ಸಮಾಜದಲ್ಲಿ ಸೌಹಾರ್ದತೆ, ಧೈರ್ಯ ಬೆಳೆಸುವ ಕಾರ್ಯವಾಗಲಿ: ಪಾಟೀಲ

ಗದಗ: ರಾಷ್ಟ್ರಭಕ್ತರಾಗಬೇಕಾದಲ್ಲಿ ಹಜರತ್ ಟಿಪ್ಪುಸುಲ್ತಾನರ ಜೀವನದಿಂದ ಕಲಿಯಬೇಕಾದ ವಿಷಯಗಳು ಸಾಕಷ್ಟಿದ್ದು ಸಮಾಜದಲ್ಲಿ ಸೌಹಾರ್ದತೆ, ಸಹನೆ, ಧೈರ್ಯ ಬೆಳೆಸುವ ಕಾರ್ಯವಿಂದು ಅಗತ್ಯವಾಗಿದೆ ಗದಗ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ.ಪಾಟೀಲ ನುಡಿದರು.

ಗದಗ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮುದಾಯದ ವಿವಿಧ ಸಂಘಟನೆಗಳ ಸಹಯೋಗದಲ್ಲಿಂದು ಗದಗ-ಬೆಟಗೇರಿ ನಗರ ಸಭೆ ಆವರಣದಲ್ಲಿ ಜರುಗಿದ ಹಜರತ್ ಟಿಪ್ಪು ಸುಲ್ತಾನರ ಜಯಂತಿ ಆಚರಣೆ ನಿಮಿತ್ಯ ಸಮಾರಂಭ ಉದ್ಘಾಟಿಸಿ ಅವರ ಭಾವಚಿತ್ರಕ್ಕೆ ಪುಷ್ಪ ಗೌರವ ಅಪರ್ಿಸಿ ಅವರು ಮಾತನಾಡಿದರು. ಟಿಪ್ಪುವಿನ ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಬಳಕೆಯಲ್ಲಿತ್ತು. ಟಿಪ್ಪು ತನ್ನ ನಾಡಿನ ಸ್ವಾಭಿಮಾನ ಹಾಗೂ ಸ್ವಾತಂತ್ರ್ಯದ ಉಳಿವಿಗೆ ತನ್ನ ಮಕ್ಕಳನ್ನೆ ಒತ್ತೆಯಿಟ್ಟ ಉದಾಹರಣೆ ಬೇರಿಲ್ಲ. ಶ್ರೀರಂಗಪಟ್ಟಣ, ಶೃಂಗೇರಿ ದೇವಸ್ಥಾನಗಳಿಗೆ ನೀಡಿದ ದತ್ತಿ ಗೌರವಗಳು ಅವನೊಬ್ಬ ಧರ್ಮಸಹಿಷ್ಣತೆಯ ರಾಜನಾಗಿದ್ದ ಎನ್ನುವುದಕ್ಕೆ ಸಾಕ್ಷಿಯಾಗಿವೆ. ಇಂತಹ ರಾಷ್ಟ್ರ ಪ್ರೇಮಿ, ನಾಡಿನ ಸ್ವಾತಂತ್ರ್ಯಕ್ಕಾಗಿ ಜೀವವನ್ನೆ ಬಲಿದಾನ ಮಾಡಿದ ಟಿಪ್ಪು ಸುಲ್ತಾನ ಜಯಂತಿ ಆಚರಣೆಗೆ ವಿರೋಧ, ಅಪಸ್ವರಗಳು ಅನಾವಶ್ಯಕ. ಸಾರ್ವಜನಿಕ ಆಡಳಿಗಾರರ ದ್ವಂದ್ವ ನಿಲುವು ಅವರ ಕುರಿತು ಜನರ ವಿಶ್ವಾಸ ಕಳೆದುಕೊಳ್ಳವಂತಾಗಬಾರದು.  ಜಯಂತಿಗಳ ಆಚರಣೆಯ ಸಕರ್ಾರದ ಮೂಲ ಉದ್ದೇಶವೇ ಮಾನವ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಿದ ಐತಿಹಾಸಿಕ ವ್ಯಕ್ತಿಗಳ ಜೀವನಾದರ್ಶಗಳ ಅರಿವು ಇಂದಿನ ಪೀಳಿಗೆಗೆ ಆಗಲಿ ಎನ್ನುವದೇ ಆಗಿರುವುದನ್ನು ನಾವು ಮರೆಯಬಾರದು ಎಂದ ಎಚ್.ಕೆ.ಪಾಟೀಲ ರಾಜ್ಯ ಸಕರ್ಾರವು ಅಲ್ಪಸಂಖ್ಯಾತರ ಹಾಗೂ ಅವರ ವಾಸ ಸ್ಥಳಗಳ ಅಭಿವೃದ್ಧಿಗಾಗಿ ಇಲಾಖೆ ಹಾಗೂ ನಿಗಮದಿಂದ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದು ಗದಗ ಜಿಲ್ಲೆಗೆ 6 ಕೋಟಿ ರೂ ಅನುದಾನ ಒದಗಿಸಿದೆ ಎಂದರು.

