ನಗು ನಗುತ್ತ ಬಾಳುವುದೇ ಶಿಕ್ಷಣ: ತಹಶೀಲ್ದಾರ ಮುಂಜೆ
ರಾಯಬಾಗ 10: ಮಗುವಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಿದರೆ ಪ್ರಪಂಚವನ್ನು ಚೆನ್ನಾಗಿ ಅರಿಯಲು ಸಾಧ್ಯವಾಗುತ್ತದೆ ಎಂದು ತಹಶೀಲ್ದಾರ ಸುರೇಶ ಮುಂಜೆ ಹೇಳಿದರು.
ಗುರುವಾರ ಸಾಯಂಕಾಲ ತಾಲೂಕಿನ ಖೈರವಾಡಿಯ ಹಾಲಸಿದ್ದೇಶ್ವರ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿದ್ಯಾರ್ಥಿಗಳಿಂದ ತಂದೆತಾಯಿಗಳ ಪಾದ ಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರು ಇಂದು ಅನೇಕ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ನಗು ನಗುತ್ತ ಬಾಳುವುದೇ ಶಿಕ್ಷಣ ಎಂದರು.ಬಿಇಒ ಬಸವರಾಜಪ್ಪ ಆರ್. ಮಾತನಾಡಿ, ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ನೀಡಬೇಕೆಂದರು. ಪರಮಾನಂದವಾಡಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು.ಸಂಸ್ಥೆಯ ಅಧ್ಯಕ್ಷ, ವಕೀಲರಾದ ಆರ್.ಎಚ್.ಗೊಂಡೆ ಅಧ್ಯಕ್ಷತೆಯನ್ನು ವಹಿಸಿದ್ದರು.ಚಿಕ್ಕೋಡಿ ಅಬಕಾರಿ ನೀರೀಕ್ಷಕ ರಾಜು ಗೊಂಡೆ, ವಕೀಲರ ಸಂಘದ ಅಧ್ಯಕ್ಷ ಪಿ.ಎಮ್.ದರೂರ, ಗ್ರಾ.ಪಂ.ಅಧ್ಯಕ್ಷೆ ಮಹಾದೇವಿ ದೀಪಾಳೆ, ಸಿ.ಆರಿ್ಪ ಅನೀಲ ಸುತಾರ, ಶಿಕ್ಷಕ ಬಿ.ಎಲ್.ಘಂಟಿ, ರಾಜು ಕುರಾಡೆ, ರಮೇಶ ಗೊಂಡೆ, ಅಂಬರೀಶ ಬ್ಯಾಕೂಡೆ, ಸತ್ಯಪ್ಪ ಗೊಂಡೆ, ಕುಮಾರ ಘೇನಾನಿ, ಯಾಸಿನ್ ಮೋಮಿನ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರು ಇದ್ದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.