ಸಿಎಂ ರೈತರ ಕ್ಷಮೆ ಕೇಳಲಿ: ಸವದಿ ಒತ್ತಾಯ


ಅಥಣಿ 19:  ರಾಜ್ಯದ ಮುಖ್ಯಮಂತ್ರಿಗಳು ಉತ್ತರ ಕನರ್ಾಟಕದ ರೈತರನ್ನು ಗೂಂಡಾಗಳೆಂದು ಮತ್ತು ರೈತ ಮಹಿಳೆಯ ಕುರಿತು ಆಡಿದ ಮಾತುಗಳು ಅವರ ಸ್ಥಾನಕ್ಕೆ ಶೋಭೆ ತರಲಾರದು. ಈ ಕುರಿತು ರೈತ ಸಮುದಾಯವನ್ನು ಕ್ಷಮೆ ಕೇಳಬೇಕು ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಒತ್ತಾಯಿಸಿದರು.

   ಕಳೆದ ನಾಲ್ಕು ದಿನಗಳಿಂದ ಹಗಲು ರಾತ್ರಿ ತಾಲೂಕಿನ ಮುರಗುಂಡಿ ಗ್ರಾಮದ ಸಂಕೇಶ್ವರ ಜೇವರಗಿ ರಾಜ್ಯ ಹೆದ್ದಾರಿಯಲ್ಲಿ ವಿವಿಧ ಬೇಡಿಕೆಗೆ ಆಗ್ರಹಿಸಿ ರೈತ ಸಂಘ ಮತ್ತು ಹಸಿರು ಸೇನೆ ನಡೆಸಯತ್ತಿರುವ ಹೋರಾಟಕ್ಕೆ ಹಾಗೂ ಕಬ್ಬು ಬೆಳೆಗಾರರಿಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು ರೈತರ ಸಮಸ್ಯೆಗೆ ಸ್ಪಂದಿಸ ಬೇಕಾದವರೆ ಖಾಸಗಿ ಕಾಖರ್ಾನೆ ಮಾಲಿಕರ ಪರವಾಗಿ ನಿಂತರೆ ರೈತರಿಗೆ ನ್ಯಾಯ ಸಿಗಲು ಹೇಗೆ ಸಾಧ್ಯ. ತಾಲೂಕಿನ ಕಾಖರ್ಾನೆಯವರು ತಾವೇ ಹೇಳಿದಂತೆ 2900 ರಂತೆ ಕಬ್ಬು ಪೂರೈಕೆ ಮಾಡಿದ ರೈತರಿಗೆ ಸಮನಾಗಿ ಹಣ ನೀಡಿ ಮಾತಿನಂತೆ ನಡೆದುಕೊಂಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲಾ. ಆದರೆ ಕೆಲವರಿಗೆ ಹಣ ನೀಡಿ ಬೇರೆಯವರಿಗೆ ದೊರಕದೆ ಇದ್ದಾಗ ಆಕ್ರೋಶ ಗೊಳ್ಳುವುದು ಸಹಜ. ಇದನ್ನು ಅರ್ಥಮಾಡಿ ಕೊಂಡು ಸರಕಾರ ನಡೆಯಬೇಕಾಗಿತ್ತು.

    ಇನ್ನಾದರೂ ಸರಕಾರ ಎಚ್ಚತ್ತುಕೊಂಡು ರೈತನ ಹಿಂದಿನ ಬಾಕಿ ತಕ್ಷಣ ನೀಡಿ ಪ್ರಸಕ್ತ ಹಂಗಾಮಿನ ಬಿಲ್ಲನ್ನು ಎಫ್ ಆರ್ ಪಿ ದರದ ಮೇಲೆ ಪಕ್ಕದ ಮಹಾರಾಷ್ಟ್ರದ ಕಾಖರ್ಾನೆಯವರು ನೀಡುವ 200 ರೂ.ಕೊಡಬೇಕು  ಇಷ್ಟು ನೀಡುವದರಿಂದ ಅನೇಕ ಉಪ ಉತ್ಪನ್ನಗಳಿಂದ ಕಾಖರ್ಾನೆಗೆ ಲಾಭ ಬರುವದರಿಂದ ಮಾಲಿಕರಿಗೆ ಯಾವುದೆ ತರಹದ ತೊಂದರೆ ಯಾಗಲಾರದು. ಕಳೆದ ಸಲ ಇಂತಹ ತೊಂದರೆ ಬಂದಾಗ ಸರಕಾರದ ಬಳಿ ಅನೇಕ ಮಾರ್ಗಗಳಿವೆ. ಕಾಖರ್ಾನೆ ಮಾಲಿಕರಿಂದ ಸರಕಾರ ಪಡೆದು ಕೊಳ್ಳುವ ವಿದ್ಯುತ ಬಿಲ್ಲನ್ನು ಬಾಕಿ ಇರುವ ರೈತನ ಖಾತೆಗೆ ನೇರವಾಗಿ ಜಮಾ ಮಾಡಲು ಸಾಧ್ಯವಿದೆ. ಈ ಸಲಹೆಯನ್ನು ಹಿಂದಿನ ಇಂಧನ ಸಚಿವ ಡಿ ಕೆ ಶಿವುಕುಮಾರ ಸದನದಲ್ಲಿ ಒಪ್ಪಿಕೊಂಡಿದ್ದರು. ಅಲ್ಲದೇ ಗೊಡಾವನದಲ್ಲಿರುವ ಸಕ್ಕರೆಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ. ಸರಕಾರಗಳಿಗೆ ಇಚ್ಛಾಶಕ್ತಿ ಇದ್ದ್ದರೆ ರೈತನ ತೊಂದರೆ ದೂರ ಮಾಡಲು ಸಾಧ್ಯವಿದೆ ಎಂದರು.

  ಗಚ್ಚಿನ ಮಠದ ಶ್ರೀಗಳು, ರಕ್ಷಣಾ ವೇದಿಕೆ ಅಧ್ಯಕ್ಷ ಅಣ್ಣಾಸಾಬ ತೇಲಸಂಗ, ರವಿ ಪೂಜಾರಿ, ಬಿಜೆಪಿ ರೈತ ಮೋಚರ್ಾ ಅಧ್ಯಕ್ಷ ಶಂಕರ ಮಟೆಣ್ಣನವರ ಮಾತನಾಡಿದರು. ರೈತ ಸಂಘದ ತಾಲೂಕಾಧ್ಯಕ್ಷ ಮಹಾದೇವ ಮಡಿವಾಳ ಸೇರಿದಂತೆ ನೂರಾರು ರೈತ ಮುಖಂಡರಿದ್ದರು.