ಸಮಾರಂಭದಲ್ಲಿ ಟಿಪ್ಪು ಸುಲ್ತಾನರ ಜೀವನ ಸಾಧನೆ ಕುರಿತು ಎ.ಎಸ್. ಮಕಾನದಾರ  ಅವರು ಉಪನ್ಯಾಸ ನೀಡಿ. 1757 ರ ನವೆಂಬರ 10 ರಂದು ಜನಿಸಿದ ಹಜರತ್ ಟಿಪ್ಪುವಿನ ಜೀವನ ರಣರಂಗದಿಂದಲೇ ಪ್ರಾರಂಭಗೊಂಡು ಅದರಲ್ಲೆ  ಮುಕ್ತಾಯವಾಗಿದ್ದನ್ನು ನಾವು ಗಮನಿಸಬೇಕು ಎಂದರು. ನಾಡಿನ ಜನರ ಭಾಷೆಯನ್ನು ರಾಜ್ಯಾಡಳಿತದಲ್ಲಿ ಅಳವಡಿಸಿದ ಅವರ ಆಸ್ಥಾನದಲ್ಲಿ ದೀವಾನ ಪೂರ್ಣಯ್ಯ, ದಂಡನಾಯಕರು ಸೇರಿದಂತೆ ಹಿಂದೂ ಧರ್ಮದ ವಿವಿಧ ವರ್ಗಗಳ ಮೇಧಾವಿಗಳೇ ಇದ್ದರು. ಟಿಪ್ಪುವಿನ ರಾಜ್ಯಭಾರದಲ್ಲಿ ಭೂ-ಸುಧಾರಣೆ, ಸರ್ವರ ಕಲ್ಯಾಣ, ಕೃಷಿ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದನ್ನು, ಶರಣರ ಕಾಯಕ ಪ್ರಜ್ಞೆ ಹಾಗೂ ಇಂದಿನ ನಮ್ಮ ಸಂವಿಧಾನದ ಆಶಯಗಳನ್ನು ಅಂದಿನ ಆಡಳಿತದಲ್ಲಿ ಇದ್ದುದನ್ನು ನಾವು ಗಮನಿಸಬಹುದಾಗಿದೆ. 

ಅಲ್ಪ ಸಂಖ್ಯಾತರ ಸಮುದಾಯಗಳಿಗೆ ರಾಜ್ಯ ಸಕರ್ಾರ ಜಾರಿಗೊಳಿಸಿದ ಯೋಜನೆಗಳ ಕಿರುಪುಸ್ತಕವನ್ನು ಸಮಾರಂಭದಲ್ಲಿ ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷ ಎಸ್.ಪಿ. ಬಳಿಗಾರ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಮಾಜಿ ಶಾಸಕ ಡಿ.ಆರ್.ಪಾಟೀಲ, ಗದಗ ತಾ.ಪಂ. ಅಧ್ಯಕ್ಷ ಮೋಹನ ದುರಗಣ್ಣವರ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ ಸುರೇಶ ಕಟ್ಟಿಮನಿ, ನಗರ ಸಭೆ ಪೌರಾಯುಕ್ತ ಮನ್ಸೂರ ಅಲಿ, ಗದಗ ತಹಶೀಲ್ದಾರ ಶ್ರೀನಿವಾಸ ಮೂತರ್ಿ, ಗದಗ-ಬೆಟಗೇರಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಮ್.ಸಿ. ಶೇಖ್, ನಗರಸಭೆ ಸದಸ್ಯರುಗಳಾದ ಬಿ.ಬಿ.ಅಸೂಟಿ, ಖಮರಸುಲ್ತಾನಾ ನಮಾಜಿ, ಬರಕತ್ ಅಲಿ ಮುಲ್ಲಾ, ಮಹಮ್ಮದಶಫಿ ಕುದರಿ, ಮಹಮ್ಮದ್ ಶಾಲಗಾರ,  ಗದಗ ಜಿಲ್ಲಾ ವಕ್ಫ್ ಬೋರ್ಡ ಅಧ್ಯಕ್ಷ ಜಿ.ಎಮ್. ದಂಡಿನ,  ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ಮಹಮ್ಮದ್ ಯುಸೂಫ್ ನಮಾಜಿ, ಮಾಜಿ ಅಧ್ಯಕ್ಷ ಅಕ್ಬರಸಾಬ ಬಬಚರ್ಿ, ಸಾದಿಕ ನರಗುಂದ, ಟಿಪ್ಪು ಸುಲ್ತಾನ ಅಭಿಮಾನಿ ವೇದಿಕೆಯ ಜಿಲ್ಲಾ ಅಧ್ಯಕ್ಷ ಮುನ್ನಾ ರೇಷ್ಮೆ,  ಚಾಂದಸಾಬ, ಎಸ್, ಎನ್. ಬಳ್ಳಾರಿ ಕೆ.ಬಿ.ತಳಗೇರಿ, ಬಸವರಾಜ ಕಡೇಮನಿ, ಪೋಲಿಸ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಮುದಾಯದ ಗಣ್ಯರು, ಹಿರಿಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

ಸಂಗಮೇಶ ಕಲಬುಗರ್ಿ ಹಾಗೂ ಸಂಗಡಿಗರೊಂದಿಗೆ ನಾಡಗೀತೆಯೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕ ಶರಣು ಗೋಗೇರಿ ಸರ್ವರನ್ನು ಸ್ವಾಗತಿಸಿದರು. ಬಾಹುಬಲಿ ಜೈನರ ಹಾಗೂ ಮಂಜುಳಾ ಬಡಿಗೇರ ಕಾರ್ಯಕ್ರಮ ರೂಪಿಸಿದರು.