ಕೊಪ್ಪಳ 29: ಪೊಲೀಸರಿಗೆ ಶಿಸ್ತು ಮತ್ತು ದಕ್ಷತೆ ಮುಖ್ಯವಾಗಿದ್ದು, ಲಾ ಅಂಡ್ ಆರ್ಡರ್ ಕಂಟ್ರೋಲ್ ಮಾಡಿ ಎಂದು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿದರ್ೇಶಕರಾದ ಆಶಿತ್ ಮೋಹನ್ ಪ್ರಸಾದ್ ಅವರು ಕೆ.ಎಸ್.ಆರ್.ಪಿ ಗೆ ನೇಮಕಗೊಂಡ ಪ್ರಶಿಕ್ಷಣಾಥರ್ಿಗಳಿಗೆ ಸಲಹೇ ನೀಡಿದರು.
ಕೊಪ್ಪಳ ತಾಲೂಕಿನ ಮುನಿರಾಬಾದಿನ ಕೆ.ಎಸ್.ಆರ್.ಪಿ ತರಬೇತಿ ಶಾಲೆಯಲ್ಲಿ ಗುರುವಾರದಂದು ಆಯೋಜಿಸಲಾದ ಕನರ್ಾಟಕ ರಾಜ್ಯ ಮೀಸಲು ಪೊಲೀಸ್, ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾಥರ್ಿಗಳ "ನಿರ್ಗಮನ ಪಥಸಂಚಲನ" ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯಲ್ಲಿ ಕಳೆದ 10 ವರ್ಷಗಳಲ್ಲಿ ಅನೇಕ ಸೌಲಭ್ಯಗಳು ಇದ್ದಿಲ್ಲ. ಈಗ ಎಲ್ಲ ಬದಲಾಗಿದ್ದು, ಹೆಚ್ಚಿನ ವಿದ್ಯಾವಂತರು ಇಂದು ಪೊಲೀಸ್ ಇಲಾಖೆಗೆ ಸೇರುತ್ತಿದ್ದಾರೆ. ನಾವು ಮಾಡುವ ಕೆಲಸ ಜನರಿಗೆ ಹಿತವಾಗಿರಬೇಕು. ಲಾ ಅಂಡ್ ಆರ್ಡರ್ ಕಂಟ್ರೋಲ್ ಮಾಡಿ. ಪೊಲೀಸ್ ಫೋಸರ್್ ನಲ್ಲಿ ಫಿಟ್ನೇಸ್ ಕಡಿಮೆಯಾಗುತ್ತಿದ್ದು, ಯೋಗ್, ಭಯೋತ್ಪಾದನೆ, ಮಾನಸಿಕ ಖಿನ್ನತೆ ಬಗ್ಗೆ ಪ್ರಶಿಕ್ಷಾಥರ್ಿಗಳಿಗೆ ಬೋಧನೆ ಮಾಡಲಾಗಿದೆ. ಪೊಲೀಸ್ ಇಲಾಖೆಯಲ್ಲಿ ವಿಕ್ಲಿ ಆಫ್ ನೀಡುತ್ತಿದ್ದೇವೆ. ಮುನಿರಾಬಾದ್ ಕೆ.ಎಸ್.ಆರ್.ಪಿ. ತರಬೇತಿ ಶಾಲೆಯಲ್ಲಿ ಈ ಬಾರಿ 237 ಪ್ರಶಿಕ್ಷಣಾಥರ್ಿಗಳು ಯಶಸ್ವಿಯಾಗಿ ಬುನಾದಿ ತರಬೇತಿ ಪೂರೈಸಿ, ಇಂದಿನ ನಿರ್ಗಮನ ಪಥಸಂಚಲನದಲ್ಲಿ ಪಾಲ್ಗೊಂಡಿದ್ದಾರೆ. ಈ ಪ್ರಶಿಕ್ಷಣಾಥರ್ಿಗಳಲ್ಲಿ ಬೆಳಗಾವಿ ಜಿಲ್ಲೆಯಿಂದ 41, ವಿಜಯಪುರ ಜಿಲ್ಲೆಯಿಂದ 33, ಬಾಗಲಕೋಟೆ ಜಿಲ್ಲೆಯಿಂದ 25 ಮತ್ತು ರಾಜ್ಯದ ಇತರೆ ಜಿಲ್ಲೆಗಳಿಂದ 135 ಪ್ರಶಿಕ್ಷಣಾಥರ್ಿಗಳಿದ್ದು, ಹೆಚ್ಚಿನವರು ಗ್ರಾಮೀಣ ಹಿನ್ನಲೆಯವರಾಗಿದ್ದಾರೆ. ಹೆಚ್ಚಿನವರು ಅಂದರೆ 135 ಪ್ರಶಿಕ್ಷಣಾಥರ್ಿಗಳು ಪದವೀಧರರಾಗಿದ್ದಾರೆ. 