ಕೂಲಿಕಾರ್ಮಿಕರ ಮೇಲೆ ನಡೆದಿರುವ ದೌರ್ಜನ್ಯ ಖಂಡಿಸಿ ಜ, 27 ರಂದು ್ಲ ಬ್ರಹತ್ ಪ್ರತಿಭಟನೆ
ಮುದ್ದೇಬಿಹಾಳ 25: ವಿಜಯಪುರ ನಗರದಲ್ಲಿರುವ ಇಟ್ಟಿಗೆ ಭಟ್ಟಿಯಲ್ಲಿ ಕೂಲಿಕಾರ್ಮಿಕರ ಮೇಲೆ ನಡೆದಿರುವ ದೌರ್ಜನ್ಯ ಖಂಡಿಸಿ ಜ, 27 ಸೋಮವಾರದಂದು ತಾಲೂಕಿನ ವಿವಿಧ ದಲಿತಪರ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಬ್ರಹತ್ ಪ್ರತಿಭಟನೆ ನಡೆಸುವ ಮೂಲಕ ತಹಶಿಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ತಾಲೂಕಾ ದಲಿತ ಮುಖಂಡ ತಿಪ್ಪಣ್ಣ ದೊಡಮನಿ ಕರೇ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಟ್ಟಿಗೆ ಭಟ್ಟಿಯೊಂದರ ಮಾಲೀಕ ತನ್ನ ಸಂಗಡಿಗರೊಂದಿಗೆ ಜೊತೆಗೂಡಿ ಬಡ ಕಾರ್ಮಿಕರ ಮೇಲೆ ನಡೆಸಿರುವ ಹಲ್ಲೆಯು ಅತ್ಯಂತ ಅಮಾನವೀಯವಾಗಿದ್ದು ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಹೇಯ ಕೃತ್ಯವಾಗಿದೆ. ಆದರೇ ಎಲ್ಲೋ ಹಸುವಿನ ಕೆಚ್ಚೆಲು ಕೋಯ್ದ ಘಟನೆಗೆ ಪ್ರತಿಭಟನೆ ನಡೆಸಿ ಸ್ವಾಭಿಮಾನದ ಮಾತು ಪ್ರದರ್ಶಿಸುವ ಹಿಂದೂಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ನಮ್ಮ ಜಿಲ್ಲೆಯಲ್ಲಿಯೇ ಇಟ್ಟಿಗೆ ಭಟ್ಟಿಯಲ್ಲಿ ಕೂಲಿಕಾರ್ಮಿಕನಾಗಿ ದುಡಿದು ಜೀವನ ನಡೆಸುತ್ತಿರುವ ನಿಜವಾದ ಹಿಂದೂ ದಲಿತ ಕುಟುಂಭದ ಕೂಲಿ ಕಾರ್ಮಿಕ ಮೇಲೆ ನಡೆದಿರುವುದು ಇಡಿ ಜಗಜ್ಜಾಹಿರುಗೊಂಡಿದ್ದರೂ ಹಿಂದೂ ಸಂಘಟನೆಗಳ ಮುಖಂಡರಿಗಾಗಲಿ ಅಥವಾ ಹಿಂದೂ ಎಂದು ಪದ ಬಳಸುವ ರಾಜಕೀಯ ನಾಯಕರಿಗಾಗಲಿ ಹಿಂದೂ ಸಂಘಟನೆಗಳ ಮುಖಂಡರಾಗಲಿ ದಲಿತ ಕಾರ್ಮಿಕನ ಮೇಲೆ ದೌರ್ಜನ್ಯ ನಡೆದಿರುವುದು ಕಣ್ಣಿಗೆ ಕಾಣಿಸಲಿಲ್ಲವೇ.? ಧೌರ್ಜನ್ಯಕ್ಕೋಳಗಾದ ಕಾರ್ಮಿಕನೂ ಸಹಿತ ಹಿಂದೂ ಎಂಬುದು ಇವರಿಗೆ ಅರಿವಿಲ್ಲವೇ.? ಇವರೇಲ್ಲ ನಿಜವಾದ ಹಿಂದೂ ಹೋರಾಟಗಾರರೇ ಯಾರೋ ಒಬ್ಬ ರಾಜಕೀಯ ವ್ಯಕ್ತಿಯ,ಯಾವೂದೋ ಒಂದು ಪಕ್ಷದ ಅಣತೆಯಂತೆ ಅವರನ್ನು ಓಲೈಸಿಕೊಳ್ಳಲು ಹಿಂಧೂ ಟ್ಯಾಗ ಬಳಸಿಕೊಂಡು ಹೋರಾಟ ಮಾಡುತ್ತಾರೆ ವಿನಃ ನಿಜವಾದ ಹಿಂದೂಗಳ ರಕ್ಷಣೆಗೆ ನಿಲ್ಲುವುವರಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಸಧ್ಯ ಇಟ್ಟಿಗೆ ಭಟ್ಟಿಯಲ್ಲಿ ಕೂಲಿಕಾರ್ಮಿಕರ ಮೇಲೆ ನಡೆದಿರುವ ‘ದೌರ್ಜನ್ಯ ನಡೆಸಿದವರ ಆಸ್ತಿ ಮುಟ್ಟುಗೋಲ ಹಾಕಬೇಕು ಹಾಗೂ ರೌಡೀಶೀಟರ್ ಮಾಡಿ ಗಡಿಪಾರು ಮಾಡಬೇಕು. ಈ ಕೃತ್ಯದಲ್ಲಿ ಭಾಗಿಯಾದ ಹಲ್ಲೆಕೋರರಿಗೆ ಕಠಿಣ ಶಿಕ್ಷೆ ಆಗುವಂತೆ ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕು. ಆರೋಪಿಗಳಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಟ್ಟಿಗೆ ಭಟ್ಟಿಯನ್ನು ಮುಟ್ಟುಗೋಲು ಹಾಕಿಕೊಂಡು ಹಲ್ಲೆಗೂಳಗಾದ ಕಾರ್ಮಿಕರಿಗೆ ಯೋಗ್ಯ ಪರಿಹಾರ ಒದಗಿಸಬೇಕು ಎಂದು ನಮ್ಮ ಒತ್ತಾಯವಾಗಿದೆ ಕಾರಣ ಈ ನ್ಯಾಯಯುತ ಹೋರಾಟದಲ್ಲಿ ಎಲ್ಲ ಪ್ರಗತಿಪರ ಚಿಂತಕರು ಹೋರಾಟಗಾರರು, ಸಂಘ ಸಂಸ್ಥೆಯ ಕಾರ್ಮಿಕರು ಮುಖಂಡರು ದಲಿತ ಪರ ಸಂಘಟನೆಗಳ ಮುಖಂಡರು ಹೆಚ್ಚಿನ ಸಂಖ್ಯೆ ಬಾಗವಹಿಸಬೇಕು ಎಂದರು.
ಈ ವೇಳೆ ಚನ್ನಪ್ಪ ವಿಜಯಕರ, ಬಾಲಚಂದ್ರ ಹಲ್ಲೂರ, ಡಿ ಬಿ ಮೂದೂರ, ಹುಲಗಪ್ಪ ನಾಗರಬೆಟ್ಟ, ಮಂಜುನಾಥ ಪೂಜಾರಿ, ಪರುಶುರಾಮ ನಾಲತವಾಡ, ಭಗವಂತ ಕಬಾಡೆ, ಪ್ರಶಾಂತ ಕಾಳೆ, ಶಿವು ನಾಲತವಾಡ ಸೇರಿದಂತಗೆ ಹಲವರು ಇದ್ದರು.