ರೂ3.60 ಲಕ್ಷದ ಕಾಮಗಾರಿಗೆ ಭೂಮಿ ಪೂಜೆ

ಲೋಕದರ್ಶನ ವರದಿ

ರಾಮದುರ್ಗ: ನಿರ್ಮಿತಿ   ಕೇಂದ್ರ ಮತ್ತು ಭೂ ಸೇನಾ ನಿಗಮಗಳು ಗುಣಾತ್ಮಕ ಕಾಮಗಾರಿ ನಿರ್ವಹಣೆ ಮಾಡುವದರಿಂದಾ ಸಾರ್ವಜನಿಕ ರಂಗದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯ ಇದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಅಭಿಪ್ರಾಯ ವ್ಯಕ್ತಪಡಿಸಿದರು.

  ಸ್ಥಳೀಯ ಶ್ರೀಮತಿ ಐ ಎಸ್ ಯಾದವಾಡ ಪ್ರಥಮ ಧರ್ಜೆ  ಮಾಹಾವಿದ್ಯಾಲಯದಲ್ಲಿ ಸುಮಾರು  ರೂ 3.60 ಲಕ್ಷದ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿ ಮಾತನಾಡಿದ ಅವರು ಹಿಂದೆ ನಿರ್ಮಿತಿ  ಕೇಂದ್ರ ಮತ್ತು ಭು ಸೇನಾ ನಿಗಮಗಳ ಕಾಮಗಾರಿಗಳ ಬಗ್ಗೆ ಜನರಿಗೆ ಅಪಾರ ಗೌರವ ಇತ್ತು, ಆದರೆ ಇಂದು ಅಂತಹ 

ಗೌರವ ಸಾರ್ವಜನಿಕರಲ್ಲಿ  ವಿರಳ ಹಾಗಾಗಿ ಆ ಗೌರವವನ್ನು ಮರಳಿ ಪ್ರತಿಷ್ಠಾಪನೆ ಮಾಡುವಲ್ಲಿ ಅವಳಿ ಇಲಾಖೆಗಳು ಪ್ರಾಮಾಣಿಕ ಪ್ರಯತ್ನ ಮಾಡವದು ಇಂದಿನ ದಿನಗಳಿಲ್ಲಿ ಅವಶ್ಯವಿದೆ ಎಂದು ಅವರು ಸಲಹೆ ನೀಡಿದರು.

  ಮಹಾವಿದ್ಯಾಲಯದ ಸಿಬ್ಬಂದಿಯು ಕಾಮಗಾರಿಯ ಬಗ್ಗೆ ನಿಗಾ ವಹಿಸಿ ಗುಣಾತ್ಮಕ ಕಾಮಗಾರಿ ಯಾಗಲು ಶ್ರಮಿಸಬೇಕಲ್ಲದೆ ಒಂದು ವೇಳೆ ಕಳಪೆ ಕಾಮಗಾರಿ ಎಂದು ಕಂಡು ಬಂದಲ್ಲಿ ತಮ್ಮ ಗಮನಕ್ಕೆ ತರಲು ಅವರು ಮಹಾವಿದ್ಯಾಲಯದ ಸಿಬ್ಬಂದಿಗೆ ತಿಳಿಸಿದರು. 

   ಶ್ರೀಮತಿ ಐ ಎಸ್ ಯಾದವಾಡ ಮಹಾವಿದ್ಯಾಲಯದ ಪ್ರಾಚಾರ್ಯ ಆನಂದ ಲಾಳಸಂಗಿ ಡಾ. ಮಹಾಂತೇಶ ಹೊಳಿಮಠ. ಪ್ರೋ. ಮಂಜುಳಾ ಕಣವಿ, ನಿರ್ಮಿತಿ  ಕೇಂದ್ರದ ಸಹಾಯಕ ಅಭಿಯಂತರರು ಉಪಸ್ಥಿತರಿದ್ದರು.