12 ಸ್ನಾತಕೊತ್ತರ, 80 ಪದವಿ ಪೂರ್ವ ಹಾಗೂ 10 ಪ್ರಶಿಕ್ಷಣಾಥರ್ಿಗಳು ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯನ್ನು ಹೊಂದಿದ್ದಾರೆ. ಅಲ್ಲದೇ ಓರ್ವ ಎಂ.ಬಿ.ಎ ವಿದ್ಯಾರ್ಹತೆ ಹೊಂದಿದ್ದಾರೆ.
ಆರು ದಶಕಗಳ ವಿಶಿಷ್ಟ ಇತಿಹಾಸದೊಂದಿಗೆ ಕನರ್ಾಟಕ ರಾಜ್ಯ ಪೊಲೀಸ್ ಅವಿಭಾಜ್ಯ ಅಂಗವಾಗಿ ಪ್ರಹಾರದಳವಾಗಿ ರೂಪುಗೊಂಡಿರುವ ಕೆ.ಎಸ್.ಆರ್.ಪಿ. ಗೆ ನೇಮಕಗೊಂಡಿರುವ ಎಲ್ಲಾ ಪ್ರಶಿಕ್ಷಣಾಥರ್ಿಗಳಿಗೆ ಉತ್ತಮ ಹೊರಾಂಗಣ ಮತ್ತು ಒಳಾಂಗಣ ತರಬೇತಿ ನೀಡಲಾಗಿದೆ. ಹೊರಾಂಗಣ ತರಬೇತಿಯ ಭಾಗವಾಗಿ ಮುಖ್ಯವಾಗಿ ದೈಹಿಕ ತರಬೇತಿ (ಪಿ.ಟಿ.), ಶಸ್ತ್ರರಹಿತ ಪದಾತಿ ಕವಾಯತು (ಫುಟ್ ಡ್ರಿಲ್), ಶಸ್ತ್ರ ಸಹಿತ ತರಬೇತಿ (ಆಮ್ಸರ್್ ಡ್ರಿಲ್), ವಿವಿಧ ಮತ್ತು ಆಧುನಿಕ ಆಯುಧಗಳ ಬಳಕೆ ಮತ್ತು ನಿರ್ವಹಣೆ (ವೆಪನ್ ಟ್ರೈನಿಂಗ್) ಲಾಠಿ ಕವಾಯತು, ಯುದ್ಧ ಕೌಶಲ್ಯ (ಫೀಲ್ಡ್ ಕ್ರಾಫ್ಟ್), ಅಶ್ರುವಾಯು ಪ್ರಯೋಗ, ಗುಂಪು ನಿಯಂತ್ರಣ, ಅಡೆತಡೆಗಳು (ಆಬ್ಸ್ಟಿಕಲ್ಸ್), ಅನ್ ಆರ್ಮಡ್ ಕಾಂಬ್ಯಾಟ್/ ಕರಾಟೆ, ರೋಡ್ ವಾಕ್ ಅಂಡ್ ರನ್, ರೂಟ್ ಮಾಚರ್್, ಈಜು, ನೈಟ್ಪೆಟ್ರೋಲಿಂಗ್, ಆಂಬುಶ್, ರೈಡ್, ಸಚರ್್, ಪಹರೆ ಕರ್ತವ್ಯ, ಸೆರಮೋನಿಯಲ್ ಕವಾಯತು ಇವುಗಳೊಂದಿಗೆ ವಿಪತ್ತು ನಿರ್ವಹಣೆ ಮತ್ತು ಪ್ರಥಮ ಚಿಕಿತ್ಸೆಯ ಬಗ್ಗೆ ತಿಳುವಳಿಕೆ ನೀಡಲಾಗುವುದು. ಮೊಟ್ಟ ಮೊದಲ ಬಾರಿಗೆ ನುರಿತ ಪ್ರಶಿಕ್ಷಕರಿಂದ ಎರೋಬಿಕ್ಸ್ ಮತ್ತು ಜುಂಬಾ ಪ್ರಾಥಮಿಕ ತರಬೇತಿ ನೀಡಲಾಗಿದೆ. ಒಳಾಂಗಣ ತರಬೇತಿಯ ಭಾಗವಾಗಿ ನುರಿತ ವೃತ್ತಿನಿರತ ಮತ್ತು ನಿವೃತ್ತ ಪೊಲೀಸ್ ಅಧಿಕಾರಿಗಳಿಂದ, ನ್ಯಾಯವಾದಿಗಳಿಂದ, ವಿಷಯತಜ್ಞರಿಂದ ಕಾನೂನಿನ ಮತ್ತು ಇತರ ವಿಷಯಗಳ ಕುರಿತು ವಿಶೇಷವಾಗಿ ಭಾರತ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆ, ಸಾಕ್ಷ್ಯ ಕಾಯಿದೆ, ವಿಶೇಷ ಮತ್ತು ಸ್ಥಳೀಯ ಕಾನೂನುಗಳು, ಮಾನವ ಹಕ್ಕುಗಳು, ಪೊಲೀಸ್ ಮತ್ತು ಸಮಾಜ, ಸಂಘಟನೆ, ಆಡಳಿತಾತ್ಮಕ ಮತ್ತು ಸೇವಾ ವಿಷಯಗಳು ಹಾಗೂ ಸಶಸ್ತ್ರ ಪೊಲೀಸ್ನಲ್ಲಿ ಕಂಪ್ಯೂಟರ್, ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಕುರಿತು ಉಪನ್ಯಾಸ ನೀಡಲಾಗಿದೆ. ಈ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲಾ ಪ್ರಶಿಕ್ಷಣಾಥರ್ಿಗಳು ತಮ್ಮ ಬುನಾದಿ ತರಬೇತಿಯನ್ನು ಪಡೆದುಕೊಂಡಿರುವ ವೃತ್ತಿ ಕೌಶಲ್ಯಗಳನ್ನು ಅಳವಡಿಸಿಕೊಂಡು ಹಾಗೂ ವೃದ್ಧಿಸಿಕೊಂಡು ಸಾರ್ವಜನಿಕ ಸೇವೆಯನ್ನು ಅರ್ಪಣಾ ಮನೋಭಾವದಿಂದ ನಿರ್ವಹಿಸಿ ವೃತ್ತಿಜೀವನದಲ್ಲಿ ಯಶಸ್ವಿಯಾಗಿ ಎಂದು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿದರ್ೇಶಕರಾದ ಆಶಿತ್ ಮೋಹನ್ ಪ್ರಸಾದ್ ಅವರು ಹೇಳಿದರು.
ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗ ರಾಜನ್, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್, ಮುನಿರಾಬಾದ್ ತೋಟಗಾರಿಕೆ ಇಲಾಖೆ ಕಾಲೇಜಿನ ಡೀನ್ ಗಂಗಾಧರಪ್ಪ, ಪೊಲೀಸ್ ಅಧಿಕಾರಿ ಕೆ.ಆರ್. ನಂದಿನಿ ಸೇರಿದಂತೆ 315 ಜನ ಪ್ರಶಿಕ್ಷಣಾಥರ್ಿಗಳು ಭಾಗಿಯಾಗಿದ್ದರು.