ಉಡುಪಿ ಕೃಷ್ಣ ಮಠದಲ್ಲಿ ಕನಕದಾಸರ ಮೂತರ್ಿ ಪ್ರತಿಷ್ಠಾಪನೆ ಮಾಡಲಿ: ಬೀಳಗಿ

ರಾಯಬಾಗ 26: ಉಡುಪಿ ಕೃಷ್ಣನ ಭಕ್ತಿಯನ್ನು ಇಡೀ ವಿಶ್ವಕ್ಕೆ ಪರಿಚಿಸಿದ ಕೀತರ್ಿ ಕನಕದಾಸರರಿಗೆ ಸಲ್ಲುತ್ತದೆ. ಅಷ್ಠಮಠದ ಮಠಾಧಿಪತಿಗಳಿಗೆ ನಿಜವಾಗಿ ಕೃಷ್ಣನ ಮೇಲೆ ಭಕ್ತಿಯಿದ್ದರೆ, ಕೃಷ್ಣನ ಪರಮ ಭಕ್ತ ಕನಕದಾಸರರಿಗೆ ಗೌರವ ಸಲ್ಲಿಸಲು ಉಡುಪಿ ಕೃಷ್ಣ ಮಠದಲ್ಲಿ ಕನಕದಾಸರ ಮೂತರ್ಿ ಪ್ರತಿಷ್ಠಾಪನೆ ಮಾಡಬೇಕೆಂದು ಈ ವೇದಿಕೆ ಮೂಲಕ ಮನವಿ ಮಾಡುವುದಾಗಿ ಮಧುಸೂದನ ಬೀಳಗಿ ಹೇಳಿದರು. 

ಪಟ್ಟಣದ ತಾಲೂಕು ಮಾದರಿ ಶಾಲೆ ಆವರಣದಲ್ಲಿ ಕನರ್ಾಟಕ ಪ್ರದೇಶ ಕುರುಬರ ಸಂಘ ರಾಯಬಾಗ ತಾಲೂಕು ಘಟಕದಿಂದ ಸೋಮವಾರದಂದು ಹಮ್ಮಿಕೊಂಡಿದ್ದ ಸಂತ ಶ್ರೇಷ್ಠ ಕನಕದಾಸರವರ 531ನೇ ಜಯಂತಿ ಉತ್ಸವ ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.

ಕನಕದಾಸರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ ಮಾಡಿದರೆ ಸಾಲದು, ಅಲ್ಲಿ ಕನಕದಾಸರ ಕೃತಿಗಳ ಬಗ್ಗೆ ವಿಮಶರ್ೆ ನಡೆಯಬೇಕು, ಹಾಲು ಮತದ ಬಗ್ಗೆ ಸಂಶೋಧನೆ ಮಾಡುವ ಕಾರ್ಯ ನಡೆಯಬೇಕು ಆಗ ಮಾತ್ರ ಅಧ್ಯಯನಪೀಠ ಸ್ಥಾಪನೆ ಮಾಡಿದ್ದಕ್ಕೆ ಸ್ವಾರ್ಥಕವಾಗುತ್ತದೆ ಎಂದರು. ಜಿಲ್ಲೆಯಲ್ಲಿ ಕುರುಬ ಸಮಾಜದ ಜನಸಂಖ್ಯೆ ಹೆಚ್ಚಿದ್ದರೂ ಕೂಡ ಸಮಾಜಕ್ಕೆ ದೊರಕಬೇಕಾದ ಸ್ಥಾನಮಾನ ಇನ್ನುವರೆಗೆ ಸಿಕ್ಕಿರುವುದಿಲ್ಲ. ಅವುಗಳನ್ನು ಪಡೆಯಲು ಸಮಾಜ ಒಂದುಗೂಡಿ ನಮ್ಮ ಹಕ್ಕು ಪಡೆಯಲು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಮಾಮರ್ಿಕವಾಗಿ ನುಡಿದರು.  

ಸಮಾರಂಭವನ್ನು ವಸಂತರಾವ್ ಪಾಟೀಲ ಸಹಕಾರಿ ಸಕ್ಕರೆ ಕಾಖರ್ಾನೆ ಅಧ್ಯಕ್ಷ ಪ್ರತಾಪರಾವ್ ಪಾಟೀಲ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಅಭಿನವ ಯಲ್ಲಾಲಿಂಗ ಮಹಾರಾಜರು ಸಾನಿಧ್ಯ ವಹಿಸಿದ್ದರು. ಜಕನೂರ ಮದನ ಮದಗೊಂಡೇಶ್ವರ ಸಿದ್ಧ ಆಶ್ರಮದ ಡಾ.ಮಾದಲಿಂಗ ಮಹಾರಾಜರು ಆಶೀರ್ವಚನ ನೀಡಿದರು.   

ಕಿರುತೆರೆ ಗಾಯಕ ಯುವ ಪ್ರತಿಭೆ ಗದಗ ಜಿಲ್ಲೆಯ ಹಣಮಂತ ಬಂಟೂರ, ಹಿರಿಯರಾದ ಡಿ.ಎಸ್.ನಾಯಿಕ, ಹಾಲಪ್ಪ ಘಾಳಿ, ತಾ.ಕು.ಸಂಘದ ಅಧ್ಯಕ್ಷ ಶಿವಪುತ್ರ ಹಾಡಕರ, ಕಾರ್ಯದಶರ್ಿ ಲಖನ ಕಟ್ಟಿಕಾರ, ಬಾಳಕೃಷ್ಣ ಜಂಬಗಿ, ಸಿದ್ದು ಪೂಜಾರಿ, ರಮೇಶ ಗೊಂಡೆ, ಆರ್.ಎಚ್.ಗೊಂಡೆ, ಮಹಾದೇವ ಕೊಕಾಟೆ, ಮಹಾದೇವಿ ಒಡೆಯರ, ಡಾ.ನೂತನ ಬೊರೆ, ಸುರೇಂದ್ರ ಕರಿಗಾರ, ಕಲ್ಲಪ್ಪ ದಳವಾಯಿ, ಗೋಪಾಲ ಬಿದರಿ, ಸದಾಸಿವ ಪೂಜಾರಿ ಎಸ್.ಬಿ.ಹೊಳ್ಕರ, ಬಿ.ಎಸ್.ಗಡ್ಡೆ, ಮಾರುತಿ ಲಬಾಗೆ, ವಸಂತ ಕರಿಗಾರ ಸೇರಿದಂತೆ ಅನೇಕರು ಇದ್ದರು. 

ನ್ಯಾಯವಾದಿ ಆರ್.ಎಚ್.ಗೊಂಡೆ ಸ್ವಾಗತಸಿದರು. ಸಿದ್ದು ಪೂಜಾರಿ ನಿರೂಪಿಸಿ, ವಂದಿಸಿದರು.