ಕುರುಗೋಡು: ವಿಜೃಂಭಣೆಯಿಂದ ಜರುಗಿದ ನಾರಾಯಣ ಸ್ವಾಮಿ ಮೆರವಣಿಗೆ

ಲೋಕದರ್ಶನ ವರದಿ

ಕುರುಗೋಡು 09: ಪಟ್ಟಣ ಸಮೀಪದ ಯಲ್ಲಾಪುರ ಗ್ರಾಮದಲ್ಲಿ ಬಣಜಿಗ ಸಮುದಾಯದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಯೋಗಿ ನಾರೇಯಣ ಸ್ವಾಮಿಯ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

ಈ ಸಂದರ್ಭದಲ್ಲಿ ಸಮುದಾಯದ ಮುಖಂಡ ಅಂಚೆ ಅಂಜಿನಪ್ಪ ಮಾತನಾಡಿ, ಶ್ರೀ ಯೋಗಿ ನಾರೇಯಣ ಸ್ವಾಮಿಜಿಯವರು ಅವತಾರ ಪುರಷರು ತಮ್ಮ ಆದರ್ಶ ಜೀವನ ಹಾಗೂ ಆಧ್ಯಾತ್ಮಿಕ ವಿಚಾರಧಾರೆಯೊಂದಿಗೆ ಸಮಾಜ ಸೇವೆಯ ದೀಕ್ಷೆ ತೊಟ್ಟು ನವ ಸಮಾಜದ ನಿಮರ್ಾಣಕ್ಕಾಗಿ ಹಂಬಲಿಸಿದ ಕ್ರಾಂತಿ ಪುರಷ. ಸರಳತೆ, ಭವಿಷ್ಯಜ್ಞಾನಗಳಿಂದ ಮಹಾ ಮಾನವತಾವದಿ ಎಂದು ಹೆಸರಾಗಿದ್ದರು. ಇಂತಹವರ ಆದರ್ಶಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಆಗ ಮಾತ್ರ ನವ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ಮುತೈದೆಯರ ಕಳಸದೊಂದಿಗೆ ಟ್ರ್ಯಾಕ್ಟರ್ನಲ್ಲಿ ಸ್ವಾಮಿಜಿಯವರ ಭಾವಚಿತ್ರದೊಂದಿಗೆ ಗ್ರಾಮದ ಪಾಂಡುರಂಗ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಈಶ್ವರ ದೇವಸ್ಥಾನದ ಹತ್ತಿರ ಸಮಾರೋಪಗೊಂಡಿತು.

ಈ ಸಂದರ್ಭದಲ್ಲಿ ಅಂಚೆ ವೆಂಕಟೇಶ್, ತಿಪ್ಪೇಸ್ವಾಮಿ, ಉಮೇಶ್, ಎರ್ರೆಪ್ಪ, ಜಡೇಪ್ಪ, ಜಗದೀಶ್, ಮೌಲಾ, ಪಾಂಡು, ಬಸವ, ಗಣೇಶ್, ರಾಮ, ರಾಜೇಶ್ವರಿ, ಮಹಾದೇವಿ ಹಾಗೂ ಇನ್ನಿತರರು ಇದ್ದರು.