಿಲ್ಲ ಬದಲಾಗಿ ಮನುಷ್ಯನ ಮೆದುಳು ಕಳೆಗುಂದಿದೆ, ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚು ಒತ್ರು ನೀಡುವ ನಿಟ್ಟಿನಲ್ಲಿ ನಮ್ಮ ಇಲಾಖೆಯ ಮೂಲಕ ಹನ್ನೆರಡು ಸಾವಿರ ಗಿಡಗಳನ್ನು ನೆಟ್ಟು ಅವುಗಳ ಪೋಷಣೆಗೆ ಇಲಾಖೆ ಶ್ರಮಿಸುತ್ತಿದೆ ಎಂದು ಹೇಳಿದರು.
ವಸುಂಧರಾ ಮಿತ್ರ, ವಸುಂಧರಾ ಸನ್ಮಾನ್ ಮತ್ತು ಜೀವಮಾನ ಸಾಧನೆ ಪುರಸ್ಕೃತ ಹಾಗೂ ತುಂಗಭದ್ರಾ ರೈತ ಸಂಘ ಅಧ್ಯಕ್ಷ ಎಮ್.ಪುರುಷೋತ್ತಮಗೌಡ ಮಾತನಾಡಿದ ತುಂಗಭದ್ರಾ ನದಿಯ ಉಳಿವಿಗಾಗಿ ಇಂದು ನಾವು ಎಚ್ಚೆತ್ತುಕೊಳ್ಳದೆ ಹೋದರೆ ಮುಂದಿನ ಪೀಳಿಗೆಗೆ ಕಷ್ಟ ಕಟ್ಟಿಟ ಬುತ್ತಿ ಎಂದು ಆತಂಕ ವ್ಯಕ್ತಪಡಿಸಿದರು. ಈ ವರೆಗೂ ಯಾವುದೇ ರಾಜಕಾರಣಿಗಳು ಸರಿಯಾಗಿ ಕೆಲಸ ಮಾಡದೇ ಆಣೆಕಟ್ಟಿನಲ್ಲಿ ಸುಮಾರು 33 ಟಿಎಂಸಿ ಹುಳು ತುಂಬಿಕೊಂಡಿದೆ ಎಂದು ಹೇಳಿದರು.
ಕಿಲರ್ೋಸ್ಕರ್ ಕಂಪನಿ ವ್ಯವಸ್ಥಾಪಕ ನಿದರ್ೇಶಕ ಆರ್.ವಿ.ಗುಮಾಸ್ತೆ ಮಾತನಾಡಿ ನದಿಗಳಿಗೂ ಮತ್ತು ಮನುಷ್ಯನಿಗೆ ಒಂದು ರೀತಿಯ ಅನ್ಯೋನ್ಯ ಸಂಬಂಧ ಇದೆ, ಮಳೆಯಾದರೆ ಸಾಕು ಮೊದಲ್ಲೆಲ್ಲಾ ಸ್ವಚ್ಛ ನೀರು ಹರಿದು ನದಿಯನ್ನು ಸೇರಿತಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಆ ರೀತಿಯ ವಾತಾವರಣ ಇಲ್ಲ. ಇಂದು ದೊಡ್ಡ ದೊಡ್ಡ ನಗರದ ಮೂಲಕ ನದಿ ಸಮುದ್ರಗಳಿಗೆ ಹೊಲಸು ದುಂಬಿದ ನೀರನ್ನು ಕಳಿಸಿಕೊಡುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು. ಆದರೆ ಪುಣ್ಯದ ಸಂಗತಿ ಎಂದರೆ ನಮ್ಮ ತುಂಗಭದ್ರಾ ನದಿಯ ಅಕ್ಕಪಕ್ಕದಲ್ಲಿ ನಗರಗಳು ಇಲ್ಲದಿರುವುದು ನಮ್ಮ ಪುಣ್ಯ ಎಂದು ಹೇಳಿದರು. ಪ್ರಸ್ತುತ ದಿನಗಳಲ್ಲಿ ಶೌಚಾಲಯ ಬಳಸಿ ಆರೋಗ್ಯದ ಕಡೆಗೆ ಒಂದು ಹೆಜ್ಜೆ ಇಟ್ಟು ಆರೋಗ್ಯಕರ ಪರಿಸರ ನಿಮರ್ಾಣ ಕಾರ್ಯದಲ್ಲಿ ಸರಕಾರ ಮತ್ತು ನಮ್ಮ ಕಾಖರ್ಾನೆ ದಿಟ್ಟ ಪ್ರಯತ್ನವನ್ನು ಮಾಡುತ್ತಿದೆ ಎಂದು ತಿಳಿಸಿದರು.
ಅನೇಕ ಪುಣ್ಯಕ್ಷೇತ್ರ ದೇವಾಲಯ ಹಾಗೂ ನದಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ನದಿಯ ನೀರು ಕಲಂಷಗೊಂಡು ಪರಿಸರ ಹಾಳಾಗುತ್ತಿದೆ ಎಂದ ಆತಂಕ ವ್ಯಕ್ತಪಡಿಸಿದರು.
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮುಕುಂದ್ಎಸ್.ಕುಲಕಣರ್ಿ, ವಸುಂಧರಾ ಚಲನಚಿತ್ರೋತ್ಸವ ನಿದರ್ೇಶಕ ವಿರೇಂದ್ರ ಚೈತ್ರವ್, ಕಿಲರ್ೋಸ್ಕರ್ ಲಿಮಿಟೆಡ್ ಆಡಳಿತಾಧಿಕಾರಿ ಪಿ.ನಾರಾಯಣ ಸೇರಿದಂತೆ ಇತರರು ಉಪಸ್ಥಿತರಿದರು.