ಮೂಡಲಗಿ 21: ಪ್ರಾಥಮಿಕ ಶಾಲಾ ಅಧ್ಯಯನದಲ್ಲಿ ಮಕ್ಕಳಿಗೆ ಜ್ಞಾನದ ಜೊತೆಗೆ ನಮ್ಮ ಪೂವರ್ಿಕರಿಂದ ಬೆಳೆದು ಬಂದ ಉಡುಗೆ ತೊಡುಗೆ ಮತ್ತು ಸಂಪ್ರದಾಯ ಹಾಗೂ ಸಂಸ್ಕೃತಿ ಅರಿವು ಮೂಡಿಸುವ ಚಟುವಟಿಕೆಗಳು ಶಿಕ್ಷಣ ರಂಗದಲ್ಲಿ ಅವಶ್ಯವಿದೆ. ಇಂದು ಆಧುನಿಕ ಜೀವನದ ಶೈಲಿಯಿಂದ ಮತ್ತು ಅನ್ಯದೇಶಿಯ ಉಡುಗೆಯಿಂದ ದೇಶಿಯ ಸಂಪ್ರದಾಯಗಳ ಮರೆಮಾಚುತ್ತಿದ್ದು ಅವುಗಳ ಅರಿವನ್ನು ಪ್ರಾಥಮಿಕ ಶಾಲಾ ಶಿಕ್ಷಣದಿಂದಲೇ ಮೂಡಿಸುವುದು ಅವಶ್ಯವಿದೆ ಎಂದು ರೂರಲ್ ಡೆವಲಪ್ಮೆಂಟ್ ಸೊಸೈಟಿ ನಿದರ್ೇಶಕರಾದ ಪೂಜಾ ಪಾಶರ್ಿ ಅಭಿಪ್ರಾಯಪಟ್ಟರು
ಅವರು ಸ್ಥಳೀಯ ವಿದ್ಯಾನಿಕೇತನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಮಕ್ಕಳಲ್ಲಿ ಗ್ರಾಮೀಣ ಸಂಸ್ಕೃತಿಯ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿಕೊಂಡು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ನಮ್ಮ ಹಳ್ಳಿಗಳಲ್ಲಿ ಅಜ್ಜಿಯರು ತೊಡುವ ಸೀರೆ, ಕಿವಿಯೋಲೆ, ಬಳೆ, ಮೂಗುತಿ, ಕಾಲುಂಗರ, ಡಾಬು, ಸರ ಮಹಿಳೆಯರ ಅಲಂಕಾರದ ರೂಪವಾದರೆ. ಪುರುಷರು ದೋತ್ರ, ಶೆಟರ್್ ಪೇಠಾ ಟೋಪಿ, ನಿಲಂಗಿ, ಇನ್ನಿತರ ಉಡುಗೆಗಳು ಅವರ ಸೌಂದರ್ಯ ಪ್ರತೀಕವಾಗಿದ್ದವು ಅವುಗಳು ಇಂದು ಪೂರ್ಣ ಪ್ರಮಾಣದಲ್ಲಿ ಮಾಯವಾಗುತ್ತಿದ್ದು ಅದರ ಮಹತ್ವ ಮಕ್ಕಳಲ್ಲಿ ಬೆಳಸುವುದು ಅವಶ್ಯವಿದೆ ಎಂದರು.
ವಿದ್ಯಾಥರ್ಿ ಪಾಲಕರಾದ ಸಿದ್ದಪ್ಪ ವ್ಯಾಪಾರಿ ಮಾತನಾಡಿ ವಿದ್ಯಾಥರ್ಿಗಳಲ್ಲಿ ಆಧುನಿಕತೆಯ ಜೊತೆಗೆ ಗ್ರಾಮೀಣ ಕಲೆ ಸಾಹಿತ್ಯ ಸಂಸ್ಕೃತಿಯನ್ನು ತಿಳಿಸುವ ಶಿಕ್ಷಣ ಇಂದಿನ ಮಕ್ಕಳಿಗೆ ಅವಶ್ಯವಿದೆ ಎಂದು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಂತೋಷ ತಮ್ಮಣ್ಣಾ ಪಾಶರ್ಿ ವಹಿಸಿಕೊಂಡು ಮಾತನಾಡಿ, ಸಮಾಜದಲ್ಲಿ ಗೌರವವನ್ನು ತಂದುಕೊಡುವ ಸಂಪ್ರದಾಯ ನಮ್ಮದು ಅದನ್ನು ಇಡೀ ವಿಶ್ವವೇ ಗೌರವಿಸುತ್ತದೆ ಅಂತಹ ಸಂಸ್ಕೃತಿಯನ್ನು ನಮ್ಮ ಮಕ್ಕಳಲ್ಲಿ ಹಿರಿಯರ ಆದರ್ಶಗಳನ್ನು, ಸಮಾಜದ ಕರ್ತವ್ಯಗಳನ್ನು ಬೆಳಸುವದು ಅವಶ್ಯವಿದೆ ಅಲ್ಲದೇ ಉಡುಗೆ ತೊಡೆಗೆ ಮತ್ತು ಮಹಿಳೆ & ಪುರುಷರು ಧರಿಸುವ ಆಭರಣಗಳ ಬಗ್ಗೆ ತಿಳಿವಳಿಕೆ ನೀಡಬೇಕಾಗಿದೆ ಎಂದರು. ಶಾಲಾ ಮಕ್ಕಳು ಗ್ರಾಮೀಣ ಜನಪದ ಹಾಡುಗಳು, ಬೀಸುವ ಹಾಡುಗಳು, ಡೋಳ್ಳಿನ ಪದಗಳು, ಗೀಗೀ ಪದಗಳನ್ನು ಹಾಡಿ ರಂಜಿಸಿದರು.
ಕಾರ್ಯಕ್ರಮದಲ್ಲಿ ಪಾಲಕರಾದ ಲಗಮಪ್ಪ ಮಾಳ್ಯಾಗೋಳ ಪ್ರಧಾನಗುರುಗಳಾದ ಅಶೋಕ ಬಸಳಿಗುಂದಿ ಶಿಕ್ಷಕರಾದ ಆರ್.ಎಸ್. ಮಡಿವಾಳರ, ಅಶ್ವೀನಿ ಬಡಿಗೇರ, ಆಯೀಷಾ ಥರಥರಿ, ಭಾರತಿ ಚಂದರಗಿ, ಜ್ಯೋತಿ ಸುಬ್ರಾವಗೋಳ, ರಾಜೇಶ್ವರಿ ನಾಯಕ,ಅಶ್ವೀನಿ ಕಂಕಣವಾಡಿ, ಮಮತಾ ಕುರಬೇಟ ಭಾಗವಹಿಸಿದ್ದರು. ಶಿಕ್ಷಕರಾದ ಭೂಮಿಕಾ ಪಾಶ್ಚಾಪೂರ, ಸ್ವಾಗತಿಸಿ ನಿರೂಪಿಸಿದರು.