ಲೋಕದರ್ಶನ ವರದಿ
ಕುರುಗೋಡು 26: ಭಕ್ತರಿಗೆ ಸಂಸ್ಕೃತಿ, ಸಂಸ್ಕಾರವನ್ನು ಕರುಣಿಸಿ ತಮ್ಮ ದಿವ್ಯವಾಣಿಯಿಂದ ಹಲವಾರು ಪವಾಡಗಳನ್ನು ಮಾಡಿ, ಜನರ ಕಷ್ಟ ಸುಖಗಳಿಗೆ ಸ್ಪಂದಿಸಿದ ಮಹನ್ ಚೇತನರು ಚಿದಾನಂದ ತಾತ ಎಂದು ಎಮ್ಮಿಗನೂರಿನ ಹಂಪಿ ಸಾವಿರ ದೇವರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಪಟ್ಟಣ ಸಮೀಪದ ಕ್ಯಾದಿಗೆಹಾಳ್ ಗ್ರಾಮದ ಬೃಹನ್ಮಠದಲ್ಲಿ ಸದ್ಭಕ್ತ ಮಂಡಳಿಯವರು ಬುಧವಾರ ಹಮ್ಮಿಕೊಂಡಿದ್ದ ಪರಮ ಪೂಜ್ಯ ಚಿದಾನಂದ ತಾತನವರ 6ನೇ ವರ್ಷದ ಪುಣ್ಯ ಸ್ಮರಣೋತ್ಸವ, ಸಾಮೂಹಿಕ ವಿವಾಹಗಳು, ತಾತನವರ ಲೀಲಾಮೃತ ಎಂಬ ಕೃತಿ ಬಿಡುಗಡೆ ಹಾಗೂ ಧರ್ಮಜಾಗೃತಿ ಸಮಾರಂಭದ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
ಯಾವ ಮನುಷ್ಯ ತನ್ನ ಬಾಹ್ಯ ಮತ್ತು ಅಂತರ ಇಂದ್ರಿಯ ಸುಖಗಳನ್ನು ತೊರೆದು ದೈವ ಭಕ್ತಿಯಲ್ಲಿ ಲೀನವಾಗುತ್ತಾರೋ ಅವರೇ ಶರಣರು, ಮಹತ್ಮರಾಗುತ್ತಾರೆ. ಇಂತಹವರಲ್ಲಿ ಚಿದಾನಂದತಾತನವರು ಒಬ್ಬರೂ, ಆಗಾಗಿ ಮನುಷ್ಯ ಜೀವನದಲ್ಲಿ ನೆಮ್ಮದಿ, ಸುಖ, ಸಂತೋಷ ಸಾರ್ಥಕತೆ ಕಾಣಬೇಕಾದರೇ ಭಗವಂತನ ನಾಮಸ್ಮರಣೆ ಮಾಡಬೇಕು. ಆಗ ಮಾತ್ರ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದರು.
ತೆಕ್ಕಲಕೋಟೆಯ ಕಂಬಾಳಿಮಠದ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ಧರ್ಮಸಭೆಯ ದಿವ್ಯ ಸಾನಿಧ್ಯ ವಹಿಸಿದ್ದರು. ಬುಕ್ಕಸಾಗರದ ಕರಿಸಿದ್ದೇಶ್ವರ ಮಠದ ಕರಿಸಿದ್ದೇಶ್ವರ ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಾಮೂಹಿಕ ವಿವಾಹದಲ್ಲಿ ನಾಲ್ಕು ಜೋಡಿಗಳು ನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಕ್ಯಾದಿಗೆಹಾಳ್ ಬೃಹನ್ಮಠದ ಪರಮ ಪೂಜ್ಯ ಶ್ರೀ ಗಂಗಾಧರ ತಾತನವರು ಶುಭಹಾರೈಸಿದರು.
ನಂತರ ಎಲ್ಲಾ ಮಹಾಪೂಜ್ಯರ ನೇತೃತ್ವದಲ್ಲಿ ನಿವೃತ್ತ ಪ್ರಾಚಾರ್ಯರು ಬುಕ್ಕನಟ್ಟಿ ಶ್ರೀ ಕರಿಬಸಯ್ಯ ಹಿರೇಮಠರವರ ವಿರಚಿತ ಶ್ರೀ ಚಿದಾನಂದ ತಾತನವರ ಲೀಲಾಮೃತ ಎಂಬ ಕೃತಿ ಲೋಕಾರ್ಪಣೆಗೊಂಡಿತು. ಈ ಕೃತಿಯ ಕುರಿತು ನಿವೃತ ಪಾಚಾರ್ಯರು ಪರಮೇಶ್ವರ ಸಾಲಿಮಠ ವಿಮಶರ್ೆ ಮಾಡಿದರು.
ಪ್ರಾರಂಭದಲ್ಲಿ ಈಶ್ವರ ದೇವಸ್ಥಾನದಿಂದ ತಾತನವರ ಮೂತರ್ಿ, ಪೂರ್ಣಕುಂಭ, ಸುಮಂಗಲೆಯರಿಂದ ಕಳಾಸ, ಭಜನೆ, ವಾಧ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೃಹನ್ಮಠದವರೆಗೆ ಅದ್ದೂರಿ ಮೆರವಣಿಗೆ ಜರುಗಿತು. ಬೆಳಿಗ್ಗೆಯಿಂದ ತಾತನ ಕತರ್ೃ ಗದ್ದುಗೆಗೆ ರುದ್ರಾಭಿಷೇಕ, ಗಂಗೆ ಪೂಜೆ, ಗಣಪತಿ ಪೂಜೆ ಹಾಗೂ ವಿಧಿವಿಧಾನಗಳಿಂದ ಪೂಜೆ ನಡೆದವು.
ವೇದಿಕೆಯಲ್ಲಿ ಕುರುಗೋಡಿನ ಹಾವಿಗೆ ಮಠದ ರಾಘವಾಂಕ ಶಿವಾಚಾರ್ಯ ಮಹಾಸ್ವಾಮಿಗಳು, ಶಾನವಾಸಪುರದ ಪ್ರಸನ್ನ ಮಲ್ಲಿಕಾಜರ್ುನ ಮಹಾಸ್ವಾಮಿಗಳು, ಡಿ.ನಾಗೇನಹಳ್ಳಿಯ ಶರಣಯ್ಯ ಶರಣರು, ಕಲ್ಲುಕಂಭದ ರುದ್ರಮುನಿ ತಾತ, ಕಂಪ್ಲಿಯ ಶಶಿಧರ ಶಾಸ್ತ್ರಿಗಳು ಹಾಗೂ ಇನ್ನತರ ಶ್ರೀಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕ್ಯಾದಿಹೆಹಾಳ್, ಕಲ್ಲುಕಂಭ, ಗುಂಡಿಗನೂರು, ಲಕ್ಷ್ಮಿಪುರ, ಕೆರೆಕೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.