ಹಾಸ್ಯಲೋಕದಿಂದ ನಗಿಸುವ ಕಾರ್ಯ ನಿರಂತರವಾಗಿರಲಿ: ಪರಣ್ಣ

ಲೋಕದರ್ಶನ ವರದಿ

ಗಂಗಾವತಿ 09: ಸಂತರು, ಶರಣರು ನಡೆದಾಡಿದ ಈ ಪುಣ್ಯ ಭೂಮಿಯನ್ನು ಶರಣಬಸಪ್ಪನವರಂತೆ ಪತ್ರಕರ್ತರಾದ ಎಸ್.ಎಂ.ಪಟೇಲ್,  ಪರಶುರಾಮಪ್ರಿಯ ಅವರು ಹಾಸ್ಯಲೋಕ ಸಂಘಟನೆಯ ಮೂಲಕ ನಗರದ ಜನತೆಯನ್ನು ನಗಿಸುವ ಕಾರ್ಯ ನಿರಂತರವಾಗಿಲಿ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ನಗರದ ನೀಲಕಂಠೇಶ್ವರ ವೃತ್ತದಲ್ಲಿರುವ ಬಾಲಕಿಯರ ಸ.ಹಿ.ಪ್ರಾ. ಶಾಲೆಯಲ್ಲಿ ಹಾಸ್ಯಲೋಕ ಸಂಘಟನೆ ಹಮ್ಮಿಕೊಂಡಿದ್ದ 12ನೇ ವರ್ಷದ ನಗೆ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪತ್ರಕರ್ತ ವೃತ್ತಿಯ ಜೊತೆಗೆ ಉತ್ತಮ ವಾತಾವರಣ ನಿಮರ್ಾಣಕ್ಕಾಗಿ ಹಾಸ್ಯಲೋಕ ಸಂಘಟನೆಯಿಂದ ನಗೆ ಕಾರ್ಯಕ್ರಮಗಳನ್ನು ಆಯೋಜಿಸಿ ಜನತೆಯನ್ನು ಹಾಸ್ಯದಿಂದ ರಂಜಿಸುತ್ತಿರುವುದು ಖುಷಿ ತಂದಿದೆ. ಈ ಕಾರ್ಯ ನಿರಂತರವಾಗಿರಲಿ. ತಾವೂ ಸಹ ಸಹಕಾರ ನೀಡುವುದಾಗಿ ತಿಳಿಸಿದರು.

ಹಾಸ್ಯಲೋಕ ಸಂಘಟನೆ ಅಧ್ಯಕ್ಷ ಎಸ್.ಎಂ. ಪಟೇಲ್ ಪ್ರಾಸ್ತವಿಕವಾಗಿ ಮಾತನಾಡಿ, ಸಂಘಟನೆ ಹನ್ನೆರಡು ವರ್ಷ ನಡೆದುಬಂದ ಹಾದಿಯನ್ನು ಸವಿಸ್ತಾರವಾಗಿ ತಿಳಿಸಿದರಲ್ಲದೇ ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಶಾಸಕರ ಅನುದಾನದಲ್ಲಿ ರಂಗಮಂದಿರವನ್ನು ನಿಮರ್ಿಸುವಂತೆ ಶಾಸಕ ಪರಣ್ಣ ಮುನವಳ್ಳಿಯವರನ್ನು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು. 

ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಜಿ.ಪಂ ಸದಸ್ಯೆ ಶಾಂತಾರಮೇಶ ನಾಯಕ, ವಿಶೇಷ ಆಹ್ವಾನಿತ ಚಿತ್ರನಟ ಗವಿಸಿದ್ದಯ್ಯ ವಸ್ತ್ರದ್ ಮಾತನಾಡಿದರು 

ಸುವರ್ಣಗಿರಿ ದಿನಪತ್ರಿಕೆ ವಿಶೇಷ ಸಂಚಿಕೆ, ನಗು ಡಿಜಿಟಲ್ ಕಾಡರ್್, ನಗು ಕ್ಯಾಲೆಂಡರ್, ನಗೆ ಮಾಹಿತಿ ಪತ್ರ ಇದೇ ವೇಳೆ ಬಿಡುಗಡೆ ಮಾಡಲಾಯಿತು. ರಂಗಭೂಮಿ ಕಲಾವಿದರಾದ ಚನ್ನಬಸಯ್ಯ ಬಿ.ಟಿ., ಟಿ. ಹನುಮಂತಪ್ಪ ನಾಯಕ, ಕನರ್ಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕೆ. ನಿಂಗಜ್ಜ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಹಾಸ್ಯ ಕಲಾವಿದರಾದ ಗಂಗಾವತಿಯ ಜೆ. ಮರಿಯಪ್ಪ, ಕೂಡ್ಲಿಗಿಯ ಕೋಗಳಿ ಕೊಟ್ರೇಶ, ಬೆಂಗಳೂರಿನ ರವಿಸಂತೋಷ, ಗಂಗಾವತಿಯ ತಿಪ್ಪೇರುದ್ರಸ್ವಾಮಿ ಅವರು ತಮ್ಮ ಅದ್ಭುತ ಹಾಸ್ಯದ ಮೂಲಕ ಜನತೆಗೆ ಆಸ್ಯ ರಸದೌತಣ ಉಣಬಡಿಸಿದರು.

ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ, ನಗರಸಭೆ ಸದಸ್ಯರಾದ ಸುನೀತಾ ಶ್ಯಾವಿ, ನವೀನ್ಕುಮಾರ, ಸೋಮನಾಥ ಕಂಪ್ಲಿ, ರಾಯಚೂರು ಸಂಜೆ ದಿನಪತ್ರಿಕೆಯ ಸಂಪಾದಕ ಪಿ. ಚನ್ನಬಸವ, ಮಿಡೀಯಾ ಕ್ಲಬ್ ಅಧ್ಯಕ್ಷ ರಾಮಮೂತರ್ಿ ನವಲಿ, ಹಾಸ್ಯಲೋಕ ಸಂಘಟನೆಯ ಅಧ್ಯಕ್ಷ ಎಸ್.ಎಂ. ಪಟೇಲ್, ಪ್ರ. ಕಾರ್ಯದಶರ್ಿ ಎಂ. ಪರಶುರಾಮಪ್ರಿಯ ಸೇರಿದಂತೆ ಇತರರಿದ್ದರು.